Published on: January 24, 2022

ವಾಯುಗುಣಮಟ್ಟ ಸೂಚ್ಯಂಕ (ಎಕ್ಯುಐ)

ವಾಯುಗುಣಮಟ್ಟ ಸೂಚ್ಯಂಕ (ಎಕ್ಯುಐ)

ಸುದ್ಧಿಯಲ್ಲಿ ಏಕಿದೆ ? ಬೆಂಗಳೂರು ನಗರ 2020 ರ ಲಾಕ್ ಡೌನ್ ಅವಧಿಯಲ್ಲಿ ಸುಧಾರಣೆ ಕಂಡಿದ್ದ ವಾಯುಗುಣಮಟ್ಟವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಸೂಚ್ಯಂಕದಲ್ಲಿ ಏನಿದೆ ?

  • ವಾಯುಗುಣಮಟ್ಟ ಸೂಚ್ಯಂಕ (ಎಕ್ಯುಐ) ವರ್ಗೀಕರಣದ ಪ್ರಕಾರ ದಕ್ಷಿಣ ಭಾರತದಲ್ಲಿ ಚೆನ್ನೈ ಹಾಗೂ ಕೊಚಿ ಇಂಥಹದ್ದೇ ಟ್ರೆಂಡ್ ನ್ನು ಹೊಂದಿದೆ. ಈ ಅಂಕಿ-ಅಂಶಗಳನ್ನು ನವದೆಹಲಿಯ ವಿಜ್ಞಾನ ಮತ್ತು ಪರಿಸರ ಕೇಂದ್ರ ಬಿಡುಗಡೆ ಮಾಡಿದೆ.
  • 2021 ರಲ್ಲಿ ಬೆಂಗಳೂರಿಗೆ ಉತ್ತಮ ಎಕ್ಯುಐ 208 ರಲ್ಲಿದ್ದು ಇದು 2020 ರಲ್ಲಿ 214 ದಿನಗಳ ಕಾಲ ದಾಖಲಾಗಿದ್ದಕ್ಕಿಂತ ಸ್ವಲ್ಪ ಕಡಿಮೆ ಇದೆ. ಅಚ್ಚರಿಯೆಂದರೆ ನಗರದ ಒಳಭಾಗದಲ್ಲಿ ಅತಿ ಹೆಚ್ಚು ಜನಸಂದಣಿ ಹೊಂದಿರುವ ಬಾಪೂಜಿನಗರ ಡಿಸೆಂಬರ್ ನ ಸರಾಸರಿಯಲ್ಲಿ ಅತ್ಯಂತ ಕಳಪೆ ಅಂದರೆ 76 ug/m3 ವಾಯುಗುಣಮಟ್ಟವನ್ನು ದಾಖಲಿಸಿಕೊಂಡಿದೆ.
  • ಪೀಣ್ಯ, ಕೈಗಾರಿಕಾ ಪ್ರದೇಶವಾಗಿದ್ದರೂ ಡಿಸೆಂಬರ್ 2021 ರಲ್ಲಿ ಸರಾಸರಿ 36 ug/m3 ನ್ನು ದಾಖಲ್ಪಿಸಿದ್ದು, ಅತ್ಯಂತ ಕಡಿಮೆ ಪ್ರಮಾಣದಲ್ಲಿ ವಾಯುಮಾಲಿನ್ಯ ಹೊಂದಿದೆ.

ಎಕ್ಯೂಐ ಎಂದರೇನು ?

  • ಎಕ್ಯೂಐ ಎಂದರೆ ವಾಯು ಗುಣಮಟ್ಟವನ್ನು ಅಳೆಯುವ ಸೂಚಕ. ಇದು ಮಾನವನ ಆರೋಗ್ಯ ಮತ್ತು ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ವಾಯು ಮಾಲಿನ್ಯಗಳ ಬಗ್ಗೆ ಮಾನಿಟರ್ ಮಾಡುತ್ತದೆ. ಗಾಳಿಯಲ್ಲಿರುವ ಓಝೋನ್, ಸಣ್ಣ ಕಣಗಳಿಂದಾದ ವಸ್ತುಗಳು, ಸಾರಜನಕ ಡೈ ಆಕ್ಸೈಡ್, ಕಾರ್ಬನ್ ಮಾನಾಕ್ಸೈಡ್, ಸಲ್ಫರ್ ಡೈ ಆಕ್ಸೈಡ್ ಮತ್ತು ಸಲ್ಫರ್ ಸಂಯುಕ್ತಗಳಂತ ಮಾಲಿನ್ಯಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ.

ಹೇಗೆ ಕಾರ್ಯ ನಿರ್ವಹಿಸುತ್ತದೆ ?

  • ಎಕ್ಯೂ ಅನ್ನು ಆರು ವಿಭಾಗಗಳಾಗಿ ವಿಂಗಡಣೆ ಮಾಡಲಾಗಿದೆ. ಅವುಗಳೆಂದರೆ ಉತ್ತಮ, ತೃಪ್ತಿದಾಯಕ, ಮಧ್ಯಮ, ಕಲುಷಿತ, ಕಳಪೆ, ತೀವ್ರ ಕಳಪೆ ಮತ್ತು ತೀವ್ರಕ್ಕಿಂತ ಹೆಚ್ಚಿನ ಕಳಪೆ ಎಂದು ವಿಂಗಡಿಸಲಾಗಿದೆ. ಈ ವಿಭಾಗಗಳಿಗೆ ವಿವಿಧ ಬಣ್ಣಗಳ ಕೋಡ್‌ಗಳನ್ನು ಜೋಡಿಸಲಾಗಿದೆ. ಹಸಿರು ಬಣ್ಣ ಉತ್ತಮ ಗಾಳಿಯ ಗುಣಮಟ್ಟವನ್ನು , ಕಂದು ಬಣ್ಣ ತೀವ್ರ ಮಾಲಿನ್ಯವನ್ನು ಸೂಚಿಸುತ್ತದೆ. ಹಳದಿ, ಕೇಸರಿ, ಕೆಂಪು ಮತ್ತು ನೇರಳೆ ಬಣ್ಣವು ಮಧ್ಯಮದಿಂದ ಹಿಡಿದು ಅನಾರೋಗ್ಯಕರ ಮಾಲಿನ್ಯವನ್ನು ಸೂಚಿಸುತ್ತದೆ.