Published on: March 20, 2023

ವಿಶ್ವ ಗುಬ್ಬಚ್ಚಿ ದಿನ 2023

ವಿಶ್ವ ಗುಬ್ಬಚ್ಚಿ ದಿನ 2023

ಸುದ್ದಿಯಲ್ಲಿ ಏಕಿದೆ? ಪ್ರತೀ ವರ್ಷ ಮಾರ್ಚ್ 20 ವಿಶ್ವ ಗುಬ್ಬಚ್ಚಿ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ.

ಮುಖ್ಯಾಂಶಗಳು

  • ಈ ದಿನವನ್ನು ಭಾರತದ ನೇಚರ್ ಫಾರೆವರ್ ಸೊಸೈಟಿ, ಇಕೋ-ಸಿಸ್ ಆಕ್ಷನ್ ಫೌಂಡೇಶನ್ (ಫ್ರಾನ್ಸ್) ಮತ್ತು ಪ್ರಪಂಚದಾದ್ಯಂತ ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಸಹಯೋಗದೊಂದಿಗೆ ಗುಬ್ಬಚ್ಚಿ ಮತ್ತು ಇತರ ಪಕ್ಷಿಗಳ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರಾರಂಭಿಸಲಾಗಿದೆ.
  • ಉದ್ದೇಶ: ಗುಬ್ಬಚ್ಚಿಗಳನ್ನು ರಕ್ಷಣೆ ಮಾಡುವ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ.
  • 2023ರ ದಿನದ ಥೀಮ್ : “ನಾನು ಗುಬ್ಬಚ್ಚಿಗಳನ್ನು ಪ್ರೀತಿಸುತ್ತೇನೆ”, ಇದು ಮಾನವರು ಮತ್ತು ಗುಬ್ಬಚ್ಚಿಗಳ ನಡುವಿನ ಸಂಬಂಧವನ್ನು ಪ್ರೋತ್ಸಾಹಿಸಲು ಹೆಚ್ಚಿನ ಜನರನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಗುಬ್ಬಿಗಳ ಸಂತತಿಯನ್ನು ರಕ್ಷಣೆ ಮಾಡುವುದರ ಜೊತೆ ಜೀವ ವೈವಿದ್ಯತೆಯನ್ನು ಉಳಿಸಿಕೊಂಡು ಮತ್ತು ಬೆಳೆಸಿಕೊಂಡು ಹೋಗುವುದೇ ಈ ವರ್ಷದ ಗುಬ್ಬಿ ದಿನದ ಧ್ಯೇಯವಾಗಿದೆ.

ಇವುಗಳ ಸಂತತಿ ಕ್ಷೀಣಿಸಲು ಕಾರಣ

  • ಶಬ್ದ ಮಾಲಿನ್ಯ, ಮೊಬೈಲ್ ಟವರ್ಗಳ ಸಂಖ್ಯೆಯಲ್ಲಿ ಹೆಚ್ಚಳ ಆವಾಸಸ್ಥಾನದ ನಷ್ಟ, ಸಂಪನ್ಮೂಲಗಳು ಕಡಿಮೆಯಾಗುವುದರ ಪರಿಣಾಮ ಗುಬ್ಬಿಯ ಸಂತತಿ ಕ್ಷೀಣಿಸಿದೆ.

ಈ ದಿನದ ಇತಿಹಾಸ :

  • ಮೊಟ್ಟ ಮೊದಲ ಬಾರಿಗೆ 2010 ಮಾರ್ಚ್ 20 ರಂದು ಗುಬ್ಬಚ್ಚಿ ದಿನವನ್ನು ಆಚರಿಸಲಾಯಿತು. ಭಾರತದ ನೇಚರ್ ಫಾರೆವರ್ ಸೊಸೈಟಿಯನ್ನು ಭಾರತೀಯ ಸಂರಕ್ಷಣಾವಾದಿ ಮೊಹಮ್ಮದ್ ದಿಲವಾರ್ ಸ್ಥಾಪನೆ ಮಾಡುತ್ತಾರೆ. ಅವರು ಗುಬ್ಬಚ್ಚಿಯ ಸಂರಕ್ಷಣೆಯ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಹಲವಾರು ವರ್ಷಗಳಿಂದ ಸಾಕಷ್ಟು ಪ್ರಯತ್ನ ಮಾಡಿದ್ದಾರೆ.

ಗುಬ್ಬಚ್ಚಿ

  • ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (IUCN) ನ ಪ್ರಕಾರ ಅಳಿವಿನಂಚಿನಲ್ಲಿರುವ ಜಾತಿಗಳ ಕೆಂಪು ಪಟ್ಟಿಯಲ್ಲಿದೆ.
  • ಇದು ಸರ್ವಭಕ್ಷಕ ಪಕ್ಷಿ. ಇದು ಬೀಜಗಳು, ಧಾನ್ಯಗಳು, ಹಣ್ಣುಗಳು ಮತ್ತು ಕೀಟಗಳು ಇತ್ಯಾದಿಗಳನ್ನು ತಿನ್ನುತ್ತದೆ.
  • ಇವುಗಳು ಸಾಮಾನ್ಯವಾಗಿ ತಮ್ಮ ಗೂಡುಗಳನ್ನು ಮನೆಗಳು, ಕಟ್ಟಡಗಳು, ಸೇತುವೆಗಳು ಮತ್ತು ಮರಗಳ ಟೊಳ್ಳುಗಳಲ್ಲಿ ನಿರ್ಮಿಸುತ್ತವೆ. ನಗರ ಪ್ರದೇಶಗಳಲ್ಲಿ, ಈ ಪಕ್ಷಿಗಳು ಹೆಚ್ಚಾಗಿ ಮನುಷ್ಯರ ಮನೆಗಳಲ್ಲಿ ಗೂಡುಕಟ್ಟುತ್ತವೆ.
  • ಜೀವಿತಾವಧಿ: 3 ವರ್ಷಗಳು,
  • ಕುಟುಂಬ: ಪಾಸೆರಿಡೆ