Published on: April 7, 2022

ವಿಶ್ವ ಆರೋಗ್ಯ ದಿನ:

ವಿಶ್ವ ಆರೋಗ್ಯ ದಿನ:

ಸುದ್ಧಿಯಲ್ಲಿ ಏಕಿದೆ ? ಈ ಬಾರಿಯ ವಿಶ್ವ ಆರೋಗ್ಯ ದಿನದ (ಏ. 7) ಧ್ಯೇಯ‘Our planet, our health’- ‘ನಮ್ಮ ಗ್ರಹ, ನಮ್ಮ ಆರೋಗ್ಯ’

ವಿಶ್ವ ಆರೋಗ್ಯ ಸಂಸ್ಥೆಯ ಧ್ಯೇಯದ ಆಶಯ

  • ವಿಶ್ವ ಆರೋಗ್ಯ ಸಂಸ್ಥೆ ತನ್ನ ಧ್ಯೇಯ ಘೋಷಣೆಯಲ್ಲಿ ಹೇಳಿರುವ ‘ಆಶಯ ಸ್ವಚ್ಛ ಗಾಳಿ, ಸುರಕ್ಷಿತ ನೀರು, ಸ್ವಚ್ಛತೆ, ಆರೋಗ್ಯಕರ ಆಹಾರ ಎಲ್ಲರಿಗೂ ಲಭ್ಯವಾಗುವಂತೆ ಮಾಡುವುದು, ವಾಸಿಸುವ ಪರಿಸರವುಳ್ಳ ಪಟ್ಟಣಗಳು, ವಾತಾವರಣದ ವೈಪರೀತ್ಯಗಳನ್ನು ತಡೆಯಬಲ್ಲಂತಹ ಆರ್ಥಿಕತೆಯನ್ನು ಕಟ್ಟಲು ಪ್ರೇರಣೆ ನೀಡುವುದು. ಎಲ್ಲರಿಗೂ ಸಂತೋಷವಾದ ದೀರ್ಘಾಯುಷ್ಯವುಳ್ಳ ಬದುಕನ್ನು ಕಟ್ಟಿಕೊಳ್ಳುವ ಅವಕಾಶ ದೊರೆಯುವುದು’
  • ಪರಿಸರ ಮಾಲಿನ್ಯ- ವಾತಾವರಣದ ವೈಪರೀತ್ಯಗಳು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದು ಒಂದೆಡೆಯಾದರೆ, ಇನ್ನೊಂದೆಡೆ ಆರೋಗ್ಯ ವ್ಯವಸ್ಥೆಗೇ ಅದು ಮಾರಕವಾಗಬಹುದು.

ಈ ದಿನದ ಇತಿಹಾಸ

  • ಜುಲೈ 22, 1949 ರಂದು ಮೊದಲ ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ದಿನಾಂಕವನ್ನು ನಂತರ 7ನೇ ಏಪ್ರಿಲ್‌ಗೆ ಬದಲಾಯಿಸಲಾಯಿತು. 61 ದೇಶಗಳು ವಿಶ್ವ ಆರೋಗ್ಯ ಸಂಸ್ಥೆಯ ಅನುಷ್ಠಾನಕ್ಕೆ 7 ಏಪ್ರಿಲ್ 1948 ರಂದು ಒಪ್ಪಂದಕ್ಕೆ ಸಹಿ ಹಾಕಿದವು. 1950 ರಲ್ಲಿ, ವಿಶ್ವ ಆರೋಗ್ಯ ಸಂಸ್ಥೆಯ ಸೃಷ್ಟಿಯ ಸ್ಮರಣಾರ್ಥ ಈ ದಿನವನ್ನು ಆಚರಿಸಲು ಏಪ್ರಿಲ್ 7 ಅನ್ನು ಗೊತ್ತುಪಡಿಸಿದ ದಿನಾಂಕ ಎಂದು ನಿರ್ಧರಿಸಿದ ನಂತರ ಮೊದಲ ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಯಿತು.ಆದ್ದರಿಂದ, ಈ ದಿನವು WHO ನ ವಾರ್ಷಿಕೋತ್ಸವವನ್ನು ಸಹ ಸೂಚಿಸುತ್ತದೆ.

ಈ ದಿನದ ಮಹತ್ವ

  • ಪ್ರಪಂಚದಾದ್ಯಂತ ನಡೆಯುತ್ತಿರುವ ಆರೋಗ್ಯ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಈ ದಿನವನ್ನು ಆಚರಿಸುವ ಉದ್ದೇಶವಾಗಿದೆ. ಈ ದಿನವನ್ನು ಜನರ ಯೋಗಕ್ಷೇಮ ಮತ್ತು ಒಟ್ಟಾರೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಹರಡಲು ಒಂದು ಅವಕಾಶವಾಗಿ ಬಳಸಲಾಗುತ್ತದೆ.