Published on: September 24, 2023

ಸುಸ್ಥಿರ ಕೃಷಿಗೆ ಉತ್ತೇಜನ

ಸುಸ್ಥಿರ ಕೃಷಿಗೆ ಉತ್ತೇಜನ

ಸುದ್ದಿಯಲ್ಲಿ ಏಕಿದೆ? ಸುಸ್ಥಿರ ಕೃಷಿಯ ಉತ್ತೇಜನ ಮತ್ತು ಸಮರ್ಥ ನೀರಿನ ನಿರ್ವಹಣೆ ಖಾತರಿಪಡಿಸುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್(ನಬಾರ್ಡ್)ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಸೂಕ್ಷ್ಮ ನೀರಾವರಿ ನಿಧಿಯ ಅಡಿಯಲ್ಲಿ ಹಣಕಾಸಿನ ನೆರವು ಪಡೆಯಲು ಈ ಒಪ್ಪಂದ ನಡೆದಿದೆ.

ಮುಖ್ಯಾಂಶಗಳು

  • ಈ ಯೋಜನೆಯಡಿ ಕೇಂದ್ರ ಸರ್ಕಾರದಿಂದ 360 ಕೋಟಿ ರೂ. ಮತ್ತು ರಾಜ್ಯ ಸರ್ಕಾರದಿಂದ 240 ಕೋಟಿ ರೂ. ನಿಧಿ ದೊರೆಯುತ್ತದೆ. ಇದರಿಂದ ಒಟ್ಟು 990 ಕೋಟಿ ರೂ. ಲಾಭವನ್ನು ನಮ್ಮ ರೈತರು ಪಡೆಯುತ್ತಾರೆ. ಕೃಷಿ ಸುಸ್ಥಿರತೆಗೆ ನೀರಿನ ಸಂರಕ್ಷಣೆ ಮತ್ತು ಸಮರ್ಥ ನೀರಾವರಿ ಪದ್ಧತಿಗಳು ಅತ್ಯುನ್ನತವಾಗಿವೆ.

ಉದ್ದೇಶ

  • ಸುಸ್ಥಿರ ಕೃಷಿಯತ್ತ ಮತ್ತು ನೀರಿನ ಕೊರತೆ ಮತ್ತು ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸಲು ಈ ಒಪ್ಪಂದ ಬೆಂಬಲಿಸುತ್ತದೆ. ನಬಾರ್ಡ್ ಬೆಂಬಲದೊಂದಿಗೆ ನಮ್ಮ ರೈತರಿಗೆ ನೀರಿನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ರಾಜ್ಯದಲ್ಲಿ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ಸಹಾಯವಾಗಲಿದೆ.

ಸುಸ್ಥಿರ ಕೃಷಿ

  • ಮಣ್ಣಿನ ಆರೋಗ್ಯ ಹಾಗೂ ಭೂಮಿಯ ಫಲವತ್ತತೆ ನಶಿಸಿಹೋಗದಂತೆ ಅವುಗಳನ್ನು ಅಭಿವೃದ್ಧಿಗೊಳ್ಳಲು ಅನುವು ಮಾಡಿಕೊಡುವ ಕೃಷಿ ಪದ್ಧತಿಗಳಿಗೆ ಸುಸ್ಥಿರ ಕೃಷಿ ಎನ್ನುತ್ತಾರೆ.