Published on: September 21, 2023

ಶಾಂತಿ ನಿಕೇತನಕ್ಕೆ ಯುನೆಸ್ಕೋ ವಿಶ್ವ ಪಾರಂಪರಿಕ ತಾಣ

ಶಾಂತಿ ನಿಕೇತನಕ್ಕೆ ಯುನೆಸ್ಕೋ ವಿಶ್ವ ಪಾರಂಪರಿಕ ತಾಣ

ಸುದ್ದಿಯಲ್ಲಿ ಏಕಿದೆ? ಭಾರತದ ಪಶ್ಚಿಮ ಬಂಗಾಳದಲ್ಲಿರುವ, ನೋಬೆಲ್ ಪ್ರಶಸ್ತಿ ಪುರಸ್ಕೃತರಾದ ಕವಿ ರವೀಂದ್ರನಾಥ ಠಾಗೋರರ ನಿವಾಸವಾದ ಶಾಂತಿ ನಿಕೇತನಕ್ಕೆ ಯುನೆಸ್ಕೋ ವಿಶ್ವ ಪಾರಂಪರಿಕ ತಾಣದ ಮಾನ್ಯತೆ ಸಿಕ್ಕಿದೆ.

ಮುಖ್ಯಾಂಶಗಳು

  • ಸೌದಿ ಅರೇಬಿಯಾದ ರಿಯಾದ್ ನಲ್ಲಿ ನಡೆದ ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಆಯ್ಕೆ ಸಮಿತಿಯ 45ನೇ ವಾರ್ಷಿಕ ಸಮ್ಮೇಳನದಲ್ಲಿ ಈ ವಿಚಾರವನ್ನು ಘೋಷಿಸಲಾಗಿದೆ.
  • 2010ರಲ್ಲಿ ಶಾಂತಿ ನಿಕೇತನವನ್ನು ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಬೇಕೆಂದು ಕೇಂದ್ರ ಸರ್ಕಾರ, ಯುನೆಸ್ಕೋಕ್ಕೆ ಮನವಿ ಸಲ್ಲಿಸಿತ್ತು.
  • ಇತ್ತೀಚಿನ ವರ್ಷಗಳಲ್ಲಿ ಪಶ್ಚಿಮ ಬಂಗಾಳಕ್ಕೆ ಒಲಿದ ಎರಡನೇ ಯುನೆಸ್ಕೋ ಗೌರವ ಇದಾಗಿದೆ. ಕೋಲ್ಕತಾದಲ್ಲಿ ಪ್ರತಿ ವರ್ಷ ದಸರಾ ಹಬ್ಬದ ಸಂದರ್ಭದಲ್ಲಿ ಅತ್ಯಂತ ವಿಜಂಭಣೆಯಿಂದ ಆಚರಿಸಲ್ಪಡುವ ದುರ್ಗಾ ಪೂಜಾ ಮಹೋತ್ಸವಗಳಿಗೆ 2022ರಲ್ಲಿ ಯುನೆಸ್ಕೋ ವಿಶ್ವಪಾರಂಪರಿಕ ಪಟ್ಟ ಸಿಕ್ಕಿತ್ತು.

ತಾಣದ ವಿವರ

  • ರವೀಂದ್ರನಾಥ ಠಾಗೋರರು 1863ರಲ್ಲಿ ವಿಶ್ವಭಾರತಿ ವಿಶ್ವವಿದ್ಯಾಲಯವನ್ನು ಕಟ್ಟಿದ್ದರು. ಇದೇ ಜಾಗದಲ್ಲಿ ತಮ್ಮ ವಾಸಕ್ಕಾಗಿ ನಿವಾಸವನ್ನೂ ನಿರ್ಮಿಸಿಕೊಂಡಿದ್ದರು.
  • ಶಾಂತಿ ನಿಕೇತನಕ್ಕೆ ನೀಡಲಾಗಿರುವ ಈ ಗೌರವವು ಆ ವಿಶಾಲವಾದ ಬಂಗಲೆಗೆ ಮಾತ್ರ ಸೀಮಿತವಾಗಿದೆ. ಈ ವರ್ಷಕ್ಕೆ ಈ ವಿಶ್ವವಿದ್ಯಾಲಯ ಸ್ಥಾಪಿತವಾಗಿ 101 ವರ್ಷಗಳಾಗಿವೆ.
  • ಸಾಮಾನ್ಯವಾಗಿ, ನಮ್ಮ ದೇಶದ ಪ್ರಧಾನಮಂತ್ರಿಗಳು ಈ ವಿಶ್ವವಿದ್ಯಾಲಯದ ಕುಲಾಧಿಪತಿ (ವೈಸ್ ಚಾನ್ಸಲರ್) ಆಗಿರುತ್ತಾರೆ.

ಮಾನ್ಯತೆ ನೀಡಲು  ಪರಿಗಣಿಸಿದ ಅಂಶಗಳು

  • ‘ಭಾರತದ ಅಭಿವೃದ್ಧಿಯ ಪರ್ವಕ್ಕೆ ಪುಷ್ಠಿ ನೀಡಿದ ಅನೇಕ ಸಂಗತಿಗಳಲ್ಲಿ ರವೀಂದ್ರನಾಥ ಠಾಗೋರರೂ ಒಬ್ಬರು. ಭಾರತದಲ್ಲಿ ಉಂಟಾದ ಅನೇಕ ಸಾಮಾಜಿಕ ಕ್ರಾಂತಿಗಳಿಗೆ ರವೀಂದ್ರನಾಥ ಠಾಗೋರರ ಕೆಲಸಗಳು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸ್ಫೂರ್ತಿಯನ್ನು ನೀಡಿವೆ. ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ರವೀಂದ್ರನಾಥ ಠಾಗೋರರು ನೀಡಿದ ಸೇವೆಯನ್ನು ಪರಿಗಣಿಸಿ ಯುನೆಸ್ಕೋ ವಿಶ್ವ ಪಾರಂಪರಿಕ ತಾಣದ ಗೌರವ ನೀಡಲಾಗಿದೆ’ ಎಂದು ಸಮಿತಿ ಹೇಳಿದೆ.

ರವೀಂದ್ರನಾಥ ಟ್ಯಾಗೋರ್

  • ರವೀಂದ್ರನಾಥ ಟ್ಯಾಗೋರ್ ಕವಿ, ಸಂಗೀತಗಾರ, ಬಹುಶ್ರುತ, ಆಯುರ್ವೇದ-ಸಂಶೋಧಕ ಮತ್ತು ಕಲಾವಿದರಾಗಿದ್ದರು. 1913 ರಲ್ಲಿ, ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದರು. ಮೇ 7, 1861 ರಂದು ಕೋಲ್ಕತ್ತಾದ ಜೋರಸಾಕ್ಸ್‌ನ ಠಾಕುರ್ಬಾರಿಯಲ್ಲಿ ಜನಿಸಿದರು. ತಂದೆ ದೇವೇಂದ್ರನಾಥ ಟ್ಯಾಗೋರ್ ತಾಯಿ ಶಾರದಾ ದೇವಿ.
  • ಅವರು ‘ರವೀಂದ್ರಸಂಗೀತ’ ಎಂದು ಕರೆಯಲ್ಪಡುವ ಸುಮಾರು 2,230 ಹಾಡುಗಳನ್ನು ರಚಿಸಿದ್ದಾರೆ. ಟ್ಯಾಗೋರ್ ಅವರು ಹಿಂದೂಸ್ತಾನಿ ಸಂಗೀತದ ಠುಮ್ರಿ ಶೈಲಿಯಿಂದ ಹೆಚ್ಚು ಪ್ರಭಾವಿತರಾಗಿದ್ದರು.
  • 1971 ರಲ್ಲಿ, ರವೀಂದ್ರನಾಥ ಟ್ಯಾಗೋರ್ ಅವರು 1905 ರಲ್ಲಿ ಕೋಮುವಾದದ ಆಧಾರದ ಮೇಲೆ ಬಂಗಾಳದ ವಿಭಜನೆಯನ್ನು ಪ್ರತಿಭಟಿಸಲು ‘ಅಮರ್ ಸೋನಾರ್ ಬಾಂಗ್ಲಾ’ (ಬಾಂಗ್ಲಾದೇಶದ ರಾಷ್ಟ್ರೀಯ ಗೀತೆ) ಕವಿತೆಯನ್ನು ಬರೆದರು.
  • ಟ್ಯಾಗೋರ್ ಅವರು ‘ಜನ ಗಣ ಮನ’ (ಭಾರತದ ರಾಷ್ಟ್ರೀಯ ಗೀತೆ) ಬರೆದರು. 1911 ರಲ್ಲಿ, ‘ಜನ ಗಣ ಮನ’ ಮೊದಲ ಬಾರಿಗೆ ಕಲ್ಕತ್ತಾ ಅಧಿವೇಶನದಲ್ಲಿ ಹಾಡಲಾಯಿತು ಮತ್ತು 1950 ರಲ್ಲಿ ಭಾರತದ ರಾಷ್ಟ್ರಗೀತೆಯಾಗಿ ಅಂಗೀಕರಿಸಲ್ಪಟ್ಟಿತು. ‘ಶ್ರೀಲಂಕಾ ಮಠ’ ಶ್ರೀಲಂಕಾದ ರಾಷ್ಟ್ರಗೀತೆ ಮತ್ತು ಟಾಗೋರ್‌ರಿಂದ ಸ್ಫೂರ್ತಿ ಪಡೆದಿದೆ.