Published on: December 28, 2023

ಸೌರ ವಿದ್ಯುತ್ ಪೂರೈಕೆ ಒಪ್ಪಂದ

ಸೌರ ವಿದ್ಯುತ್ ಪೂರೈಕೆ ಒಪ್ಪಂದ

ಸುದ್ದಿಯಲ್ಲಿ ಏಕಿದೆ? ಅದಾನಿ ಗ್ರೀನ್ ಎನರ್ಜಿ ಕಂಪನಿಯು (AGEL) 1,799 ಮೆಗಾವಾಟ್ ಸೌರ ವಿದ್ಯುತ್ ಪೂರೈಕೆ ಸಂಬಂಧ ಭಾರತೀಯ ಸೌರಶಕ್ತಿ ನಿಗಮದ (ಎಸ್ಇಸಿಐ) ಜೊತೆ ವಿದ್ಯುತ್ ಖರೀದಿ ಒಪ್ಪಂದಕ್ಕೆ ಸಹಿ ಹಾಕಿದೆ.

ಮುಖ್ಯಾಂಶಗಳು

  • ಒಟ್ಟು ಎಂಟು ಸಾವಿರ ಮೆಗಾವಾಟ್ ಸೌರ ವಿದ್ಯುತ್ ಪೂರೈಕೆ ಸಂಬಂಧ 2020ರ ಜೂನ್ನಲ್ಲಿ ಎಸ್ಇಸಿಐನ ಟೆಂಡರ್ ಪಡೆಯಲಾಗಿತ್ತು.
  • ಹಸಿರು ಇಂಧನಕ್ಕೆ ಸಂಬಂಧಿಸಿದ ಅತಿದೊಡ್ಡ ಒಪ್ಪಂದವನ್ನು ಪೂರ್ಣಗೊಳಿಸುವ ಮೂಲಕ ಸುಸ್ಥಿರ ಇಂಧನದ ಕಾರ್ಯಕ್ಷೇತ್ರವನ್ನು ವಿಸ್ತರಿಸಲಾಗಿದೆ.
  • AGEL ಈಗಾಗಲೇ ತನ್ನ ಸಹವರ್ತಿ ಕಂಪನಿ ಮುಂದ್ರಾ ಸೋಲಾರ್ ಎನರ್ಜಿ ಲಿಮಿಟೆಡ್ (MSEL) ಮೂಲಕ ವರ್ಷಕ್ಕೆ 2 GW ಸಾಮರ್ಥ್ಯದ ಸೌರ PV ಸೆಲ್ ಮತ್ತು ಮಾಡ್ಯೂಲ್ ಉತ್ಪಾದನಾ ಘಟಕವನ್ನು ನಿಯೋಜಿಸಿದೆ. ಈ ಸ್ಥಾವರವು ಗುಜರಾತ್‌ನ ಮುಂದ್ರಾದಲ್ಲಿದೆ.

ಉದ್ದೇಶ :

2030ರ ವೇಳೆಗೆ ಭಾರತವು ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯವನ್ನು 500 ಗಿಗಾವಾಟ್ಗೆ ಹೆಚ್ಚಿಸುವ ಗುರಿ ಹೊಂದಿದೆ. ಇದಕ್ಕೆ ಹೆಚ್ಚುವರಿಯಾಗಿ 45 ಗಿಗಾವಾಟ್ನಷ್ಟು ನವೀಕರಿಸಬಹುದಾದ ಇಂಧನದ ಕೊಡುಗೆ ನೀಡಲು ಕಂಪನಿ ನಿರ್ಧರಿಸಿದೆ.