Published on: January 14, 2024

ಸಂಶ್ಲೇಷಿತ ಪ್ರತಿಜನಕ

ಸಂಶ್ಲೇಷಿತ ಪ್ರತಿಜನಕ

ಸುದ್ದಿಯಲ್ಲಿ ಏಕಿದೆ? ಭಾರತೀಯ ವಿಜ್ಞಾನ ಸಂಸ್ಥೆಯ (IISc) ಆಣ್ವಿಕ ಜೈವಿಕ ಭೌತವಿಜ್ಞಾನ ವಿಭಾಗದ ಪ್ರಾಧ್ಯಾಪಕ ಹಾಗೂ ತಂಡವು ಸಂಶ್ಲೇಷಿತ ಪ್ರತಿಜನಕ (ಆ್ಯಂಟಿಜೆನ್)ವನ್ನು ಅಭಿವೃದ್ಧಿಪಡಿಸಿದ್ದು, ಇದನ್ನು ಕೋವಿಡ್–19 ಸೋಂಕಿಗೆ ಅತ್ಯಂತ ಪರಿಣಾಮಕಾರಿ ಲಸಿಕೆ ತಯಾರಿಕೆಯಲ್ಲಿ ಬಳಸಬಹುದಾಗಿದೆ.

ಮುಖ್ಯಾಂಶಗಳು

  • ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಲಸಿಕೆಯು ಸಾರ್ಸ್‌ ಕೋವಿ–2 ವಿರುದ್ಧ ಹೋರಾಡುವ ಉತ್ತಮ ಫಲಿತಾಂಶ ಹೊಂದಿದೆ. ಆದರೆ ವೈರಾಣುವಿನ ರೂಪಾಂತರ ತ್ವರಿತಗತಿಯಲ್ಲಿ ಆಗುತ್ತಿರುವುದರಿಂದ ಅದರ ಪ್ರತಿಕಾಯ ಸಾಮರ್ಥ್ಯ ಸಾಕಾಗುವುದಿಲ್ಲ. ಇದೇ ನಿಟ್ಟಿನಲ್ಲಿ ನಡೆಸಿದ ಸಂಶೋಧನೆ ಉತ್ತಮ ಫಲಿತಾಂಶ ನೀಡಿದೆ.
  • ಆಣ್ವಿಕ ಜೈವಿಕ ಭೌತವಿಜ್ಞಾನ ವಿಭಾಗದ ಈ ಸಂಶೋಧಕರ ತಂಡವು 2000ನೇ ಇಸವಿಯಿಂದ ವೈರಾಣುಗಳಿಗೆ ಲಸಿಕೆ ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ತೊಡಗಿದೆ. ಏಡ್ಸ್ ಹಾಗೂ ಇನ್ಫ್ಲುಯೆನ್ಜಾ ವಿರುದ್ಧ ಪ್ರತಿಜನಕವನ್ನು ಅಭಿವೃದ್ಧಿಪಡಿಸಿದ್ದಾರೆ.
  • ಮಿನ್ವ್ಯಾಕ್ಸ್ ಎಂಬ ಸ್ಟಾರ್ಟ್‌ಅಪ್ ಜತೆಗೂಡಿ ಈ ಪ್ರತಿಜನಕವನ್ನು ಅಭಿವೃದ್ಧಿಪಡಿಸಲಾಗಿದೆ. ಇದರ ಸಂಪೂರ್ಣ ಸಂಶೋಧನೆ IIScಯಲ್ಲೇ ಆಗಿದೆ.

ಉದ್ದೇಶ

ಇದು ಕೋವಿಡ್ ಮಾತ್ರವಲ್ಲದೇ ಸಾರ್ಸ್‌–ಕೋವಿ–2 ಹಾಗೂ ಸದ್ಯ ಇರುವ ಇತರ ಯಾವುದೇ ರೂಪಾಂತರ ವೈರಾಣುಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿದೆ.

ಭಾರತೀಯ ವಿಜ್ಞಾನ ಸಂಸ್ಥೆಯ (IISc)

  • ಸ್ಥಾಪನೆ: 1909
  • ಸ್ಥಳ: ಬೆಂಗಳೂರು
  • ಸ್ಥಾಪಕರು: ಜಮ್‍ಸೆಟ್‍ಜಿ ಟಾಟಾ ಮತ್ತು ಕೃಷ್ಣರಾಜ ಒಡೆಯರ್ IV
  • ವಿಜ್ಞಾನ, ಎಂಜಿನಿಯರಿಂಗ್, ವಿನ್ಯಾಸ ಮತ್ತು ನಿರ್ವಹಣೆಯಲ್ಲಿ ಉನ್ನತ ಶಿಕ್ಷಣ ಮತ್ತು ಸಂಶೋಧನೆಗಾಗಿ ಸಾರ್ವಜನಿಕ, ಡೀಮ್ಡ್, ಸಂಶೋಧನಾ ವಿಶ್ವವಿದ್ಯಾಲಯವಾಗಿದೆ.