Published on: September 20, 2021

ಸುದ್ಧಿ ಸಮಾಚಾರ 20 ಸೆಪ್ಟೆಂಬರ್ 2021

ಸುದ್ಧಿ ಸಮಾಚಾರ 20 ಸೆಪ್ಟೆಂಬರ್ 2021

  • ಲಿಂಗ ತಾರತಮ್ಯ ನಿವಾರಣೆಗಾಗಿ ಲಿಂಗಾಧಾರಿತ ಬಜೆಟ್ ಪರಿಕಲ್ಪನೆಯ ಅಡಿಯಲ್ಲಿ ಕೆಲವು ವರ್ಷಗಳಿಂದ ಈಚೆಗೆ ಮಹಿಳಾ ಉದ್ದೇಶಿತ ಕಾರ್ಯಕ್ರಮಗಳಿಗೆ ಹೆಚ್ಚಿನ ಅನುದಾನ ಘೋಷಿಸಿದ್ದರೂ, ವಾಸ್ತವಿಕ ವೆಚ್ಚದಲ್ಲಿ ಕುಸಿತವಾಗಿದೆ. ಲಿಂಗಾಧಾರಿತ ಬಜೆಟ್ ಘೋಷಣೆಗೆ ಸೀಮಿತವಾಗಿದೆ ಎಂದು ಮಹಾಲೇಖಪಾಲರ (ಸಿಎಜಿ) ವರದಿ ಹೇಳಿದೆ.
  • ಸ್ಥಳೀಯವಾಗಿ ‘ಕಾಟ್ಲೆ’ ಎಂದು ಕರೆಯಲಾಗುವ ‘ಕೂಪರ್ ಮಹಸೀರ್’ ಅನ್ನು ಸಿಕ್ಕಿಂ ಸರ್ಕಾರವು ರಾಜ್ಯ ಮೀನು ಎಂದು ಘೋಷಿಸಿದೆ.
  • ಈ ಶತಮಾನದ ಅಂತ್ಯದ ವೇಳೆಗೆ ಭೂಮಿಯ ಮೇಲಿನ ಜಾಗತಿಕ ತಾಪಮಾನ ಅತ್ಯಂತ ಅಪಾಯಕಾರಿ ಮಟ್ಟ ತಲುಪಲಿದೆ’ ಎಂದು ವಿಶ್ವಸಂಸ್ಥೆಯ ಹವಾಮಾನ ಬದಲಾವಣೆಯ ಮೇಲಿನ ಫ್ರೇಮ್ವರ್ಕ್ ಕನ್ವೆನ್ಷನ್ ವರದಿ (UNFCCC) ಎಚ್ಚರಿಕೆ ನೀಡಿದೆ.
  • ಚೀನಾ ಮತ್ತು ಇತರ ಸರ್ಕಾರಗಳ ಒತ್ತಡಕ್ಕೆ ಮಣಿದ ಆರೋಪಕ್ಕೆ ಗುರಿಯಾಗಿರುವ ವಿಶ್ವಬ್ಯಾಂಕ್ ತನ್ನ ಜನಪ್ರಿಯ ಆರ್ಥಿಕ ದೇಶಗಳ ಶ್ರೇಯಾಂಕ ವರದಿಯನ್ನು ಕೈಬಿಟ್ಟಿದೆ.
  • ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ತನ್ನ ಡೆವಲಪ್‌ಮೆಂಟ್‌ ಆಫಿಸರ್‌ಗಳಿಗಾಗಿ ಪ್ರಗತಿ ಆ್ಯಪ್ (ಪರ್ಫಾರ್ಮೆನ್ಸ್‌ ರಿವ್ಯು ಅಪ್ಲಿಕೇಷನ್‌, ಗ್ರೋತ್‌ ಆ್ಯಂಡ್‌ ಟ್ರೆಂಡ್‌ ಇಂಡಿಕೇಟರ್‌) ಬಿಡುಗಡೆ ಮಾಡಿದೆ.
  • ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ‌ ಡಾ.ಚಂದ್ರಶೇಖರ‌ ಕಂಬಾರ ಅವರು ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಸಾಹಿತಿ ಎಂ.ವೀರಪ್ಪ ಮೊಯಿಲಿ ಅವರಿಗೆ 2020ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ ಮಾಡಿದರು. ಮೊಯಿಲಿ ಅವರ ‘ಶ್ರೀ ಬಾಹುಬಲಿ ಅಹಿಂಸಾ ದಿಗ್ವಜಯಂ’ ಕೃತಿಗೆ ಅಕಾಡೆಮಿಯ ಪ್ರಶಸ್ತಿ ದೊರೆತಿದೆ.
  • ಪಂಜಾಬಿನ ನೂತನ ಮುಖ್ಯಮಂತ್ರಿಯಾಗಿ ಚರಣ್ ಜಿತ್ ಸಿಂಗ್ ಛನಿ ಅಧಿಕಾರ ಸ್ವೀಕರಿಸಿದರು.
  • 2019ನೇ ಸಾಲಿನ ದಕ್ಷಿಣ ಭಾರತ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ(SIIMA) ಪ್ರಕಟವಾಗಿದ್ದು, ಕನ್ನಡದಲ್ಲಿ ಯಜಮಾನ ಚಿತ್ರಕ್ಕೆ ಅತ್ಯುತ್ತಮ ಕನ್ನಡ ಚಿತ್ರ ಹಾಗೂ ನಟ ದರ್ಶನ್ ಅವರಿಗೆ ಅತ್ಯುತ್ತಮ ನಾಯಕ ನಟ ಪ್ರಶಸ್ತಿ ಲಭಿಸಿದೆ. ಒಟ್ಟು 8 ಪ್ರಶಸ್ತಿಗಳು ಯಜಮಾನ ಚಿತ್ರಕ್ಕೆ ಲಭಿಸಿದೆ.