Published on: July 16, 2023

ವಿಶ್ವ ಜನಸಂಖ್ಯಾ ದಿನ

ವಿಶ್ವ ಜನಸಂಖ್ಯಾ ದಿನ

ಸುದ್ದಿಯಲ್ಲಿ ಏಕಿದೆ? ಪ್ರತಿ ವರ್ಷ ಜುಲೈ 11 ರಂದು ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತದೆ.

ಆಚರಿಸುವ ಉದ್ದೇಶ

  • ವಿಶ್ವ ಜನಸಂಖ್ಯಾ ದಿನವನ್ನು ಜನಸಂಖ್ಯೆ ಹೆಚ್ಚಳದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಆರೋಗ್ಯಕರ ಜೀವನ ಮತ್ತು ಸಣ್ಣ ಕುಟುಂಬಗಳ ಪ್ರಾಮುಖ್ಯತೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು. ಜನಸಂಖ್ಯಾ ಸ್ಫೋಟದಿಂದಾಗುವ ಅಪಾಯಗಳು, ಕುಟುಂಬ ಯೋಜನೆಗೆ ಆದ್ಯತೆ, ಲಿಂಗ ಅಸಮಾನತೆ, ಬಡತನ, ಶಿಶು ಮರಣ, ಮಾನವ ಹಕ್ಕುಗಳು ಮತ್ತಿತರ ಸಂಗತಿಗಳಲ್ಲಿ ಜಾಗೃತಿ ಮೂಡಿಸುವುದು.

ವಿಶ್ವ ಜನಸಂಖ್ಯಾ ದಿನ 2023ರ ಥೀಮ್

  • “ಲಿಂಗ ಸಮಾನತೆಯ ಶಕ್ತಿಯನ್ನು ಬಿಚ್ಚಿಡುವುದು” ನಮ್ಮ ಪ್ರಪಂಚದ ಅನಂತ ಸಾಧ್ಯತೆಗಳನ್ನು ಮನ ಬಿಚ್ಚಿ ಮಾತನಾಡುವಂತೆ ಮಾಡಲು ಮಹಿಳೆಯರು ಮತ್ತು ಹುಡುಗಿಯರ ಧ್ವನಿಯನ್ನು ಎತ್ತಿ ಹಿಡಿಯುವುದು.

ಇತಿಹಾಸ

  • 1987 ರ ಜುಲೈ 11 ರಂದು ವಿಶ್ವ ಜನಸಂಖ್ಯೆಯು 500 ಕೋಟಿಯನ್ನು ತಲುಪಿತ್ತು. ಇದರ ಜನಸಂಖ್ಯಾ ಹೆಚ್ಚಳದ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯು, ತನ್ನ ಅಂಗ ಅಂಸ್ಥೆಯಾದ ‘ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ಮಂಡಳಿ’ಯ ಮೂಲಕ 1989 ಜುಲೈ 11 ರಂದು ಮೊದಲ ಬಾರಿ ಜನಸಂಖ್ಯಾ ದಿನವನ್ನು ಆಚರಿಸಲಾಯಿತು. ಅಂದಿನಿಂದ ಇಚೆಗೆ ಜಗತ್ತಿನಾದ್ಯಂತ 200ಕ್ಕೂ ಹೆಚ್ಚು ದೇಶಗಳಲ್ಲಿ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತದೆ.

ಜನಸಂಖ್ಯೆ ಏರಿಕೆಗೆ ಕಾರಣಗಳು

  • ಲಿಂಗ ಅಸಮಾನತೆ.
  • ಬಾಲ್ಯವಿವಾಹ
  • ಆರೋಗ್ಯದ ಹಕ್ಕು.
  • ಮಗುವಿನ ಆರೋಗ್ಯದ ಮೇಲಿನ ಪರಿಣಾಮಗಳು.
  • ಕುಟುಂಬ ಯೋಜನೆ ಇಲ್ಲದೇ ಇರೋದು.
  • ಮಾನವ ಹಕ್ಕುಗಳು

ನಿಮಗಿದು ತಿಳಿದಿರಲಿ

  • 2023 ರಲ್ಲಿ ವಿಶ್ವದ ಪ್ರಸ್ತುತ ಜನಸಂಖ್ಯೆಯು 8,045,311,447 ಆಗಿದೆ, ಇದು 2022 ರಿಂದ 0.88% ಹೆಚ್ಚಳವಾಗಿದೆ. 2022 ರಲ್ಲಿ ವಿಶ್ವದ ಜನಸಂಖ್ಯೆಯು 7,975,105,156 ಆಗಿತ್ತು, 2021 ರಿಂದ 0.83% ಹೆಚ್ಚಳವಾಗಿದೆ.
  • ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ಭಾರತ ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರವಾಗಿದೆ. ಆ ಮೂಲಕ ಜನಸಂಖ್ಯೆಯಲ್ಲಿ ನೆರೆಯ ದೇಶ ಚೀನಾವನ್ನೇ ಹಿಂದಿಕ್ಕಿದೆ. ಭಾರತ 142.86 ಕೋಟಿ ಜನಸಂಖ್ಯೆ ಹೊಂದಿದ್ದರೆ, ಚೀನಾ 142.57 ಕೋಟಿ ಜನಸಂಖ್ಯೆ ಹೊಂದಿದೆ ಎಂದು ಖಾಸಗಿ ಸುದ್ದಿ ಸಂಸ್ಥೆ ಎನ್‌ಡಿಟಿವಿ ವರದಿ ಮಾಡಿದೆ.