Published on: May 11, 2023

ಸ್ಥಳೀಯ ಭಾಷೆಯಲ್ಲಿ ತಾಂತ್ರಿಕ ಪದನಿಧಿ

ಸ್ಥಳೀಯ ಭಾಷೆಯಲ್ಲಿ ತಾಂತ್ರಿಕ ಪದನಿಧಿ

ಸುದ್ದಿಯಲ್ಲಿ ಏಕಿದೆ? ದೇಶದ ಪ್ರಾದೇಶಿಕ ಭಾಷೆಗಳನ್ನು ಬೆಳೆಸಿ, ಉಳಿಸುವ ದೃಷ್ಟಿಯಿಂದ ಕೇಂದ್ರ ಸರಕಾರ ಮಹತ್ವದ ಕ್ರಮಕ್ಕೆ ಮುಂದಾಗಿದೆ. ಕೊಂಕಣಿ ಸೇರಿದಂತೆ ಭಾರತದ 10 ಸ್ಥಳೀಯ ಭಾಷೆಗಳಲ್ಲಿ ವೈಜ್ಞಾನಿಕ ಹಾಗೂ ತಾಂತ್ರಿಕ ಪದಗಳ ಅರ್ಥಗಳುಳ್ಳ ನಿಘಂಟುಗಳನ್ನು ಮುದ್ರಿಸಲು ‘ವೈಜ್ಞಾನಿಕ ಹಾಗೂ ತಾಂತ್ರಿಕ ಪರಿಭಾಷೆ’ ಆಯೋಗ’ (ಸಿಎಸ್‌ಟಿಟಿ) ತೀರ್ಮಾನಿಸಿದೆ.

ಮುಖ್ಯಾಂಶಗಳು

  • ಮೊದಲಿಗೆ 15 ವಿಷಯಗಳ ತಾಂತ್ರಿಕ ಹಾಗೂ ವೈಜ್ಞಾನಿಕ ಪದಗಳನ್ನು ನಿಘಂಟಿನಲ್ಲಿ ಸೇರಿಸಲಾಗುತ್ತದೆ. ಇದಾದ ನಂತರ, ಮಾಧ್ಯಮಿಕ, ಹೈಸ್ಕೂಲ್ ಹಾಗೂ ವಿಶ್ವವಿದ್ಯಾಲಯ ಮಟ್ಟದ ಪಠ್ಯಪುಸ್ತಕಗಳ ಪದಗಳುಳ್ಳ ನಿಘಂಟುಗಳನ್ನು ಮುದ್ರಿಸಲಾಗುತ್ತದೆ. ತಾಂತ್ರಿಕ ಮತ್ತು ಪಾರಿಭಾಷಿಕ ನಿಘಂಟುಗಳನ್ನು ಶೈಕ್ಷಣಿಕ ಮಂಡಳಿಗಳು, ವಿಶ್ವವಿದ್ಯಾಲಯಗಳು ಹಾಗೂ ರಾಷ್ಟ್ರೀಯ ಟೆಸ್ಟಿಂಗ್ ಏಜೆನ್ಸಿಗೆ ಕಳುಹಿಸಲಾಗುತ್ತದೆ.
  • ಮುಂದಿನ ಮೂರು ತಿಂಗಳಲ್ಲಿ ಆರಂಭಿಕ ಹಂತವಾಗಿ 10 ಭಾಷೆಗಳಲ್ಲೂ 5 ಸಾವಿರ ಪದಗಳುಳ್ಳ ಸಾಮಾನ್ಯ ನಿಂಘಂಟುಗಳನ್ನು ಜನರಿಗೆ ಪರಿಚಯಿಸಲಿದೆ. ಸುಮಾರು 1ರಿಂದ 2 ಸಾವಿರ ಪ್ರತಿಗಳನ್ನು ಮುದ್ರಣ ಮಾಡಲಾಗುತ್ತದೆ. ಡಿಜಿಟಲ್ ರೂಪದಲ್ಲಿಯೂ ಜನರಿಗೆ ಉಚಿತವಾಗಿ ಈ ನಿಘಂಟುಗಳು ಲಭ್ಯವಾಗಲಿವೆ. ಬಳಿಕ ದೊಡ್ಡ ಮಟ್ಟದಲ್ಲಿ ನಿಘಂಟುಗಳನ್ನು ಮುದ್ರಿಸುವ ಯೋಜನೆಯನ್ನು ‘ಸಿಎಸ್‌ಟಿಟಿ’ ಹೊಂದಿದೆ.

ಅನುಕೂಲಗಳು

  • ಇದರಿಂದ ತಾಂತ್ರಿಕ ಹಾಗೂ ವೈಜ್ಞಾನಿಕ ಪದಗಳ ಅರ್ಥಗಳನ್ನು ಆಯಾ ಸ್ಥಳೀಯ ಭಾಷೆಗಳಲ್ಲಿ ತಿಳಿದುಕೊಳ್ಳಲು ಸಹಕಾರಿಯಾಗಲಿದೆ. ತಾಂತ್ರಿಕ ಶಿಕ್ಷಣ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಾದೇಶಿಕ ಭಾಷೆಗಳಿಗೆ ಸರಕಾರ ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ಪಾರಿಭಾಷಿಕ ಪದಕೋಶಗಳು ಮುಂತಾದ ಪರೀಕ್ಷೆಗಳನ್ನು ಬರೆಯುವ ಅಭ್ಯರ್ಥಿಗಳಿಗೆ ಅಧ್ಯಯನಕ್ಕೆ ನೆರವಾಗಲಿವೆ. ತಾಂತ್ರಿಕ ಹಾಗೂ ವೈಜ್ಞಾನಿಕ ಪರಿಕಲ್ಪನೆಗಳನ್ನು ಸುಲಭವಾಗಿ ತಿಳಿಯಲು ಅನುಕೂಲವಾಗಲಿದೆ.

ಯಾವ ಯಾವ ಭಾಷೆಗಳಲ್ಲಿ ಮುದ್ರಣ?

  • ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೇರಿಸಲಾಗಿರುವ 22 ಭಾಷೆಗಳಲ್ಲಿ ಸಂಸ್ಕೃತ, ಕೊಂಕಣಿ, ಬೋಡೊ, ಸಂಥಾಲಿ, ಡೋಗಿ, ಕಾಶ್ಮೀರಿ, ನೇಪಾಳಿ, ಮಣಿಪುರಿ, ಸಿಂಧಿ ಹಾಗೂ ತಾಂತ್ರಿಕ ಹಾಗೂ ಮೈಥಿಲಿ ಭಾಷೆಗಳಲ್ಲಿ ವೈಜ್ಞಾನಿಕ ಪದಗಳ ಅರ್ಥಗಳುಳ್ಳ ನಿಘಂಟುಗಳನ್ನು ‘ಸಿಎಸ್‌ಟಿಟಿ’ ಮುದ್ರಿಸಲಿದೆ.

ವಿಷಯಗಳು

  • ಸಸ್ಯಶಾಸ್ತ್ರ ಪ್ರಾಣಿಶಾಸ್ತ್ರ, ರಸಾಯನಶಾಸ್ತ್ರ, ಭೌತಶಾಸ್ತ್ರ, ಕಂಪ್ಯೂಟರ್ ಸೈನ್ಸ್, ಪತ್ರಿಕೋದ್ಯಮ, ಸಾರ್ವಜನಿಕ ಆಡಳಿತ, ಸಿವಿಲ್ ಹಾಗೂ ಎಲೆಕ್ನಿಕಲ್ ಎಂಜಿನಿಯರಿಂಗ್, ಆಯುರ್ವೇದ, ಗಣಿತ ಸೇರಿ 15 ವಿಷಯಗಳ ಪದಗಳು ನಿಘಂಟಿನಲ್ಲಿ ಇರಲಿವೆ.