Published on: April 18, 2022

ಸುದ್ಧಿ ಸಮಾಚಾರ18 ಏಪ್ರಿಲ್ 2022

ಸುದ್ಧಿ ಸಮಾಚಾರ18 ಏಪ್ರಿಲ್ 2022

  • ರಾಜ್ಯದ ಮುಜರಾಯಿ ಇಲಾಖೆಯ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ಉಡುಪಿ ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದಲ್ಲಿ ಭಕ್ತರಿಕೆ ನೀಡುವ ಭೋಜನ ಪ್ರಸಾದವು ರಾಷ್ಟ್ರೀಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಪ್ರಮಾಣಪತ್ರ ಪಡೆದುಕೊಂಡಿದೆ.
  • ಜಗದ್ಗುರು ಡಾ: ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿಗಳ ಜನ್ಮದಿನವನ್ನು ಭಾವೈಕ್ಯ ದಿನವನ್ನಾಗಿ ಆಚರಿಸಲಾಗುವುದು. ಈ ಕುರಿತು ಶೀಘ್ರದಲ್ಲೇ ಸರ್ಕಾರಿ ಆದೇಶವನ್ನು ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
  • ಈ ವರ್ಷ ದೇಶದಲ್ಲಿ ಮುಂಗಾರು ಮಳೆ ‘ಸಾಮಾನ್ಯ’ವಾಗಿ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ನೈರುತ್ಯ ಮುಂಗಾರು ಮಾರುತಗಳು ಈ ವರ್ಷ ಪ್ರತಿ ಬಾರಿಯಂತೆ ಇರಲಿದ್ದು, ದೇಶಾದ್ಯಂತ ಸರಾಸರಿ 87 ಸೆಂಟಿ ಮೀಟರ್ ಇರಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.
  • ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನಲ್ಲಿ 108 ಅಡಿ ಎತ್ತರದ ಭಗವಾನ್ ಹನುಮಾನ್ ಪ್ರತಿಮೆಯನ್ನು ಅನಾವರಣ ಮಾಡಿದ್ದಾರೆ. ಭಗವಾನ್ ಹನುಮಂತ ಚಾರ್ ಧಾಮ್ ಯಾತ್ರೆಯ ಅಂಗವಾಗಿ ದೇಶದ ನಾಲ್ಕು ದಿಕ್ಕುಗಳಲ್ಲೂ ನಾಲ್ಕು ಪ್ರತಿಮೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು
  • ಭಾರತದ ಕಡು ಬಡತನ ಪ್ರಮಾಣವು 2011ರಲ್ಲಿ ಇದ್ದುದಕ್ಕಿಂತ 2019ರಲ್ಲಿ ಶೇ 12.3ರಷ್ಟು ಕಡಿಮೆಯಾಗಿದೆ ಎಂದು ವಿಶ್ವ ಬ್ಯಾಂಕ್ ನೀತಿ ಸಂಶೋಧನೆಯ ಪ್ರಾಥಮಿಕ ವರದಿ ಹೇಳಿದೆ.
  • ಉಕ್ರೇನ್ ಮತ್ತು ರಷ್ಯಾದಿಂದ ಅತಿ ಹೆಚ್ಚು ಗೋಧಿ ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಒಂದಾಗಿರುವ ಈಜಿಪ್ಟ್ ಈಗ ಭಾರತವನ್ನು ಗೋಧಿ ಪೂರೈಕೆದಾರರನ್ನಾಗಿ ಅನುಮೋದಿಸಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಹೇಳಿದ್ದಾರೆ.
  • ಪರಮಾಣು ಶಕ್ತಿ ಆಯೋಗದ ಅಧ್ಯಕ್ಷ ಕಮಲೇಶ್ ನೀಲಕಂಠ ವ್ಯಾಸ್ ಅವರಿಗೆ ಸರ್ಕಾರ ಒಂದು ವರ್ಷದ ಸೇವಾವಧಿ ವಿಸ್ತರಣೆಯನ್ನು ನೀಡಿದೆ.
  • ನಾಸಾದ ಹಬಲ್ ಬಾಹ್ಯಾಕಾಶ ದೂರದರ್ಶಕ ಯಂತ್ರ, ಇದುವರೆಗಿನ ಅತ್ಯಂತ ಬೃಹತ್ ಧೂಮಕೇತುವೊಂದನ್ನು ಪತ್ತೆಹಚ್ಚಿದೆ. ಬರೋಬ್ಬರಿ 80 ಮೈಲುಗಳ ಸುತ್ತಳತೆ ಹೊಂದಿರುವ ಈ ಧೂಮಕೇತು, ಮಾನವ ಜನಾಂಗ ಬಲ್ಲ ಅತ್ಯಂತ ದೈತ್ಯ ಧೂಮಕೇತುವಾಗಿದೆ ಎಂದು ನಾಸಾದ ಖಗೋಳ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.
  • ಮೊಟ್ಟಮೊದಲ ಬಾರಿಗೆ ಭಾರತದಲ್ಲಿ ತಯಾರಿಸಲಾದ ಅಲಯನ್ಸ್‌ ಏರ್‌ ಸಂಸ್ಥೆಯ ಡಾರ್ನಿಯರ್ 228 ವಾಣಿಜ್ಯ ವಿಮಾನ ದಿಬ್ರುಗಢ್, ಅಸ್ಸಾಂನಿಂದ ಪಸಿಘಾಟ್‌ವರೆಗೆ ಹಾರಿದ್ದು, ವಾಯುಯಾನದ ಇತಿಹಾಸದಲ್ಲಿ ಹೊಸ ಅಧ್ಯಾಯ ಪ್ರಾರಂಭಿಸಿದೆ.
  • ಪ್ರಧಾನಿ ನರೇಂದ್ರ ಮೋದಿ ಅವರು ಲತಾ ದೀನನಾಥ್ ಮಂಗೇಶ್ವರ್ ಪ್ರಶಸ್ತಿ ಗೌರವ ಪಡೆಯುವ ಪ್ರಥಮ ವ್ಯಕ್ತಿಯಾಗಲಿದ್ದಾರೆ. ಏಪ್ರಿಲ್ 24 ರಂದು ನಡೆಯಲಿರುವ 80ನೇ ವಾರ್ಷಿಕ ಮಾಸ್ಟರ್ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೊದಲ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.