Published on: October 17, 2023

ಸಮಾನತೆಯ ಪ್ರತಿಮೆ

ಸಮಾನತೆಯ ಪ್ರತಿಮೆ

ಸುದ್ದಿಯಲ್ಲಿ ಏಕಿದೆ? ಉತ್ತರ ಅಮೆರಿಕದ ಮೇರಿಲ್ಯಾಂಡ್ನ ಆ್ಯಕೊಕೀಕ್ ನಗರದ 13 ಎಕರೆಯಲ್ಲಿ ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 19 ಅಡಿ ಎತ್ತರದ ಪ್ರತಿಮೆಯನ್ನು 2023 ಅಕ್ಟೋಬರ್ 14 ರಂದು ಲೋಕಾರ್ಪಣೆಗೊಳಿಸಲಾಯಿತು.

ಮುಖ್ಯಾಂಶಗಳು

  • ಇದು ಭಾರತದ ಹೊರಗೆ ನಿರ್ಮಿಸಿರುವ ಅತಿ ಎತ್ತರದ ಪ್ರತಿಮೆಯಾಗಿದೆ.
  • ಪ್ರತಿಮೆಯ ನಿರ್ಮಾಣ : ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರ
  • ಈ ಪ್ರತಿಮೆಗೆ ಸಮಾನತೆಯ ಪ್ರತಿಮೆ ಎಂದು ಹೆಸರಿಡಲಾಗಿದೆ
  • ಈ ಸ್ಮಾರಕವು ಬಾಬಾ ಸಾಹೇಬ್ ಅವರ ಸಂದೇಶಗಳು ಮತ್ತು ಉಪದೇಶಗಳನ್ನು ಸಾರಲಿದೆ. ಜತೆಗೆ ಮಾನವ ಹಕ್ಕುಗಳು ಹಾಗೂ ಸಮಾನತೆಯ ಪ್ರತಿಬಿಂಬವಾಗಿರಲಿದೆ.
  • ಭಾರತದ ಹೊರಗೆ ಬಿ. ಆರ್. ಅಂಬೇಡ್ಕರ್ ಅವರ ಅತಿ ದೊಡ್ಡ ಪ್ರತಿಮೆ ಇದಾಗಿದೆ

ಅಕ್ಟೋಬರ್ 14ರ ಪ್ರಾಮುಖ್ಯತೆ

ಅಕ್ಟೋಬರ್ 14, 1956ರಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಮ್ಮ 5 ಲಕ್ಷ ಅನುಯಾಯಿಗಳ ಜೊತೆಗೆ ಹಿಂದೂ ಧರ್ಮದಿಂದ ಬೌದ್ದ ಧರ್ಮಕ್ಕೆ ಮತಾಂತರ ಆಗಿದ್ದರು. ನಾಗಪುರದಲ್ಲಿ ನಡೆದ ಈ ಕಾರ್ಯಕ್ರಮ ಐತಿಹಾಸಿಕ ಸನ್ನಿವೇಶವಾಗಿದೆ. ಇದನ್ನು ಇತಿಹಾಸದ ಅತಿ ದೊಡ್ಡ ಸಾಮೂಹಿಕ ಮತಾಂತರ ಕಾರ್ಯಕ್ರಮ ಎಂದೂ ಬಣ್ಣಿಸಲಾಗಿದೆ. ಹೀಗಾಗಿ. ಅಂಬೇಡ್ಕರ್ ಅವರು ಬೌದ್ದ ಧರ್ಮಕ್ಕೆ ಮತಾಂತರ ಹೊಂದಿದ ದಿನದಂದೇ ಅವರ ಅಮೆರಿಕದ ಮೇರಿ ಲ್ಯಾಂಡ್‌ನಲ್ಲಿ ಅವರ ಪ್ರತಿಮೆ ಅನಾವರಣಗೊಳಿಸಲಾಯಿತು. ಅಕ್ಟೋಬರ್ 14 ರಂದು ಧಮ್ಮ ಚಕ್ರ ಪರಿವರ್ತನ ದಿನವನ್ನಾಗಿಯೂ ಆಚರಣೆ ಮಾಡಲಾಗುತ್ತದೆ

ಬಿ. ಆರ್. ಅಂಬೇಡ್ಕರ್

  • ಜನನ: ಏಪ್ರಿಲ್ 14, 1891
  • ಸಂವಿಧಾನದ ಕರಡು ರಚನಾ ಸಮಿತಿ ಅಧ್ಯಕ್ಷರಾಗಿದ್ದರು.
  • ಅಂಬೇಡ್ಕರ್ ಅವರನ್ನು ಸಂವಿಧಾನ ಶಿಲ್ಪಿ ಎಂದೇ ಕರೆಯಲಾಗುತ್ತದೆ.
  • ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರೂ ಅವರ ಮೊದಲ ಸಚಿವ ಸಂಪುಟದಲ್ಲಿ ಅಂಬೇಡ್ಕರ್ ಅವರು ಕಾನೂನು ಹಾಗೂ ನ್ಯಾಯ ಸಚಿವರಾಗಿ ಸೇವೆ ಸಲ್ಲಿಸಿದ್ದರು.
  • ಡಿಸೆಂಬರ್ 6, 1956ರಂದು ಅಂಬೇಡ್ಕರ್ ಅವರು ನಿಧನರಾದರು.

ನಿಮಗಿದು ತಿಳಿದಿರಲಿ

ಅಂಬೇಡ್ಕರ್ ಅವರ 123ನೇ ದಿನಾಚರಣೆಯ ದಿನದಂದು ಭಾರತದಲ್ಲಿ ಅತಿ ಎತ್ತರವಾಗಿರುವ (125 ಅಡಿ) ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ತೆಲಂಗಾಣದ ರಾಜಧಾನಿ ಹೈದರಾಬಾದ್ ನಲ್ಲಿ ನಿರ್ಮಿಸಲಾಗಿದೆ.