Published on: September 22, 2021

ಸುದ್ಧಿ ಸಮಾಚಾರ 22 ಸೆಪ್ಟೆಂಬರ್ 2021

ಸುದ್ಧಿ ಸಮಾಚಾರ 22 ಸೆಪ್ಟೆಂಬರ್ 2021

  • ಭಾರತ ಸರ್ಕಾರದ ಇ-ಸಂಜೀವಿನಿ ರಾಷ್ಟ್ರೀಯ ಟೆಲಿ ಮೆಡಿಸನ್ ಸೇವೆ ನಗರ ಮತ್ತು ಗ್ರಾಮೀಣ ಭಾರತದ ನಡುವಿನ ಡಿಜಿಟಲ್ ಅಂತರ ನಿವಾರಣೆಗೆ ಸಹಕಾರಿಯಾಗಿದೆ. ಅಲ್ಲದೆ ಇದು ದ್ವಿತೀಯ ಹಾಗೂ ತೃತೀಯ ಹಂತದ ಆಸ್ಪತ್ರೆಗಳಲ್ಲಿನ ವೈದ್ಯರು ಮತ್ತು ವಿಶೇಷ ತಜ್ಞರ ಕೊರತೆಯನ್ನು ನೀಗಿಸುತ್ತಿದೆ. 2019ರ ನವೆಂಬರ್ ನಲ್ಲಿ ಈ ಸೇವೆ ಆರಂಭವಾಯಿತು. ಆಂಧ್ರಪ್ರದೇಶ ಮೊದಲು ಇ-ಸಂಜೀವಿನಿ ಎಬಿ-ಎಚ್ ಡಬ್ಲೂಸಿ ಸೇವೆ ಜಾರಿಗೊಳಿಸಿತು. ಇದು ಆರಂಭವಾದ ನಂತರ ನಾನಾ ರಾಜ್ಯಗಳಲ್ಲಿ ಸುಮಾರು 2ಸಾವಿರ ಹಬ್ ಮತ್ತು 28ಸಾವಿರ ಸ್ಪೋಕ್ ಮಾದರಿ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.
  • ಭಾರತೀಯ ವಾಯುಸೇನೆಯ ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ವಿವೇಕ್ ರಾಮ್ ಚೌಧರಿ ನೇಮಕಗೊಂಡಿದ್ದಾರೆ. ಹಾಲಿ ಏರ್ ಚೀಫ್‌ ಮಾರ್ಷಲ್ ಆರ್‌ಕೆಎಸ್‌ ಭದೌರಿಯಾ ಅವರು ಸೆಪ್ಟೆಂಬರ್ 30 ರಂದು ನಿವೃತ್ತರಾಗಲಿದ್ದು, ಅವರ ನಿವೃತ್ತಿ ಬಳಿಕ ಭಾರತೀಯ ವಾಯುಪಡೆಯ ಮುಖ್ಯಸ್ಥರಾಗಿ ವಿ. ಆರ್‌. ಚೌಧರಿ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
  • ಕಾರವಾರ ತಾಲ್ಲೂಕಿನ ಮಾಜಾಳಿ ಕಡಲತೀರದಲ್ಲಿ ‘ಟೈಗರ್ ಶಾರ್ಕ್’ ಹೆಣ್ಣು ಮೀನಿನ ಕಳೇಬರ ಕಂಡುಬಂದಿದೆ. ಇದು ಸುಮಾರು ಒಂದೂವರೆ ಮೀಟರ್ ಉದ್ದವಿತ್ತು.ವಿಶ್ವದಾದ್ಯಂತ ಆಳಸಮುದ್ರದಲ್ಲಿ ಕಂಡುಬರುವ ಪ್ರಭೇದ ಇದಾಗಿದ್ದು, ಹುಲಿಯ ಚರ್ಮದಲ್ಲಿರುವಂಥ ಪಟ್ಟೆಗಳನ್ನು ಹೊಂದಿದೆ. ಇದೇ ಕಾರಣಕ್ಕೆ ‘ಟೈಗರ್ ಶಾರ್ಕ್’ ಎಂಬ ಹೆಸರು ಬಂದಿದೆ. ಶಾರ್ಕ್ಗಳ ಪೈಕಿ ನಾಲ್ಕನೇ ಅತಿ ದೊಡ್ಡದು ಎಂದು ಗುರುತಿಸಲಾಗಿದೆ.
  • ತನ್ನ ದೇಹದ ವಿಶಿಷ್ಠ ರಚನೆಯಿಂದ ಈ ಭೂಮಿಯ ಮೇಲೆ ಯಾರೇ ಆದರೂ ಸುಲಭವಾಗಿ ಗುರುತಿಸಬಹುದಾದ ಪ್ರಾಣಿ ಘೇಂಡಾಮೃಗ ಅಥವಾ ಖಡ್ಗಮೃಗ. ಅಳಿವಿನಂಚಿನಲ್ಲಿರುವ ಪ್ರಾಣಿಗಳ ಪಟ್ಟಿಗೆ ಸೇರಿರುವ ಈ ಘೇಂಡಾಮೃಗಗಳನ್ನು ಉಳಿಸಲು ಹಾಗೂ ಅವುಗಳ ಬಗ್ಗೆ ಜಾಗೃತಿ ಮೂಡಿಸಲು ಸೆ. 22ಅನ್ನು ‘ವಿಶ್ವ ಘೇಂಡಾಮೃಗಗಳ ದಿನ’ವನ್ನಾಗಿ ಆಚರಿಸಲಾಗುತ್ತಿದೆ.