Published on: March 13, 2024

ಸೆಲಾ ಪಾಸ್ ದ್ವಿಪಥ ಸುರಂಗ ಮಾರ್ಗ

ಸೆಲಾ ಪಾಸ್ ದ್ವಿಪಥ ಸುರಂಗ ಮಾರ್ಗ

ಸುದ್ದಿಯಲ್ಲಿ ಏಕಿದೆ? ಭಾರತದ ಪ್ರಧಾನಿ ಅವರು ಅರುಣಾಚಲ ಪ್ರದೇಶದಲ್ಲಿ ವಿಶ್ವದ ಅತಿ ಎತ್ತರದಲ್ಲಿ (13,000 ಅಡಿ) ನಿರ್ಮಿಸಲಾಗಿರುವ ಆಯಕಟ್ಟಿನ, ಪ್ರಮುಖವಾದ, ಬಹು ನಿರೀಕ್ಷಿತ ಮತ್ತು ಉದ್ದವಾದ ಸೆಲಾ ಪಾಸ್ ದ್ವಿಪಥ ಸುರಂಗ ಮಾರ್ಗವನ್ನು ಲೋಕಾರ್ಪಣೆಗೊಳಿಸಿದರು.

ಮುಖ್ಯಾಂಶಗಳು

  • ಸಂಪರ್ಕ: ಈ ಸುರಂಗ ಮಾರ್ಗವು ಅರುಣಾಚಲ ಪ್ರದೇಶದ ಪಶ್ಚಿಮ ಕಮಿಂಗ್ ಮತ್ತು ತವಾಂಗ್ ಜಿಲ್ಲೆಗಳನ್ನು ಸಂಪರ್ಕಿಸುತ್ತದೆ. ವಾಸ್ತವ ಗಡಿ ನಿಯಂತ್ರಣ ರೇಖೆ (LAC) ತಲುಪಲು ಇದು ಏಕೈಕ ಮಾರ್ಗವಾಗಿದೆ.
  • ಪ್ರಾಜೆಕ್ಟ್ ವರ್ತಕ್ ಅಡಿಯಲ್ಲಿ ಬಾರ್ಡರ್ ರೋಡ್ಸ್ ಆರ್ಗನೈಸೇಶನ್‌ನಿಂದ 13,000 ಅಡಿ ಎತ್ತರದಲ್ಲಿ ನಿರ್ಮಿಸಲಾದ ಸೆಲಾ ಸುರಂಗವು ಟ್ರಾನ್ಸ್-ಅರುಣಾಚಲ ಹೆದ್ದಾರಿ ವ್ಯವಸ್ಥೆಯ ಒಂದು ಘಟಕವಾಗಿದೆ.
  • ವಿಶ್ವದ ಅತಿ ಉದ್ದದ ಎರಡು-ಪಥದ ಸುರಂಗವಾಗಿದೆ.
  • ಈ ಸುರಂಗವು ವರ್ಷವಿಡೀ ತೆರೆದಿರುತ್ತದೆ, ಇದನ್ನು BRO ನಿರ್ವಹಿಸುತ್ತದೆ.

ಉದ್ದೇಶ

ಚಳಿಗಾಲದಲ್ಲಿ ಅತಿಯಾದ ಹಿಮಪಾತದಿಂದಾಗಿ, ಸೆಲಾ ಪಾಸ್‌ನಲ್ಲಿ ತೀವ್ರವಾದ ಹಿಮವು ಸಂಗ್ರಹಗೊಳ್ಳುತ್ತದೆ. ಇದರಿಂದಾಗಿ ರಸ್ತೆ ಸಂಪೂರ್ಣ ಬಂದ್ ಆಗುತ್ತದೆ. ಅಲ್ಲದೆ, ಸೆಲಾ ಪಾಸ್ ತುಂಬಾ ಅಂಕುಡೊಂಕಾದ ತಿರುವುಗಳನ್ನು ಹೊಂದಿದೆ. ಇದರಿಂದಾಗಿ ಇಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಳ್ಳುತ್ತದೆ. ಈ ಸಮಯದಲ್ಲಿ ಇಡೀ ತವಾಂಗ್ ವಲಯವು ದೇಶದ ಇತರ ಭಾಗಗಳಿಂದ ಸಂಪರ್ಕ ಕಡಿತಗೊಳ್ಳುತ್ತದೆ. ಸೆಲಾ ಪಾಸ್ ಸುರಂಗವು ಅಸ್ತಿತ್ವದಲ್ಲಿರುವ ರಸ್ತೆಯನ್ನು ಬೈಪಾಸ್ ಮಾಡುತ್ತದೆ ಮತ್ತು ಇದು ಬೈಸಾಖಿಯನ್ನು ನುರಾನಾಂಗ್‌ಗೆ ಸಂಪರ್ಕಿಸುತ್ತದೆ.