Published on: June 16, 2023

ಲೆವೆಲ್ 4+ ಟ್ರಾನ್ಸಿಶನ್ ಮತ್ತು ಹಸಿರು ವಿಮಾನ ನಿಲ್ದಾಣಗಳ ಮನ್ನಣೆ

ಲೆವೆಲ್ 4+ ಟ್ರಾನ್ಸಿಶನ್ ಮತ್ತು ಹಸಿರು ವಿಮಾನ ನಿಲ್ದಾಣಗಳ ಮನ್ನಣೆ

ಸುದ್ದಿಯಲ್ಲಿ ಏಕಿದೆ? ಸಮರ್ಥ ಇಂಗಾಲ ನಿರ್ವಹಣೆ ಮತ್ತು ಸುಸ್ಥಿರತೆಗಾಗಿ ಏರ್​ಪೋರ್ಟ್ ಕಾರ್ಬನ್ ಮಾನ್ಯತೆ (ACA) ಕಾರ್ಯಕ್ರಮದ ಅಡಿಯಲ್ಲಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು  ಏರ್‌ಪೋರ್ಟ್ಸ್ ಕೌನ್ಸಿಲ್ ಇಂಟರ್‌ನ್ಯಾಶನಲ್ (ACI)ನ ಅತ್ಯುನ್ನತ ಮಟ್ಟದ ಲೆವೆಲ್ 4+ ಟ್ರಾನ್ಸಿಶನ್ ಮಾನ್ಯತೆಯನ್ನು ಪಡೆದುಕೊಳ್ಳುವ ಮೂಲಕ ಮತ್ತೊಂದು ಮೈಲುಗಲ್ಲು ಸಾಧಿಸಿ ಹಸಿರು ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮುಖ್ಯಾಂಶಗಳು

  • ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತೆಗೆದುಕೊಂಡಿರುವ ನಿರ್ಣಯದಿಂದ ಎಸಿಐ ನೀಡುವ ಅತ್ಯುನ್ನತ ಮಟ್ಟದ ಲೆವೆಲ್ 4+ ಟ್ರಾನ್ಸಿಶನ್ ಮಾನ್ಯತೆಯನ್ನು ಪಡೆದುಕೊಳ್ಳಲಾಗಿದೆ.
  • ಇದಲ್ಲದೆ, BLR ವಿಮಾನ ನಿಲ್ದಾಣದಲ್ಲಿ ಏಕ-ಬಳಕೆಯ ಪ್ಲಾಸ್ಟಿಕ್ ನಿರ್ಮೂಲನೆ ಮತ್ತು ಪ್ಲಾಸ್ಟಿಕ್ ತ್ಯಾಜ್ಯದಿಂದ ರಸ್ತೆಗಳ ನಿರ್ಮಾಣ ಹಾಗೂ ಹಲವು ಪ್ಲಾಸ್ಟಿಕ್ ಸರ್ಕ್ಯುಲಾರಿಟಿ ಉಪಕ್ರಮಗಳನ್ನು ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ BIAL ವಿಶ್ವದ ವಾರ್ಷಿಕ 15-35 ದಶಲಕ್ಷ ಪ್ರಯಾಣಿಕರ ವಿಭಾಗದಲ್ಲಿ ACIಯ ಗ್ರೀನ್ ಏರ್‌ಪೋರ್ಟ್ಸ್ ರೆಕಗ್ನಿಷನ್ 2023 ಪ್ಲಾಟಿನಂ ಪ್ರಶಸ್ತಿಯನ್ನು ಪಡೆದುಕೊಂಡಿದೆ.
  • ಲೆವೆಲ್ 4+ ಟ್ರಾನ್ಸಿಶನ್ ಮಾನ್ಯತೆ ಏರ್‌ಪೋರ್ಟ್ ಕಾರ್ಬನ್ ಮಾನ್ಯತೆ ಕಾರ್ಯಕ್ರಮದ ಅಡಿಯಲ್ಲಿ ವಿಮಾನ ನಿಲ್ದಾಣವು ಪಡೆಯಬಹುದಾದ ಅತ್ಯುನ್ನತ ಪುರಸ್ಕಾರಗಳಲ್ಲಿ ಒಂದಾಗಿದೆ. ಇದು 2030 ರ ವೇಳೆಗೆ ನಿವ್ವಳ ಇಂಗಾಲ ಶೂನ್ಯವಾಗಲು BIAL ನ ಆಕಾಂಕ್ಷೆಯನ್ನು ಮತ್ತು ಇಂಗಾಲದ ಹೊರಸೂಸುವಿಕೆ ಕಡಿಮೆ ಮಾಡುವಲ್ಲಿ ಅದರ ನಿರಂತರ ಪ್ರಯತ್ನಗಳನ್ನು ತೋರಿಸುತ್ತದೆ.

ನಿಮಗಿದು ತಿಳಿದಿರಲಿ

  • ಹಸಿರು ಪ್ರಗತಿ ಮತ್ತುಸುಸ್ಥಿರತೆಯ ನೀತಿಗೆ ಅನುಗುಣವಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವುಗ್ರೀನ್ ಏರ್ಪೋರ್ಟ್ ರೆಕಗ್ನಿಷನ್ (ಜಿಎಆರ್) 2023ರಲ್ಲಿಗುರುತಿಸಲ್ಪಟ್ಟಿದೆ. ವಾರ್ಷಿಕ 8 ದಶಲಕ್ಷಕ್ಕಿಂತ ಕಡಿಮೆ ಪ್ರಯಾಣಿಕರಿರುವ ವಿಭಾಗದಲ್ಲಿ ಪ್ರತಿಷ್ಠಿತ ಪ್ಲಾಟಿನಂ ರೇಟಿಂಗ್ನ್ನು ಮಂಗಳೂರು ವಿಮಾನ ನಿಲ್ದಾಣ ಪಡೆದುಕೊಂಡಿದೆ. ಏಕ-ಬಳಕೆಯ ಪ್ಲಾಸ್ಟಿಕ್ (ಎಸ್ಯ್ಯುಪಿ) ಬಳಕೆಯನ್ನು ತೊಡೆದು ಹಾಕಿದ ವಿಮಾನ ನಿಲ್ದಾಣಗಳಲ್ಲಿಮಂಗಳೂರು ವಿಮಾನ ನಿಲ್ದಾಣವೂ ಒಂದಾಗಿದೆ. ತನ್ನ ಹಸಿರು ಉಪಕ್ರಮಗಳೊಂದಿಗೆ ಅತ್ಯುನ್ನತ ಗುಣಮಟ್ಟವನ್ನು ಮಂಗಳೂರು ವಿಮಾನ ನಿಲ್ದಾಣವ ಕಾಯ್ದುಕೊಂಡಿದೆ. ಜಪಾನನ ಕೊಬ್ ನಲ್ಲಿನಡೆದ 18ನೇ ಎಸಿಐ ಏಷ್ಯಾ-ಪೆಸಿಫಿಕ್ ಪ್ರಾದೇಶಿಕ ಸಮ್ಮೇಳನ ಮತ್ತು ಪ್ರದರ್ಶನದಲ್ಲಿಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.