Published on: September 28, 2023

ವಿಶ್ವ ಪ್ರವಾಸೋದ್ಯಮ ದಿನ 2023

ವಿಶ್ವ ಪ್ರವಾಸೋದ್ಯಮ ದಿನ 2023

ಸುದ್ದಿಯಲ್ಲಿ ಏಕಿದೆ? ಪ್ರತಿ ವರ್ಷ ಸೆಪ್ಟೆಂಬರ್ 27 ರಂದು ವಿಶ್ವದಾದ್ಯಂತ ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ.

ಮುಖ್ಯಾಂಶಗಳು

  • ಭಾರತವು ತನ್ನದೇ ಆದ ರಾಷ್ಟ್ರೀಯ ಪ್ರವಾಸೋದ್ಯಮ ದಿನವನ್ನು ಪ್ರತ್ಯೇಕವಾಗಿ ಆಚರಿಸುತ್ತದೆ. ಇದನ್ನು ದೇಶದಲ್ಲಿ ಪ್ರತಿ ವರ್ಷ ಜನವರಿ 25 ರಂದು ಆಚರಿಸಲಾಗುತ್ತದೆ.
  • 2023 ರ ವಿಷಯ : ‘ಪ್ರವಾಸೋದ್ಯಮ ಮತ್ತು ಹಸಿರು ಹೂಡಿಕೆ’
  • 2022 ರ ಥೀಮ್ : ಪ್ರವಾಸೋದ್ಯಮದ ಮರುಚಿಂತನೆ (Rethinking Tourism) ಎಂದು ಕರೆಯಲಾಗಿತ್ತು. ಈ ಹೆಸರನ್ನು ಕೊರೊನಾ ಸಾಂಕ್ರಾಮಿಕ ಮತ್ತು ಅದರಿಂದ ಉಂಟಾದ ಸಮಸ್ಯೆಗಳ ದೃಷ್ಟಿಯಿಂದ ನಿರ್ಧರಿಸಲಾಯಿತು.

ಉದ್ದೇಶ

  • ಈ ವಿಶೇಷ ದಿನದ ದೃಷ್ಟಿಯಿಂದ ಅಂತರರಾಷ್ಟ್ರೀಯ ಪ್ರವಾಸೋದ್ಯಮವನ್ನು ಉತ್ತೇಜಿಸುವ ಮೂಲಕ ವಿವಿಧ ದೇಶಗಳನ್ನು ಒಟ್ಟಿಗೆ ಜೋಡಿಸಲಾಗಿದೆ. ಇದರಿಂದ ಪ್ರವಾಸಿಗರು ತಮ್ಮ ದೇಶ ಮತ್ತು ವಿದೇಶಿ ಸಂಸ್ಕೃತಿಯನ್ನು ತಿಳಿದುಕೊಳ್ಳಬಹುದು ಮತ್ತು ಅರ್ಥಮಾಡಿಕೊಳ್ಳಬಹುದು.
  • ದೇಶವು ಆರ್ಥಿಕ ಸಾಮಾಜಿಕ ರಾಜಕೀಯ ಮತ್ತು ಸಾಂಸ್ಕೃತಿಕವಾಗಿ ಪ್ರವಾಸೋಧ್ಯಮ ಹೇಗೆ ಪ್ರಭಾವಿತವಾಗಿದೆ ಎಂಬುವುದನ್ನು ತಿಳಿಸುವ ಉದ್ದೇಶವನ್ನೂ ಹೊಂದಿದೆ.

ದಿನದ ಇತಿಹಾಸ

ವಿಶ್ವ ಪ್ರವಾಸೋದ್ಯಮ ದಿನವನ್ನು ಮೊದಲ ಬಾರಿಗೆ 1980 ರಲ್ಲಿ ಆಚರಿಸಲಾಯಿತು.  ಇದನ್ನು ವಿಶ್ವಸಂಸ್ಥೆಯ ವಿಶ್ವ ವ್ಯಾಪಾರ ಸಂಸ್ಥೆ (UNWTO) ಪ್ರಾರಂಭಿಸಿತು. ಈ ವಿಶೇಷ ದಿನವನ್ನು ಆಚರಿಸಲು ಸೆಪ್ಟೆಂಬರ್ 27 ರ ದಿನಾಂಕವನ್ನು ಆಯ್ಕೆ ಮಾಡಲಾಗಿದೆ. ಏಕೆಂದರೆ 1970 ರಲ್ಲಿ ಈ ದಿನದಂದು ವಿಶ್ವಸಂಸ್ಥೆಯ ವಿಶ್ವ ವ್ಯಾಪಾರ ಸಂಸ್ಥೆಯನ್ನು ಗುರುತಿಸಲಾಯಿತು. ಆದ್ದರಿಂದ ವಿಶ್ವಸಂಸ್ಥೆಯ ವಿಶ್ವ ವ್ಯಾಪಾರ ಸಂಸ್ಥೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ