Published on: October 17, 2023

ಸಿಯಾಚಿನ್ ಗ್ಲೇಸಿಯರ್ ಮೊಬೈಲ್ ಟವರ್

ಸಿಯಾಚಿನ್ ಗ್ಲೇಸಿಯರ್ ಮೊಬೈಲ್ ಟವರ್

ಸುದ್ದಿಯಲ್ಲಿ ಏಕಿದೆ? ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ಮತ್ತು ಭಾರತೀಯ ಸೇನೆಯ ಸಹಯೋಗದಲ್ಲಿ ಜಗತ್ತಿನ ಅತಿ ಎತ್ತರದ ಯುದ್ಧಭೂಮಿ ಎಂದು ಕರೆಸಿಕೊಳ್ಳುವ ಸಿಯಾಚಿನ್ ಗ್ಲೇಸಿಯರ್ನಲ್ಲಿ ಇದೇ ಮೊದಲ ಬಾರಿಗೆ ಮೊಬೈಲ್ ಟವರನ್ನು ಸ್ಥಾಪಿಸಲಾಗಿದೆ.

ಮುಖ್ಯಾಂಶಗಳು

  • ‘ಸಿಯಾಚಿನ್ ಯೋಧರು ಮತ್ತು ಬಿಎಸ್ಎನ್ಎಲ್ ಸಹಯೋಗದೊಂದಿಗೆ 15,500 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿ ನಿಯೋಜಿತಗೊಂಡ ಸೈನಿಕರಿಗೆ ಮೊಬೈಲ್ ಸಂವಹನವನ್ನು ಕಲ್ಪಿಸಲು ಅಕ್ಟೋಬರ್ 6 ರಂದು ಮೊಟ್ಟ ಮೊದಲ ಬಿಎಸ್ಎನ್ಎಲ್ ಟವರ್ ಮತ್ತು ಬೇಸ್ ಟ್ರಾನ್ಸಿವರ್ ಸ್ಟೇಷನ್ (ಬಿಟಿಎಸ್) ಅನ್ನು ಸ್ಥಾಪಿಸಿದೆ. ಇದರಿಂದಾಗಿ ಹಿಮಗಳ ನಡುವೆ ದೇಶ ಕಾಯುವ ಕೆಲಸದಲ್ಲಿ ತೊಡಗಿರುವ ಯೋಧರು ತಮ್ಮ ಪ್ರೀತಿ ಪಾತ್ರರೊಂದಿಗೆ ದೂರವಾಣಿ ಮೂಲಕ ಮಾತನಾಡಬಹುದಾಗಿದೆ.

 ಸಿಯಾಚಿನ್ ಗ್ಲೇಸಿಯರ್

  • ಹಿಮಾಲಯದ ಪೂರ್ವ ಕಾರಕೋರಂ ಶ್ರೇಣಿಯಲ್ಲಿದೆ.
  • ನುಬ್ರಾ ನದಿಯು ಸಿಯಾಚಿನ್ ಹಿಮನದಿಯಿಂದ ಹುಟ್ಟುತ್ತದೆ.
  • ಇದು ವಿಶ್ವದ ಅತಿ ಎತ್ತರದ ಯುದ್ಧಭೂಮಿಯಾಗಿದೆ.
  • ಸಂಪೂರ್ಣ ಸಿಯಾಚಿನ್ ಗ್ಲೇಸಿಯರ್, ಎಲ್ಲಾ ಪ್ರಮುಖ ಪಾಸ್ಗಳೊಂದಿಗೆ, 1984 ರಿಂದ (ಆಪರೇಷನ್ ಮೇಘದೂತ್) ಭಾರತದ ಆಡಳಿತದಲ್ಲಿದೆ.
  • ಇದು ತಜಕಿಸ್ತಾನದ ಫೆಡ್ಚೆಂಕೊ ಗ್ಲೇಸಿಯರ್ ನಂತರ ವಿಶ್ವದ ಧ್ರುವೇತರ ಪ್ರದೇಶಗಳಲ್ಲಿ ಎರಡನೇ ಅತಿ ಉದ್ದದ ಹಿಮನದಿಯಾಗಿದೆ.