Published on: May 30, 2023

ಸೆಂಗೋಲ್’ (ನ್ಯಾಯದಂಡ)

ಸೆಂಗೋಲ್’ (ನ್ಯಾಯದಂಡ)

ಸುದ್ದಿಯಲ್ಲಿ ಏಕಿದೆ? ಅಲಹಾಬಾದ್ನ ವಸ್ತುಸಂಗ್ರಹಾಲಯದಲ್ಲಿರುವ ತಮಿಳುನಾಡಿಗೆ ಸೇರಿದ ಐತಿಹಾಸಿಕ ‘ಸೆಂಗೋಲ್’ (ನ್ಯಾಯದಂಡ) ಅನ್ನು ನೂತನ ಸಂಸತ್ ಭವನದಲ್ಲಿ ಲೋಕಸಭೆಯ ಸ್ಪೀಕರ್ ಆಸನದ ಸಮೀಪದಲ್ಲಿ  ಸ್ಥಾಪನೆ ಮಾಡಲಾಗುತ್ತಿದೆ.

ಉದ್ದೇಶ

  • “20ನೇ ಮಠದ ಆಡಳಿತದ ಸಂದರ್ಭದಲ್ಲಿ 1947ರಲ್ಲಿ ಚಿನ್ನದ ರಾಜದಂಡವನ್ನು ದಿಲ್ಲಿಗೆ ಕಳುಹಿಸಲಾಗಿತ್ತು. ಆಡಳಿತದ ಔಪಚಾರಿಕ ಹಸ್ತಾಂತರದ ಸಂಕೇತವಾಗಿ ಅದನ್ನು ಜವಹರಲಾಲ್ ನೆಹರೂ ಅವರಿಗೆ ಮೌಂಟ್ ಬ್ಯಾಟನ್ ಅವರು ನೀಡಿದ್ದರು. ಅದೇ ರಾಜದಂಡವನ್ನು ಹೊಸದಾಗಿ ನಿರ್ಮಿಸಿರುವ ಸಂಸತ್ ಕಟ್ಟಡದ ಉದ್ಘಾಟನೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲಾಗುತ್ತದೆ”.

ಸೆಂಗೋಲ್ ಎಂದರೇನು?

  • ಸೆಂಗೋಲ್ ಎಂದು ಕರೆಯಲಾಗುವ ರಾಜದಂಡವು ತಮಿಳಿನ ‘ಸೆಮ್ಮಾಯಿ’ ಎಂಬ ಪದದಿಂದ ಉದ್ಭವಿಸಿದೆ. ಇದರ ಅರ್ಥ ‘ಸದಾಚಾರ’ ಎಂದು. ಸೆಂಗೋಲ್‌ನ ತುದಿಯಲ್ಲಿ ನಂದಿಯ ರಚನೆಯಿದೆ. ಇದು ನ್ಯಾಯದ ಸಂಕೇತ.
  • “ಚೋಳರಂತಹ ತಮಿಳು ಸಾಮ್ರಾಟರು ಸಾಮಾನ್ಯವಾಗಿ ತಮ್ಮ ಕೈಯಲ್ಲಿ ರಾಜದಂಡ ಹಿಡಿದಿರುತ್ತಿದ್ದರು. ಹೊಸ ರಾಜನ ಕಿರೀಟಧಾರಣೆ ಬಳಿಕ ಅವರ ಪೂರ್ವಾಧಿಕಾರಿ ಅಥವಾ ರಾಜಗುರು ಪಟ್ಟಾಭಿಷೇಕದ ಸಂದರ್ಭದಲ್ಲಿ ರಾಜದಂಡವನ್ನು ಹಸ್ತಾಂತರ ಮಾಡುತ್ತಿದ್ದರು.
  • ರಾಜದಂಡವು ಕಾನೂನಿನ ನಿಯಮ ಎಂಬುದನ್ನು ಸಂಕೇತಿಸುತ್ತದೆ ಎಂದು ತಿರುವಳ್ಳೂರ್ ಉಲ್ಲೇಖಿಸಿದ್ದರು. ಶಿಲಪಧಿಕಾರಂನಂತಹ ಸಂಗಮ ಕೃತಿಗಳು ರಾಜದಂಡದ ಶ್ರೇಷ್ಠತೆ ಹಾಗೂ ಮಹತ್ವವನ್ನು ಸಾರುತ್ತವೆ
  • ಮಠದ ಸೂಚನೆಯಂತೆ ಐದು ಅಡಿ ಎತ್ತರದ ಚಿನ್ನದ ರಾಜದಂಡವನ್ನು ಚೆನ್ನೈನಲ್ಲಿನ ವುಮ್ಮಿಡಿ ಬಂಗಾರು ಚೆಟ್ಟಿ ಜ್ಯುವೆಲರ್ಸ್ ತಕ್ಷಣವೇ ತಯಾರಿಸಿತ್ತು ಇದು ಐದು ಅಡಿ ಎತ್ತರವಿದ್ದು, ತುದಿಯಲ್ಲಿ ಚಿಕ್ಕ ನಂದಿ ವಿಗ್ರಹ ಇದೆ ವಿವಿಧ ಆಭರಣಗಳಿಂದ ಅಲಂಕೃತವಾಗಿದೆ.

ಹಿನ್ನೆಲೆ

  • ಬ್ರಿಟಿಷರು ಭಾರತವನ್ನು ಬಿಟ್ಟು ಹೋಗುವ ಸಮಯದಲ್ಲಿ ಸಮಯದಲ್ಲಿ ಈ ಸೆಂಗೋಲ್ ಅನ್ನು ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೆ ನೀಡಿದ್ದರು. ಇದು ಅಧಿಕಾರವನ್ನು ಹಸ್ತಾಂತರ ಮಾಡಿದ್ದರ ಪ್ರತೀಕವಾಗಿದೆ ಎಂದಿದ್ದರು ಅವರು.
  • ಅಧಿಕಾರ ಹಸ್ತಾಂತರ ಎಂಬುದು ಕೇವಲ ಕೈ ಕುಲುಕುವುದು ಅಥವಾ ದಾಖಲೆಪತ್ರಗಳಿಗೆ ಸಹಿ ಹಾಕುವುದು ಅಲ್ಲ. ಈ ಪ್ರಕ್ರಿಯೆಯು ಸ್ಥಳೀಯ ಪರಂಪರೆಯೊಂದಿಗೆ ನಂಟುಹೊಂದಿರುವ ಜೊತೆಗೆ ಆಧುನಿಕ ಅಗತ್ಯಗಳನ್ನು ಪೂರೈಸುವಂತಿರಬೇಕು. ಈ ನೆಲೆಯಲ್ಲಿ 1947ರ ಆಗಸ್ಟ್ 14ರಂದು ನೆಹರೂ ಅವರು ಈ ‘ಸೆಂಗೋಲ್’ ಅನ್ನು ಸ್ವೀಕರಿಸಿದ್ದರು.
  • ಬ್ರಿಟಿಷರಿಂದ ಅಧಿಕಾರವು ಭಾರತೀಯರಿಗೆ ಹಸ್ತಾಂತರವಾಗಿರುವುದರ ಸಂಕೇತವಿದಾಗಿತ್ತು. ಬ್ರಿಟಿಷರು ಭಾರತೀಯರ ಕೈಗೆ ಅಧಿಕಾರ ನೀಡುವುದನ್ನು ಸಾಂಕೇತಿಕವಾಗಿ ತಿಳಿಸುವ ಸಮಾರಂಭವನ್ನು ಹೇಗೆ ಮಾಡಬಹುದು ಎಂದು ಪಂಡಿತ್ ಜವಾಹರಲಾಲ್ ನೆಹರೂ ಅವರನ್ನು ವೈಸರಾಯ್ ಲಾರ್ಡ್‌ ಮೌಂಟ್ಬ್ಯಾಟನ್ ಪ್ರಶ್ನಿಸಿದ್ದರು. ಆಗ ನೆಹರೂ ಅವರು ಸ್ವಾತಂತ್ರ್ಯ ಹೋರಾಟಗಾರ ಸಿ. ರಾಜಗೋಪಾಲಾಚಾರಿ (ರಾಜಾಜಿ) ಅವರ ಸಲಹೆ ಕೇಳಿದ್ದರು. ಆಗ ಚೋಳ ರಾಜರು ತಮ್ಮ ಉತ್ತರಾಧಿಕಾರಿಗೆ ಸೆಂಗೋಲ್ ನೀಡುವ ಮೂಲಕ ಅಧಿಕಾರ ಹಸ್ತಾಂತರ ಮಾಡುತ್ತಿದ್ದ ಬಗ್ಗೆ ತಂಜಾವೂರಿನ ಶೈವ ಸಂಪ್ರದಾಯದ ಮಠವಾದ ‘ತಿರುವಾವದುತ್ತುರೈ ಅಧೀನಮ್’ನಿಂದ ರಾಜಾಜಿ ಮಾಹಿತಿ ಪಡೆದು ನೆಹರೂ ಅವರಿಗೆ ತಿಳಿಸಿದ್ದರು. ತಂಜಾವೂರಿನ ತಿರುವಾವದುತ್ತುರೈ ಅಧೀನಮ್ನ ಪ್ರಧಾನ ಅರ್ಚಕ ಅಂಬಲವನ ದೇಶಿಕ ಸ್ವಾಮಿಗಳು ಇದಕ್ಕೆ ಅನುಮೋದನೆ ನೀಡಿದ್ದರು. 1947ರ ಆಗಸ್ಟ್ನಲ್ಲಿ ಇದರ ಬೆಲೆ ರೂ. 15,000 ಇತ್ತು.

ನಿಮಗಿದು ತಿಳಿದಿರಲಿ

  • ಈ ಸೆಂಗೋಲ್ ನಂಟು ಬಾಗಲಕೋಟೆ ಜಿಲ್ಲೆಗೆ ವ್ಯಾಪಿಸಿದೆ.ಬಾದಾಮಿ ತಾಲೂಕಿನ ಪಟ್ಟದಕಲ್ಲು ಗ್ರಾಮದ ವಿರೂಪಾಕ್ಷ ದೇವಾಲಯದ ಬಲ ಗೋಡೆಯ ಮೇಲೆ ಕಲಾವಿದ ಕೆತ್ತಲ್ಪಟ್ಟ ಶಿವನ ಎಡಗೈಯಲ್ಲಿನ(ರಾಜದಂಡ) ಸೆಂಗೋಲ್​ಗೆ ಸಾಮ್ಯತೆ ಹೊಂದಿದೆ.
  • ಕಲಾಕೃತಿಯಲ್ಲಿ ನಾಟ್ಯರೂಪದ ಚತುರ್ಭುಜದ ಶಿವನ ಎಡಗೈನಲ್ಲಿ ಸೆಂಗೋಲ್ ಕಾಣಬಹುದು.ಸೆಂಗೋಲ್ ಮೇಲೆ ನಂದಿಯ ಕೆತ್ತನೆಯಿದೆ. ಅಜ್ಞಾನದ ಸಂಕೇತವಾಗಿರುವ ಅಪಸ್ಮಾರ ಮೂರ್ತಿಯನ್ನ ನಾಶಪಡಿಸಿ, ದುಷ್ಟಶಕ್ತಿಯನ್ನ ಕಾಲಿನಿಂದ ನಿರ್ನಾಮ ಮಾಡುವ ರೂಪದಲ್ಲಿ ಶಿವನ ಮೂರ್ತಿಯ ಕಲಾಕೃತಿ ಕೆತ್ತನೆಯಾಗಿದೆ. ಚಾಲುಕ್ಯರಸ ಎರಡನೇ ವಿಕ್ರಮಾದಿತ್ಯನ ಕಾಲದಲ್ಲಿ ಕಟ್ಟಿಸಲಾಗಿದೆ. ಕಂಚಿಯ ಪಲ್ಲವರ ಜೊತೆ ಯುದ್ದ ಗೆದ್ದ ನೆನಪಿಗಾಗಿ 2ನೇ ವಿಕ್ರಮಾದಿತ್ಯನ ಮಹಾರಾಣಿ ಲೋಕಮಹಾದೇವಿ ಈ ವಿರುಪಾಕ್ಷ ದೇವಾಲಯ ಕಟ್ಟಿಸಿದ್ದು, ದೇವಾಲಯದಲ್ಲಿ ಈ ಕಲಾಕೃತಿ ಕಂಡು ಬಂದಿದೆ. ಈ ಒಂದು ರಾಜದಂಡಕ್ಕೆ ನಂದಿಧ್ವಜ ಅಂತಲೂ ಕರೆಯುತ್ತಾರೆ. ಸೆಂಗೋಲ್ 7ನೇ ಶತಮಾನದಲ್ಲಿ ಚಾಲನೆಯಲ್ಲಿತ್ತು ಅನ್ನೋದಕ್ಕೆ ಇದು ಸಾಕ್ಷಿಯಾಗಿದೆ.