Published on: July 30, 2023

‘ಹಸಿರು ಸರೋವರ’ ಅಭಿವೃದ್ಧಿ

‘ಹಸಿರು ಸರೋವರ’ ಅಭಿವೃದ್ಧಿ

ಸುದ್ದಿಯಲ್ಲಿ ಏಕಿದೆ? ಜೈವಿಕ ಬೇಲಿಯೊಂದಿಗೆ ಕರ್ನಾಟಕ ರಾಜ್ಯದಲ್ಲಿ 100 ಕೆರೆಗಳು ಪರಿಸರ ಸ್ನೇಹಿಯಾಗಿ ಅಭಿವೃದ್ಧಿಯಾಗುತ್ತಿದ್ದು, ಕಾಂಕ್ರೀಟ್, ಪೇವರ್ಸ್ಗಳನ್ನು ಅಳವಡಿಸದೆ ಜೈವಿಕ ತಡೆಗೋಡೆಗಳೊಂದಿಗೆ ‘ಹಸಿರು ಸರೋವರ’ಗಳನ್ನಾಗಿ ಪರಿವರ್ತಿಸಲಾಗುತ್ತಿದೆ.

ಮುಖ್ಯಾಂಶಗಳು

  • ‘ಅಮೃತ ಸರೋವರ ಕಾರ್ಯಕ್ರಮದಲ್ಲಿ ‘ಹಸಿರು ಸರೋವರ ಅಭಿಯಾನವನ್ನು’ ಆಯೋಜಿಸಲಾಗಿದೆ.
  • ಹತ್ತಾರು ಕೆರೆಗಳನ್ನು ನೈಸರ್ಗಿಕವಾಗಿ ಅಭಿವೃದ್ಧಿಗೊಳಿಸಿರುವ ಆನಂದ ಮಲ್ಲಿಗಡವಾಡ ಅವರು ಯೋಜನೆಗೆ ಸಲಹೆ ನೀಡುತ್ತಿದ್ದಾರೆ. 100 ಕೆರೆಗಳು ‘ಹಸಿರು ಸರೋವರಗಳಾಗಿ’ ಈ ಆರ್ಥಿಕ ವರ್ಷದಲ್ಲಿಸಿದ್ಧವಾಗಲಿವೆ
  • ದಾವಣಗೆರೆ, ಧಾರವಾಡ, ಹಾಸನ, ಹಾವೇರಿ ಜಿಲ್ಲೆಗಳಲ್ಲಿ ತಲಾ ಐದು, ಚಿತ್ರದುರ್ಗ , ಗದಗದಲ್ಲಿ ತಲಾ ನಾಲ್ಕು, ಕಲಬುರಗಿ, ಉಡುಪಿ, ವಿಜಯನಗರ ಜಿಲ್ಲೆಗಳಲ್ಲಿ ತಲಾ ಎರಡು ಕೆರೆಗಳು ಸೇರಿದಂತೆ ಉಳಿದ 22 ಜಿಲ್ಲೆಗಳಲ್ಲಿ ತಲಾಮೂರು ಕೆರೆಗಳನ್ನು ‘ಹಸಿರು ಸರೋವರ’ವನ್ನಾಗಿಸಲು ನಿರ್ಧರಿಸಲಾಗಿದೆ.

ಏನಿದು ಅಭಿಯಾನ?

  • ಹಿಂದೆ ಅನುಸರಿಸುತ್ತಿದ್ದ ಕೆರೆ ನಿರ್ಮಾಣ ಹಾಗೂ ಅವುಗಳ ನಿರ್ವಹಣೆ ವಿಧಾನವನ್ನೇ ಇದೀಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಳವಡಿಸಿಕೊಳ್ಳುತ್ತಿದೆ.
  • ಕೆರೆಗಳನ್ನು ಕೆರೆಗಳನ್ನಾಗಿಯೇ ಉಳಿಸಿಕೊಂಡು, ಅತ್ಯಾಧುನಿಕ ಸೌಕರ್ಯಗಳಿಂದ ದೂರ ಉಳಿಸಿ, ಕಡಿಮೆ ವೆಚ್ಚದಲ್ಲಿಪರಿಸರ ಸ್ನೇಹಿ ತಾಣವನ್ನಾಗಿಸುವ ಯೋಜನೆ ಆರಂಭವಾಗಿದೆ.
  • ರಾಜ್ಯದ 31 ಜಿಲ್ಲೆಗಳಲ್ಲಿ 100 ಕೆರೆಗಳು ‘ಹಸಿರು ಸರೋವರ’ವಾಗುವ ಕಾರ್ಯ ಆಗಸ್ಟ್ನಿಂದ ಆರಂಭವಾಗಲಿದೆ.
  • ಪ್ರತಿ ತಾಲ್ಲೂಕು ಮಟ್ಟದಲ್ಲಿ ರಾಷ್ಟ್ರೀಯ ಜೀವನೋಪಾಯ ಸಂಸ್ಥೆಯಿಂದ (ಎನ್ಅರ್ಎಲ್ಎಂ) ರಚಿತವಾಗಿರವ ಗ್ರಾಮ ಪಂಚಾಯಿತಿ ಮಟ್ಟದ ಸ್ವ–ಸಹಾಯ ಸಂಘಗಳ ಒಕ್ಕೂಟದ ನರ್ಸರಿಗಳಿಂದ ಸಸಿಗಳನ್ನು ನಾಟಿ ಮಾಡಲು ಸೂಚಿಸಲಾಗಿದೆ.
  • ಕೆರೆಯ ಏರಿಯನ್ನು ಕಡಿಮೆ ಕಲ್ಲುಬಳಸಿ ಮಣ್ಣಿನಿಂದ ಸದೃಢಗೊಳಿಸಲಾಗುತ್ತದೆ.

ಅಭಿಯಾನದ ಉದ್ದೇಶ

  • ಕೆರೆಗಳಿಗೆ ಕೋಟ್ಯಂತರ ವೆಚ್ಚ ಮಾಡುವುದರ ಹೊರತಾಗಿ, ಕೆರೆಗಳನ್ನು ನೈಸರ್ಗಿಕವಾಗಿಯೇ ಉಳಿಸಿ, ಕಾಂಕ್ರೀಟ್ ಬಳಸದೆ, ಕಡಿಮೆ ವೆಚ್ಚದಲ್ಲಿ ಅಭಿವೃದ್ಧಿಗೊಳಿಸುವುದು.
  • ಅನುಷ್ಠಾನ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ (ಎಂನರೇಗಾ) ಈ ಅಭಿಯಾನವನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಜೈವಿಕ ಬೇಲಿ

  • ಕೆರೆಯ ಸುತ್ತ ಜೈವಿಕ ಬೇಲಿಯನ್ನು ನಿರ್ಮಿಸಲಾಗುತ್ತದೆ. ಎತ್ತರ ಹಾಗೂ ಕಡಿಮೆ ಎತ್ತರದಲ್ಲಿ ಬೆಳೆಯುವ ಸಸಿಗಳನ್ನು ಎರಡು ಸಾಲಿನಲ್ಲಿ ನೆಡಲಾಗುತ್ತದೆ.
  • ಹಿಂದಿನ ಕಾಲದಲ್ಲಿ ಬೇಲಿಯಾಗಿ ಬೆಳೆಸುತ್ತಿದ್ದ ಕತ್ತಾಳೆಯಂತಹ ಮುಳ್ಳಿನ ಗಿಡಗಳನ್ನು, ಎರಡು ಸಾಲಿನ ಮರಗಳ ನಡುವೆ ಬೆಳೆ ಸಲಾಗುತ್ತದೆ.
  • ಇಳಿಜಾರಿನಲ್ಲಿ ಮಣ್ಣಿನ ಸವೆತ ತಡೆಯಲು ವಡೆಲಿಯಾದಂತಹ ಸಸಿಗಳನ್ನು ನೆಡಲಾಗುತ್ತದೆ.
  • ಕೆರೆಯ ದಂಡೆಯಲ್ಲಿ ‘ಇಂಟರ್ಲಾಕಿಂಗ್ ಪೇವರ್ಸ್’ ಅಳವಡಿಸುವಂತಿಲ್ಲ.

ಅನುಷ್ಠಾನ ವಿಧಾನ

  • ಕೆರೆಯ ಒಳಾಂಗಣದ ಇಳಿಜಾರಿನಲ್ಲಿ ವಡೆಲಿಯಾದಂತಹ ಸ್ಥಳೀಯವಾಗಿ ಲಭ್ಯವಿರುವ ಸಸಿಗಳ ನಾಟಿ
  • ಒಳಹರಿವು, ಹೊರಹರಿವು ಪ್ರದೇಶದ ಅಭಿವೃದ್ಧಿ
  • ಹೂಳು ತಡೆಯಲು ಹೊಂಡಗಳ ನಿರ್ಮಾಣ
  • ವೈಜ್ಞಾನಿಕವಾಗಿ ಹೂಳು ತೆರವು, ಕೆರೆಯ ಸುತ್ತಜೈವಿಕ ಬೇಲಿ ಕೋಟಿ ವೃಕ್ಷ ಅಭಿಯಾನದಡಿ ಆಲ, ಅರಳಿ, ಬೇವು ಮುಂತಾದ ಗಿಡಗಳ ನಾಟಿ
  • ಜಾನುವಾರುಗಳಿಗೆ ನೀರು ಕುಡಿಯಲು ಇಳಿಜಾರು ಪ್ರದೇಶ

ಅನುಕೂಲಗಳು

  • ಕಡಿಮೆ ವೆಚ್ಚದಲ್ಲಿ ಕೆರೆಗಳ ಪುನಶ್ಚೇತನ
  • ಕೆರೆಯ ನೀರಿನ ಸಂಗ್ರಹ ಸಾಮರ್ಥ್ಯ ವೃದ್ಧಿ
  • ಅತಿಕ್ರಮಣ ತಡೆಗಟ್ಟುವುದು
  • ನೈಸರ್ಗಿಕವಾಗಿ ಸೌಂದರ್ಯ ಹೆಚ್ಚಳ
  • ಜೀವವೈವಿಧ್ಯದ ಸಂರಕ್ಷಣೆಯೊಂದಿಗೆ ಅಂತರ್ಜಲ ಮಟ್ಟ ವೃದ್ಧಿಸಲು ಒತ್ತುನೀಡಲು ಯೋಜಿಸಲಾಗಿದೆ.