Published on: February 3, 2024

ವಿಶ್ವ ಜೌಗು ಪ್ರದೇಶ ದಿನ

ವಿಶ್ವ ಜೌಗು ಪ್ರದೇಶ ದಿನ

ಸುದ್ದಿಯಲ್ಲಿ ಏಕಿದೆ? ವಿಶ್ವ ಜೌಗು ಪ್ರದೇಶ ದಿನವನ್ನು ಪ್ರತಿ ವರ್ಷ ಫೆಬ್ರವರಿ 2ರಂದು ಆಚರಿಸಲಾಗುತ್ತದೆ.

ಮುಖ್ಯಾಂಶಗಳು

ವಿಶ್ವ ಜೌಗು ದಿನದ 2024ರ ಧ್ಯೇಯ: ಜೌಗು ಪ್ರದೇಶ ಮತ್ತು ಮಾನವನ ಯೋಗಕ್ಷೇಮ. ಈ ವರ್ಷ ಈ ಜೌಗು ಪ್ರದೇಶಗಳು ಮತ್ತು ಮಾನವನ ಜೀವನ ಸಂಪರ್ಕಿತವಾಗಿದೆ ಎಂಬುದರ ಮೇಲೆ ಬೆಳಕು ಚೆಲ್ಲಲಾಗಿದೆ.

ಉದ್ದೇಶ

ಈ ಮೂಲಕ ಜಾಗತಿಕ ಮಟ್ಟದಲ್ಲಿ ವ್ಯಕ್ತಿಗಳು, ಸಂಘ ಸಂಸ್ಥೆಗಳು ಮತ್ತು ಸರ್ಕಾರಗಳು ಜೌಗು ಭೂಮಿಯ ಪ್ರಾಮುಖ್ಯತೆಯನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತದೆ.

ಏನಿದು ಜೌಗು ಭೂಮಿ: ಜೌಗು ಭೂಮಿ ಎಂದರೆ ನೀರು ಮಣ್ಣನ್ನು ಆವರಿಸುವ ಪ್ರದೇಶಗಳಾಗಿವೆ. ಇವು ಸದಾ ನೀರಿನಿಂದ ಕೂಡಿರುವ ಆರ್ದ್ರಗುಣದ ಮಣ್ಣನ್ನು ಹೊಂದಿರುತ್ತದೆ. ವರ್ಷಪೂರ್ತಿ ಈ ತೇವಾಂಶವನ್ನು ಈ ಪ್ರದೇಶಗಳು ಕಾಯ್ದುಕೊಂಡಿರುತ್ತದೆ.

ಜೌಗು ಪ್ರದೇಶದ ಪ್ರಾಮುಖ್ಯತೆ:

  • ನೀರಿನ ಶುದ್ಧೀಕರಣ: ನೀರಿನ ಮಾಲಿನ್ಯ ಮತ್ತು ಅಶುದ್ದತೆಯನ್ನು ಈ ಪ್ರದೇಶ ಶುದ್ದೀಕರಿಸುತ್ತದೆ
  • ಪ್ರವಾಹ ನಿಯಂತ್ರಣ: ಹೆಚ್ಚಿನ ನೀರನ್ನು ಹಿಡಿದಿರುವುದರಿಂದ ಪ್ರವಾಹದ ಅಪಾಯವನ್ನು ಕಡಿಮೆ ಮಾಡುತ್ತದೆ.
  • ಪರಿಸರ ಬದಲಾವಣೆ: ಇಂಗಾಲದ ಹೀರಿಕೊಳ್ಳುವಿಕೆಗೆ ಸಹಾಯ ಮಾಡುತ್ತದೆ. ಇದು ಇಂಗಾಲದ ಡೈ ಆಕ್ಸೆಡ್​ ಅನ್ನು ಶೇಖರಿಸುತ್ತದೆ ಮತ್ತು ಹಸಿರು ಮನೆ ಇಂಗಾಲದ ಹೊರ ಸೂಸುವಿಕೆಯನ್ನು ಕಡಿಮೆ ಮಾಡುತ್ತದೆ
  • ವೈವಿಧ್ಯತೆಯ ತಾಣ: ಇದು ಅನೇಕ ರೀತಿ ಸಸ್ಯ ಮತ್ತು ಪ್ರಾಣಿಗಳಿಗೆ ಆವಾಸ ಸ್ಥಾನಕ್ಕೆ ಅವಕಾಶವನ್ನು ಕಲ್ಪಿಸುತ್ತದೆ.
  • ಆರ್ಥಿಕತೆ ಪ್ರಯೋಜನ: ಪ್ರವಾಸ, ಮೀನುಗಾರಿಕೆ, ಕೃಷಿ ಮತ್ತು ಇತರ ಆರ್ಥಿಕ ಚಟುವಟಿಕೆಗಳನ್ನು ಬೆಂಬಲಿಸುತ್ತದೆ.
  • ಸಂಸ್ಕೃತಿ ಮಹತ್ವ: ಜಗತ್ತಿನೆಲ್ಲೆಡೆ ಅನೇಕ ಸಮುದಾಯದ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಪ್ರಾಮುಖ್ಯತೆಯನ್ನು ಹೊಂದಿದೆ.

ಹಿನ್ನೆಲೆ

ರಾಮ್ಸರ್ ಸಮಾವೇಶ: ಆರ್ದ್ರಭೂಮಿಗಳ ಮೇಲಿನ ರಾಮ್ಸರ್ ಸಮಾವೇಶವು “ಜೌಗುಭೂಮಿಗಳ ಸಂರಕ್ಷಣೆ ಮತ್ತು ಸುಸ್ಥಿರ ಬಳಕೆಗಾಗಿ” ಅಂತರರಾಷ್ಟ್ರೀಯ ಒಪ್ಪಂದವಾಗಿದೆ. ಇದನ್ನು ವೆಟ್ ಲ್ಯಾಂಡ್ಸ್ ಸಮಾವೇಶ ಎಂದೂ ಕರೆಯುತ್ತಾರೆ. ಇರಾನ್‌ನ ರಾಮ್‌ಸರ್ ನಗರದಲ್ಲಿ ಫೆಬ್ರವರಿ 2, 1971 ರಂದು ಸಹಿ ಮಾಡಲಾಯಿತು. ಅಂದಿನಿಂದ ಈ ದಿನವನ್ನು ಆಚರಿಸಲಾಗುತ್ತದೆ.

ರಾಮಸರ್ ಸೈಟಗಳ ಬಗ್ಗೆ ಪ್ರಮುಖ ಸಂಗತಿಗಳು

1974 ರಲ್ಲಿ ಆಸ್ಟ್ರೇಲಿಯಾದ ಕೋಬರ್ಗ್ ಪೆನಿನ್ಸುಲಾ ವಿಶ್ವದ ಮೊದಲ ತಾಣವಾಗಿದೆ.

ಹೆಚ್ಚು ರಾಮ್ಸಾರ್ ಸೈಟ್‌ಗಳನ್ನು ಹೊಂದಿರುವ ದೇಶಗಳು ಯುನೈಟೆಡ್ ಕಿಂಗ್‌ಡಮ್ 175 ಮತ್ತು ಮೆಕ್ಸಿಕೊ 142.

ಬೊಲಿವಿಯಾ ರಾಮ್ಸರ್ ಸೈಟಗಳ ರಕ್ಷಣೆಯಲ್ಲಿ ಅತಿ ದೊಡ್ಡ ಪ್ರದೇಶವನ್ನು ಹೊಂದಿದೆ.

ವಿಶ್ವದ ಅತಿ ದೊಡ್ಡ ರಾಮ್ಸರ್ ಸೈಟ್: ರಿಯೋ ನಿಗ್ರೋ ಬ್ರೆಜಿಲ್

ಭಾರದಲ್ಲಿನ ರಾಮ್ಸರ ಸೈಟ್ ಗಳು

ಭಾರತವು ಫೆಬ್ರವರಿ 1, 1982 ರಲ್ಲಿ ಈ ಸಮಾವೇಶಕ್ಕೆ ಸಹಿ ಹಾಕಿತು

ಒಟ್ಟು 80 ಸೈಟಗಳನ್ನು ಹೊಂದಿದೆ

ಮೊದಲ ರಾಮ್ಸರ ಸೈಟ್ 1982ರಲ್ಲಿ: ಚಿಲಿಕ ಲೇಕ್ ಒಡಿಶಾ, ಕಿಯೋಲಾಡಿಯೋ ರಾಷ್ಟ್ರೀಯ ಉದ್ಯಾನವನ ರಾಜಸ್ಥಾನ

ಅತಿ ಹೆಚ್ಚು ಸೈಟಗಳನ್ನು ಹೊಂದಿರುವ ರಾಜ್ಯಗಳು:  ತಮಿಳುನಾಡು(16), ಉತ್ತರ ಪ್ರದೇಶ (10)

ಭಾರತದ ಅತಿ ದೊಡ್ಡ ರಾಮ್ಸರ ಸೈಟ್: ಸುಂದರಬನ ಜೌಗು ಭೂಮಿ

ಅತಿ ಚಿಕ್ಕ ರಾಮ್ಸರ ಸೈಟ್: ರೇಣುಕಾ ಲೇಕ್ ಹಿಮಾಚಲ ಪ್ರದೇಶ