Published on: June 6, 2023

ಸ್ವಯಂ ಕಾರ್ಯಕ್ರಮ

ಸ್ವಯಂ ಕಾರ್ಯಕ್ರಮ

ಸುದ್ದಿಯಲ್ಲಿ ಏಕಿದೆ? ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯದಲ್ಲಿ ತಯಾರಿಸಲಾದ ಶುದ್ಧ ಜೇನುತುಪ್ಪವನ್ನು ನೇರವಾಗಿ ಜನರ ಕೈಸೇರುವಂತೆ ಮಾಡಲು ಅರಣ್ಯ ಇಲಾಖೆ ಯೋಜನೆಯೊಂದನ್ನು ರೂಪಿಸಿದೆ.

ಮುಖ್ಯಾಂಶಗಳು

  • ಯೋಜನೆಯಡಿಯಲ್ಲಿ 60 ಬುಡಕಟ್ಟು ಕುಟುಂಬಗಳನ್ನು ಆಯ್ಕೆ ಮಾಡಿ, ಈ ಕುಟುಂಬಕ್ಕೆ ಜೇನು ಪೆಟ್ಟಿಗೆ ನೀಡಿದೆ.
  • ಜೇನು ಕೃಷಿಕರು ಮತ್ತು ತೋಟಗಾರಿಕಾ ತಜ್ಞರ ತಂಡವು ಇವರಿಗೆ ಜೇನುಸಾಕಣೆ, ಜೇನು ಉತ್ಪಾದನೆ ಮತ್ತು ಪ್ಯಾಕಿಂಗ್‌ ಕುರಿತು ತರಬೇತಿಗಳನ್ನು ನೀಡಲಾಗುತ್ತಿದೆ.
  • ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟಗಳ ಮಧ್ಯಭಾಗದಲ್ಲಿರುವ ಈ ಮೀಸಲು ಪ್ರದೇಶದಲ್ಲಿ ನೂರಾರು ಕುಟುಂಬಗಳು ವಾಸ ಮಾಡುತ್ತಿವೆ.
  • ಹುಲಿ ಸಂರಕ್ಷಿತ ಪ್ರದೇಶದ ಅಧಿಕಾರಿಗಳು ಇತ್ತೀಚೆಗೆ ಸ್ವಯಂ ಹೆಸರಿನ ಕಾರ್ಯಕ್ರಮವೊಂದನ್ನು ಆರಂಭಿಸಿ, ಅದರ ಅಡಿಯಲ್ಲಿ ಜೇನು ಮಾರಾಟ ಯೋಜನೆಯನ್ನೂ ಕೈಗೆತ್ತಿಕೊಳ್ಳಲು ಮುಂದಾಗಿದೆ.

ಉದ್ದೇಶ 

  • ಯೋಜನೆ ಮೂಲಕ ಜೇನು ಉತ್ಪಾದನೆಯಲ್ಲಿ ಸ್ಥಳೀಯರನ್ನು ತೊಡಗಿಸಿಕೊಳ್ಳುವ ಅಧಿಕಾರಿಗಳು, ಇನ್ನು ಕೆಲವೇ ತಿಂಗಳುಗಳಲ್ಲಿ ಇಲಾಖೆಯ ಮೂಲಕ ಶುದ್ಧ ಜೇನುತುಪ್ಪವನ್ನು ಮಾರುಕಟ್ಟೆಗೆ ತರುವ ಪ್ರಯತ್ನ ನಡೆಸುತ್ತಿದೆ.

ಅನುಕೂಲಗಳು

  • ಯೋಜನೆಯಿಂದಾಗಿ ಬುಡಕಟ್ಟು ಕುಟುಂಬಗಳ ಆದಾಯವನ್ನು ಸುಧಾರಿಸಲಿದೆ. ಇಲ್ಲಿ ಬಹುತೇಕ ಬುಡುಕಟ್ಟು ಜನರು ಕಾಡು ಜೇನು ತೆಗೆಯುವುದು, ಜೇನುನೊಣಗಳ ನಿಭಾಯಿಸುವುದು ಹೇಗೆ ಎಂಬುದನ್ನು ತಿಳಿದಿದ್ದಾರೆ. ಈ ಕಾರ್ಯಕ್ರಮವು ಸಮುದಾಯಕ್ಕೆ ಲಾಭಕರವಾಗಿರಲಿದೆ.

ಯೋಜನೆ:

  • ಮಹತ್ವಾಕಾಂಕ್ಷಿ ಮನಸ್ಸಿನಯುವಕರ ಸಹಭಾಗಿತ್ವದಲ್ಲಿ ವನ್ಯಜೀವಿ ಸಂರಕ್ಷಣೆ (SWAYAM) ಎಂಬ ಪರಿಕಲ್ಪನೆಯನ್ನು ರೂಪಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಈ ಮೂಲಕ ಸ್ಥಳೀಯರನ್ನು ವಿಶ್ವಾಸಕ್ಕೆ ಪಡೆದುಕೊಂಡು ಅವರ ಜೀವನ ಸುಧಾರಣೆಯ ಕೆಲಸಕ್ಕೆ ಕೈ ಹಾಕಿದ್ದಾರೆ.
  • ಜೇನುತುಪ್ಪ, ತೆಂಗಿನ ನಾರು ಬಳಸಿ ಸಿದ್ಧ ಉತ್ಪನ್ನ ತಯಾರಿಸುವ ತರಬೇತಿ, ಮಣ್ಣಿನ ಮಡಿಕೆ ತಯಾರಿಕೆಯ ತರಬೇತಿಗೆ ಜನರನ್ನು ಅಣಿಗೊಳಿಸಲಾಗುತ್ತಿದೆ.
  • ಪ್ರತಿ ಕುಟುಂಬ ವರ್ಷ ಕ್ಕೆ ಕನಿಷ್ಠ 1 ಕ್ವಿಂಟಲ್‍ನಷ್ಟು ಜೇನುತುಪ್ಪ ಉತ್ಪಾದಿಸಿದರೂ ಈ ಭಾಗದಿಂದ 2 ಟನ್‍ಗೂ ಹೆಚ್ಚು ಶುದ್ಧ ಜೇ ನುತುಪ್ಪ ಸಂಗ್ರಹಿಸುವ ಗುರಿ ಇದೆ.
  • ಸ್ವಉದ್ಯೋಗದ ಮೂಲಕ ಜನರು ತಯಾರಿಸುವ ಸಿದ್ಧ ಉತ್ಪನ್ನಗಳನ್ನು ಸ್ಥಳೀಯವಾಗಿ ಮತ್ತು ಪ್ರವಾಸಿ ತಾಣಗಳಲ್ಲಿ ಮಾರಾಟಮಾಡಲಾಗುವುದು. ಜೇನುತುಪ್ಪ, ನಾರಿನ ಉತ್ಪನ್ನಗಳು ಕೆ.ಟಿ.ಆರ್. (ಕಾಳಿ ಟೈ ಗರ್ ರಿಸರ್ವ್‌ ) ಬ್ರ್ಯಾಂ ಡ್ ಅಡಿಯಲ್ಲಿ ಮಾರುಕಟ್ಟೆಗೆ ಪರಿಚಯಗೊಳ್ಳಲಿವೆ’.
  • ಇದರ ಜೊತೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲಾಗಿದೆ.