Published on: August 31, 2023

ವಿಮಾನ ನಿಲ್ದಾಣಕ್ಕೆ ರಷ್ಯಾ ತಂತ್ರಜ್ಞಾನ

ವಿಮಾನ ನಿಲ್ದಾಣಕ್ಕೆ ರಷ್ಯಾ ತಂತ್ರಜ್ಞಾನ

ಸುದ್ದಿಯಲ್ಲಿ ಏಕಿದೆ? ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲೂ ವಿಮಾನವನ್ನು ಸುಲಭ ಹಾಗೂ ಸುರಕ್ಷಿತವಾಗಿ ಭೂಸ್ಪರ್ಶ ಮಾಡಲು ನೆರವಾಗಲು ರಷ್ಯಾ ಮೂಲದ ಇನ್ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್ನ(ಐಎಲ್ಎಸ್) ಉಪಕರಣಗಳನ್ನು ಕಲಬುರಗಿ ವಿಮಾನ ನಿಲ್ದಾಣಕ್ಕೆ ಅಳವಡಿಸಲಾಗುತ್ತಿದೆ.

ಮುಖ್ಯಾಂಶಗಳು

  • ಸುಮಾರು 10 ವರ್ಷಗಳನ್ನು ಪೂರೈಸಿದ ವಿಮಾನ ನಿಲ್ದಾಣಗಳಿಗೆ ಪೂರೈಸುವಂತಹ ಐಎಲ್ಎಸ್ ಸಾಧನಗಳನ್ನು ಕಲಬುರಗಿ ನಿಲ್ದಾಣಕ್ಕೆ ಪೂರೈಸಲಾಗುತ್ತಿದೆ.
  • ಐಎಲ್ಎಸ್ ಉಪಕರಣಗಳು ನೆಲಮಟ್ಟದಿಂದ ಕಾರ್ಯಿರ್ವಹಿಸುವ ರಡಾರ್ ಆಧಾರಿತ ತಂತ್ರಜ್ಞಾನವಾಗಿದೆ. ಕಠಿಣ ಪರಿಸ್ಥಿತಿಯಲ್ಲಿ ವಿಮಾನ ಭೂಸ್ಪರ್ಶ ಮಾಡಲು ತರಂಗಗಳ(ಫ್ರಿಕ್ವೆನ್ಸಿ) ಮೂಲಕ ಪೈಲಟ್ಗೆ ಸಂದೇಶ ರವಾನೆ ಆಗುತ್ತದೆ. ಆ ಸಂದೇಶಗಳನ್ನು ಅನುಸರಿಸಿ ವಿಮಾನವನ್ನು 3 ಡಿಗ್ರಿ ಕೋನದಲ್ಲಿ ತಿರುವು ಪಡೆದು ನಿಧಾನಕ್ಕೆ ರನ್ವೇ ಮೇಲೆ ಇಳಿಸಬಹುದು’ ‘ರನ್ವೇ ಸಮೀಪದಲ್ಲೇ ಐಎಲ್ಎಸ್ ಸ್ಥಾಪಿಸಲಾಗುತ್ತದೆ.
  • ಫೈಬರ್ನಂತಹ ಸಲಕರಣೆಗಳನ್ನು ಆಂಟೆನಾಗಳಲ್ಲಿ ಬಳಸುವುದರಿಂದ ವಿಮಾನಗಳು ತಾಕಿದ ತಕ್ಷಣವೇ ಅವು ನೆಲಕ್ಕೆ ಬೀಳುತ್ತವೆ. ಇದರಿಂದ ವಿಮಾನಗಳಿಗೆ ಯಾವುದೇ ತರಹದ ಹಾನಿ ಆಗುವುದಿಲ್ಲ’

ಉದ್ದೇಶ

  • ಮಂಜು ಕವಿದ ವಾತಾವರಣ, ಜೋರಾಗಿ ಬೀಳುವ ಮಳೆ , ಕಡಿಮೆ ಬೆಳಕು ಇದ್ದಾಗಲೂ ಐಎಲ್ಎಸ್ ಉಪಕರಣವು ಪೈಲಟ್ಗೆ ನಿಖರವಾಗಿ ತಾಂತ್ರಿಕ ಮಾರ್ಗದರ್ಶನ ಹಾಗೂ ಸಂದೇಶಗಳನ್ನು ರವಾನಿಸುತ್ತದೆ. 550 ಮೀಟರ್ ಎತ್ತರದಿಂದ ರನ್ವೇ ಅನ್ನು ಸುಲಲಿತವಾಗಿ ನೋಡಬಹುದು. ರನ್ವೇ ಕೇಂದ್ರ ವಿದ್ಯುತ್(ಸೆಂಟ್ರಲ್ ಲೈಟಿಂಗ್) ಜಾಲವು ಸ್ಪಷ್ಟವಾದ ಹಾದಿ ತೋರಿಸುತ್ತದೆ.

ಪ್ರಯೋಜನ

ಪ್ರತಿಕೂಲ ವಾತಾವರಣ ಇದ್ದರೆ ವಿಮಾನಗಳು ಅನಗತ್ಯವಾಗಿ ಹಾರಾಟ, ಇಲ್ಲವೆ ಬೇರೊಂದು ನಿಲ್ದಾಣದಲ್ಲಿಇಳಿಸಬೇಕಾಗುತ್ತದೆ. ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಗುತ್ತದೆ. ವಿಮಾನಯಾನ ಸಂಸ್ಥೆಗೂ ಇಂಧನದ ಹೊರೆಯಾಗುತ್ತದೆ. ಐಎಲ್ಎಸ್ ಅಳವಡಿಕೆಯಿಂದ  ಈ ಸಮಸ್ಯೆಗಳನ್ನು ಪರಿಹಾರವಾಗಲಿವೆ