Published on: December 1, 2021

ಸುದ್ಧಿ ಸಮಾಚಾರ 01 ಡಿಸೆಂಬರ್ 2021

ಸುದ್ಧಿ ಸಮಾಚಾರ 01 ಡಿಸೆಂಬರ್ 2021

  • ಭಾರತದಲ್ಲಿ ಕೋವಿಡ್ – 19 ಬಿಕ್ಕಟ್ಟಿನ ನಡುವೆಯೂ 2021ರ ಮೊದಲ 11 ತಿಂಗಳಿನಲ್ಲಿ 37 ಯುನಿಕಾರ್ನ್‌ಗಳು ಹೊರಹೊಮ್ಮಿವೆ. ಈ ಮೂಲಕ ದೇಶದ ಒಟ್ಟು ಯುನಿಕಾರ್ನ್ಗಳ ಸಂಖ್ಯೆ 77ಕ್ಕೆ ಏರಿದೆ.
  • ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ)ಯನ್ನು ದೇಶಾದ್ಯಂತ ಜಾರಿಗೊಳಿಸುವ ಕುರಿತು ಇದುವರೆಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಕೇಂದ್ರ ಸರಕಾರ ಲೋಕಸಭೆಗೆ ಮಾಹಿತಿ ನೀಡಿದೆ. ರಾಷ್ಟ್ರೀಯ ಪೌರತ್ವ ನೋಂದಣಿ ಎಂದರೆ, ದೇಶದಲ್ಲಿರುವ ಎಲ್ಲಾ ನಾಗರಿಕರ ದಾಖಲೆ ಸಂಗ್ರಹ ಮಾಡುವ ಪ್ರಕ್ರಿಯೆ.
  • ಇಸ್ರೇಲ್ ನಿರ್ಮಿತ ವಿಧ್ವಂಸಕ ಹೆರಾನ್ ಡ್ರೋನ್ ಕೊನೆಗೂ ಭಾರತೀಯ ಸೇನೆಯ ಬತ್ತಳಿಕೆ ಸೇರಿದ್ದು, ಲಡಾಖ್ ಸೆಕ್ಟರ್ನಲ್ಲಿ ನಿಯೋಜನೆಗೊಳಿಸಲಾಗುತ್ತದೆ
  • ವಿದೇಶದಿಂದ ಭಾರತಕ್ಕೆ ಬಂದ ಪ್ರಯಾಣಿಕರಿಗೆ ಕೊರೊನಾ ಸೋಂಕು ದೃಢಪಟ್ಟರೆ ಅವರ ಜೈವಿಕ ಮಾದರಿಯನ್ನು ಜಿನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಬೇಕು ಮತ್ತು ವರದಿ ಬರುವವರೆಗೆ ಮನೆಯಲ್ಲಿಯೇ ಪ್ರತ್ಯೇಕ ವಾಸದಲ್ಲಿಡಬೇಕು ಎಂದು ಕೇಂದ್ರ ಸರಕಾರವು ರಾಜ್ಯಗಳಿಗೆ ಸೂಚನೆ ನೀಡಿದೆ. ಜೀನೋಮ್ ಎನ್ನುವುದು ಜೀವಕೋಶದಲ್ಲಿ ಡಿಎನ್ಎ ಅಥವಾ ಜೀನ್ಗಳ ಅನುಕ್ರಮವಾಗಿದೆ.
  • ಬಾರ್ಬಡೋಸ್ ತನ್ನನ್ನು ಹೊಸ ಗಣರಾಜ್ಯವೆಂದು ಘೋಷಿಸಿಕೊಂಡಿದ್ದು, ಸಾಂಡ್ರಾ ಮೇಸನ್ ಅವರನ್ನು ತನ್ನ ಮೊದಲ ಅಧ್ಯಕ್ಷೆಯನ್ನಾಗಿ ಚುನಾಯಿಸಿದೆ. ಈ ಮೂಲಕ 400 ವರ್ಷಗಳ ಬ್ರಿಟನ್ ಅಧಿಪತ್ಯವನ್ನು ಬಾರ್ಬಡೋಸ್ ಕೊನೆಗಾಣಿಸಿದೆ.
  • ಡಿಸೆಂಬರ್ 1ಅನ್ನು ವಿಶ್ವ ಏಡ್ಸ್ ದಿನವನ್ನಾಗಿ ಆಚರಿಸಲಾಗುತ್ತದೆ.