Published on: December 29, 2021

ಸುದ್ಧಿ ಸಮಾಚಾರ 29 ಡಿಸೆಂಬರ್ 2021

ಸುದ್ಧಿ ಸಮಾಚಾರ 29 ಡಿಸೆಂಬರ್ 2021

  • ಕೃಷಿಯಲ್ಲಿ ಕಳೆನಾಶಕ್ಕೆ ಬಳಸುತ್ತಿರುವ ಕಳೆನಾಶಕದಲ್ಲಿರುವ ಟಾಕ್‌ಸೈಡ್, ಆರ್ಗಾನೋ ಪಾಸ್ಪರಸ್, ಪಾಸ್ಪನೇಟ್ ಇಡೀ ಜೀವ ಸಂಕುಲಕ್ಕೆ ಅಪಾಯಕಾರಿ ಎಂದು ಗಾಂಧಿ ಕೃಷಿ ವಿಜ್ಞಾನ ಕೇಂದ್ರ ಮತ್ತು ರಾಜ್ಯದ ಇತರ ಕೃಷಿ ವಿವಿಗಳ ತಜ್ಞರು ಎಚ್ಚರಿಕೆ ನೀಡಿದ್ದಾರೆ.
  • ನೀತಿ ಆಯೋಗದ ನೂತನ ಆರೋಗ್ಯ ಸೌಕರ್ಯ ನಿರ್ವಹಣಾ ಪಟ್ಟಿಯಲ್ಲಿ ಕೇರಳ ರಾಜ್ಯ ಅಗ್ರ ಸ್ಥಾನದಲ್ಲಿದ್ದು, ಉತ್ತರ ಪ್ರದೇಶಕ್ಕೆ ಕೊನೆಯ ಸ್ಥಾನ ದಕ್ಕಿದೆ.
  • ವಿಶೇಷ ವಿತ್ತ ವಲಯಗಳಿಗೆ ತಮ್ಮ ಉತ್ಪನ್ನಗಳನ್ನು ದೇಶಿ ಮಾರುಕಟ್ಟೆಗಳಲ್ಲಿ ಯಾವುದೇ ಹೆಚ್ಚುವರಿ ಕಸ್ಟಮ್ಸ್‌ ಸುಂಕದ ಹೊರೆ ಇಲ್ಲದೆಯೇ ಮುಕ್ತವಾಗಿ ಮಾರಾಟ ಮಾಡಲು ಶೀಘ್ರ ಅನುಮತಿ ಸಿಗುವ ಸಾಧ್ಯತೆ ಇದೆ. ವಿಶೇಷ ವಿತ್ತ ವಲಯಗಳಿಗೆ ಇರುವ ಕಠಿಣ ನಿಯಮಗಳನ್ನು ಸಡಿಲಗೊಳಿಸಿ ಉತ್ಪಾದನೆ ಹೆಚ್ಚಿಸಲು ಹಾಗೂ ದೇಶಿ ಮಾರುಕಟ್ಟೆಯನ್ನು ಒದಗಿಸಲು ಹಣಕಾಸು ಸಚಿವಾಲಯ ಚಿಂತನೆ ನಡೆಸಿದೆ.
  • ಭಾರತದ ಕುಕ್ಕುಟೋದ್ಯಮ ಉತ್ಪನ್ನಗಳ ಮೇಲೆ ಹೇರಿದ್ದ ನಿಷೇಧವನ್ನು ಸಂಯುಕ್ತ ಅರಬ್ ಸಂಸ್ಥಾನ ತೆರವುಗೊಳಿಸಿದೆ. ಆ ಮೂಲಕ ಐದು ವರ್ಷಗಳ ಬಳಿಕ ಯುಎಇ, ಭಾರತದ ಕುಕ್ಕುಟೋದ್ಯಮ ಉತ್ಪನ್ನಗಳ ಮೇಲೆ ಹೇರಿದ್ದ ನಿರ್ಬಂಧವನ್ನು ರದ್ದು ಮಾಡಿದೆ.
  • ಮ್ಯಾನ್‌ ಬೂಕರ್‌ ಪ್ರಶಸ್ತಿಗೆ ಪಾತ್ರರಾದ ನ್ಯೂಜಿಲೆಂಡ್‌ನ ಕಾದಂಬರಿಕಾರ್ತಿ ಕೆರಿ ಹುಲ್ಮೆ ಸೌತ್‌ ಐಲ್ಯಾಂಡ್‌ನ ವೈಮೇಟ್‌ನಲ್ಲಿ ನಿಧನರಾದರು. ತಮ್ಮ ಮೊದಲ ಕಾದಂಬರಿ ‘ದಿ ಬೋನ್ ಪೀಪಲ್’ಗೆ 1984ರಲ್ಲಿ ಹುಲ್ಮೆ ಅವರು ಬೂಕರ್ ಪ್ರಶಸ್ತಿ ಪಡೆದಿದ್ದರು.