Published on: December 27, 2022

ಸ್ವ–ನಿಧಿ ಸಾಲ

ಸ್ವ–ನಿಧಿ ಸಾಲ

ಸುದ್ದಿಯಲ್ಲಿ ಏಕಿದೆ? ಪ್ರಧಾನ ಮಂತ್ರಿ ಸ್ವ–ನಿಧಿ ನಿಧಿಯಡಿ ಸಾಲ ಪಡೆಯುವ ಬೀದಿ ಬದಿ ವ್ಯಾಪಾರಿಗಳು ನೀಡಬೇಕಾಗಿದ್ದ ಮುದ್ರಾಂಕ ಶುಲ್ಕ ಪಾವತಿಯನ್ನು ರದ್ದುಪಡಿಸುವ ಕರ್ನಾಟಕ ಸ್ಟಾಂಪ್ ಅಧಿನಿಯಮ 1957ಕ್ಕೆ ತಿದ್ದುಪಡಿ ತರಲು ವಿಧಾನಸಭೆಗೆ ಒಪ್ಪಿಗೆ ನೀಡಿತು.

ಉದ್ದೇಶ

  • ಸಾಲದ ಕರಾರುಗಳ ಮೇಲೆ ರೂ. 500 ಸ್ಟಾಂಪ್‌ ಶುಲ್ಕವನ್ನು ಪಾವತಿಸಬೇಕಾಗಿತ್ತು. ಸಾರ್ವಜನಿಕ ಹಿತಾಸಕ್ತಿಯಿಂದ ಶುಲ್ಕ ಪಾವತಿ ಮಾಫಿ ಮಾಡಲಾಗಿದೆ.

ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ

  • ರಸ್ತೆಬದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು ನೀಡುವ ಈ ಯೋಜನೆಗೆ ‘ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ್ ನಿಧಿ’ (ಪಿಎಂ ಸ್ವನಿಧಿ) ಎಂದು ಹೆಸರಿಸಲಾಗಿದೆ.
  • ಉದ್ದೇಶ : ಸಣ್ಣ ವ್ಯಾಪಾರಿಗಳಿಗೆ ತಮ್ಮ ವ್ಯಾಪಾರಕ್ಕೆ ಆರ್ಥಿಕ ನೆರವು ಒದಗಿಸುವುದು
  • ಅನುಷ್ಠಾನ: ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ.

ಪ್ರಯೋಜನಗಳು

  • ಈ ಯೋಜನೆಯಡಿ ಅರ್ಹರಾಗಿರುವವರು ಯಾವುದೇ ಅಡಮಾನವಿಲ್ಲದೆ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. 10,000 ಆರಂಭಿಕ ಸಾಲ ತೆಗೆದುಕೊಳ್ಳಬಹುದು. ಈ ಹಣವನ್ನು ಒಂದು ವರ್ಷದೊಳಗೆ ಮರುಪಾವತಿ ಮಾಡಬೇಕು.
  • ಸಾಲಗಾರರು ಈ ಸಾಲವನ್ನು ಒಂದು ವರ್ಷದಲ್ಲಿ ಕಂತುಗಳಲ್ಲಿ ಮರುಪಾವತಿಸಬೇಕಾಗುತ್ತದೆ. ಸಕಾಲದಲ್ಲಿ ಸಾಲ ಮರುಪಾವತಿ ಮಾಡುವವರಿಗೆ ವಾರ್ಷಿಕ ಶೇ.7 ಬಡ್ಡಿ ಸಬ್ಸಿಡಿಯನ್ನು ಅವರ ಖಾತೆಗೆ ವರ್ಗಾಯಿಸಲಾಗುತ್ತದೆ.
  • ಬೀದಿ ವ್ಯಾಪಾರಿಗಳು ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ ರೂ. 20,000 ವರೆಗೆ ದುಡಿಯುವ ಬಂಡವಾಳ (ವರ್ಕಿಂಗ್ ಕ್ಯಾಪಿಟಲ್) ಸಾಲವನ್ನು ಪಡೆಯುತ್ತಾರೆ. ಸಮಯೋಚಿತ ಅಥವಾ ಆರಂಭಿಕ ಮರುಪಾವತಿಯ ಮೇಲೆ, ಮಾರಾಟಗಾರರು ಹೆಚ್ಚುವರಿ ಮಿತಿಯೊಂದಿಗೆ ಮತ್ತೊಂದು ವರ್ಕಿಂಗ್ ಕ್ಯಾಪಿಟಲ್ ಸಾಲಕ್ಕೆ ಅರ್ಹರಾಗುತ್ತಾರೆ.