Published on: April 7, 2023

ವಿಶ್ವಸಂಸ್ಥೆಯ ಸಂಖ್ಯಾ ಆಯೋಗ

ವಿಶ್ವಸಂಸ್ಥೆಯ ಸಂಖ್ಯಾ ಆಯೋಗ

ಸುದ್ಧಿಯಲ್ಲಿ ಏಕಿದೆ? ವಿಶ್ವಸಂಸ್ಥೆಯ ಅಂಕಿಅಂಶ ಆಯೋಗ ಹಾಗೂ ಇತರ 2 ಸಂಸ್ಥೆಗಳಿಗೆ ಭಾರತ ಆಯ್ಕೆಯಾಗಿದೆ. ಆದರೆ ಈ ಕ್ರಮವನ್ನು ವಿರೋಧಿಸಿದ ಚೀನಾ ಅಗತ್ಯ ಮತಗಳನ್ನು ಗಳಿಸಲು ಸಾಧ್ಯವಾಗದೇ ಸೋಲು ಅನುಭವಿಸಿದೆ.

ಮುಖ್ಯಾಂಶಗಳು

  • ಯುಎನ್ ಎಕನಾಮಿಕ್ ಅಂಡ್ ಸೋಶಿಯಲ್ ಕೌನ್ಸಿಲ್‌ನಿಂದ (ಇಕೋಸಾಕ್) ನಾರ್ಕೋಟಿಕ್ ಡ್ರಗ್ಸ್ ಆಯೋಗ ಮತ್ತು ಹೆಚ್‌ಐವಿ/ಏಡ್ಸ್ ಕುರಿತ ಜಂಟಿ ವಿಶ್ವಸಂಸ್ಥೆಯ ಕಾರ್ಯಕ್ರಮದ ಸಮನ್ವಯ ಮಂಡಳಿಗೆ ನಡೆದ 2 ಚುನಾವಣೆಗಳಲ್ಲಿ ಭಾರತವನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
  • ಸಂಖ್ಯಾ ಆಯೋಗದ ಚುನಾವಣೆಯಲ್ಲಿ ಭಾರತ 53ಕ್ಕೆ 46 ಮತಗಳನ್ನು ಪಡೆಯಿತು. ಪ್ರತಿಸ್ಪರ್ಧಿಗಳಾದ ರಿಪಬ್ಲಿಕ್ ಆಫ್ ಕೊರಿಯಾ- 23, ಚೀನಾ- 19, ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್- 15 ಮತಗಳನ್ನು ಪಡೆದಿವೆ.
  • ಅಂಕಿಅಂಶ, ವೈವಿಧ್ಯತೆ ಹಾಗೂ ಜನಸಂಖ್ಯಾ ಕ್ಷೇತ್ರದಲ್ಲಿನ ಭಾರತದ ಪರಿಣತಿಯು ವಿಶ್ವಸಂಸ್ಥೆಯ ಸಂಖ್ಯಾ ಆಯೋಗದ ಸ್ಥಾನ ಗಳಿಸಲು ನೆರವಾಗಿದೆ.
  • ಇದೀಗ ವಿಶ್ವಸಂಸ್ಥೆಯ ಸಂಖ್ಯಾ ಆಯೋಗದ ಮುಂದಿನ 4 ವರ್ಷಗಳ ಅವಧಿಗೆ ಭಾರತ ಆಯ್ಕೆಯಾಗಿದ್ದು, 2024ರ ಜನವರಿ 1 ರಿಂದ ಅಧಿಕಾರಾವಧಿ ಪ್ರಾರಂಭವಾಗಲಿದೆ

ಯುಎನ್ ಸ್ಟ್ಯಾಟಿಸ್ಟಿಕಲ್ ಕಮಿಷನ್ ಬಗ್ಗೆ:

  • ಯುನೈಟೆಡ್ ನೇಷನ್ಸ್ ಸ್ಟ್ಯಾಟಿಸ್ಟಿಕಲ್ ಕಮಿಷನ್ (1947; HQ: ನ್ಯೂಯಾರ್ಕ್) ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯ ಕಾರ್ಯಕಾರಿ ಆಯೋಗವಾಗಿದೆ. ಇದು ವಿಶ್ವಸಂಸ್ಥೆಯ ಅಂಕಿಅಂಶ ವಿಭಾಗದ ಕೆಲಸವನ್ನು ನೋಡಿಕೊಳ್ಳುತ್ತದೆ.
  • ಸದಸ್ಯರು: ಅದರ 24 ಸದಸ್ಯ ರಾಷ್ಟ್ರಗಳನ್ನು ಈ ಕೆಳಗಿನ ಭೌಗೋಳಿಕ ವಿತರಣೆಯ ಆಧಾರದ ಮೇಲೆ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯಿಂದ ಆಯ್ಕೆ ಮಾಡಲಾಗುತ್ತದೆ: ಆಫ್ರಿಕನ್ ರಾಜ್ಯಗಳು (5), ಏಷ್ಯನ್ ರಾಜ್ಯಗಳು (4), ಪೂರ್ವ ಯುರೋಪಿಯನ್ ರಾಜ್ಯಗಳು (4), ಲ್ಯಾಟಿನ್ ಅಮೇರಿಕನ್ ಮತ್ತು ಕೆರಿಬಿಯನ್ ರಾಜ್ಯಗಳು (4) , ಪಶ್ಚಿಮ ಯುರೋಪಿಯನ್ ಮತ್ತು ಇತರ ರಾಜ್ಯಗಳು (7).