Published on: December 23, 2022

ಹೊಸ ಜೇಡ ಪ್ರಭೇದ ‘ಅರ್ಕಾವತಿ’

ಹೊಸ ಜೇಡ ಪ್ರಭೇದ ‘ಅರ್ಕಾವತಿ’

ಸುದ್ದಿಯಲ್ಲಿ  ಏಕಿದೆ? ನಂದಿಬೆಟ್ಟದ ತಪ್ಪಲಿನ ಹೆಗ್ಗಡಿಹಳ್ಳಿಯಲ್ಲಿ ಹೊಸ ಜೇಡ ಪ್ರಭೇದವನ್ನು ಪರಿಸರಾಸಕ್ತರು ಪತ್ತೆ ಹಚ್ಚಿದ್ದಾರೆ. ನಂದಿ ಬೆಟ್ಟದಲ್ಲಿ ಹುಟ್ಟುವ ಅರ್ಕಾವತಿ ನದಿಯ ಹೆಸರನ್ನು ಈ ಹೊಸ ಜೇಡ ಪ್ರಬೇಧಕ್ಕೆ ಇಡಲಾಗಿದೆ.

ಮುಖ್ಯಾಂಶಗಳು

  • ಹೊಸ ಪ್ರಬೇಧದ ಜೇಡದ ಕುರಿತಂತೆ ರಷ್ಯಾ ಮೂಲದ ಅಂತರರಾಷ್ಟ್ರೀಯ ಜರ್ನಲ್ ‘ಅರ್ಥೋಪೋಡಾ ಸೆಲೆಕ್ಟಾ’ದಲ್ಲಿ ವೈಜ್ಞಾನಿಕ ಬರಹ ಪ್ರಕಟವಾಗಿದೆ. ಈಗ ಸಿಕ್ಕಿರುವ ಈ ಜಾತಿಯ ಹೊಸ ಪ್ರಭೇದವು ಇನ್ನೂ ಅಪರೂಪ ವಾಗಿದೆ.

ಎಲ್ಲಿ ಕಾಣಸಿಗುತ್ತದೆ? 

  • ಭಾರತ, ಚೀನಾ, ಶ್ರೀಲಂಕಾ ಮತ್ತು ವಿಯಟ್ನಾಂ ಸೇರಿದಂತೆ ಜಗತ್ತಿನ 4 ದೇಶಗಳಲ್ಲಿ ಮಾತ್ರ ಕಾಣಬಹುದಾಗಿದೆ.
  • ಕುಟುಂಬ : ಸಾಲ್ಟಿಸಿಡೆ(salticidae) ಕುಟುಂಬಕ್ಕೆ ಸೇರಿರುವ ಈ ಜೇಡವು ಎಗರುವ ಜೇಡಗಳ ಕುಟುಂಬಕ್ಕೆ ಸೇರಿದೆ.
  • ಜಾತಿ : ಕಲಾಪ್ಸಸ್

ಅರ್ಕಾವತಿ ಜೇಡದ ವೈಶಿಷ್ಟ್ಯ

  • ಅರ್ಧ ಸೆಂಟಿಮೀಟರ್‌ಗೂ ಸ್ವಲ್ಪ ಕಡಿಮೆ ಅಳತೆಯ ಈ ಜೇಡ ಹೆಚ್ಚಿನ ಚುರುಕಾಗಿದ್ದು ಎಗರಿ ಕ್ಷಣಾರ್ಧದಲ್ಲಿ ಕಣ್ಮರೆಯಾಗುತ್ತದೆ.
  • ಜೇಡವನ್ನು ಸಾಮಾನ್ಯವಾಗಿ ಬೆಟ್ಟದ ತಪ್ಪಲಿನ ಎಲ್ಲಾ ಪ್ರದೇಶದಲ್ಲೂ ನೋಡಲು ಸಾಧ್ಯವಾಗಿಲ್ಲ. ಸಂಖ್ಯೆಯೂ ವಿರಳವಾಗಿರುವುದು ಕಂಡುಬಂದಿದೆ.
  • ತರಗೆಲೆ ಉದುರಿದ ಬಂಡೆಯಿರುವ ನೆಲ ಮತ್ತು ಸುತ್ತ ಸ್ವಲ್ಪ ಕುರುಚಲು ಮತ್ತು ಒಣ ಹುಲ್ಲು ಇರುವ ಪ್ರದೇಶದಲ್ಲಿ ಜೇಡ ಕಂಡುಬಂದಿದೆ. ಆದರೆ, ಗಿಡ, ಮರಗಳ ಮೇಲೆ ಕಾಣಿಸಿಲ್ಲ.
  • ಕಾಡು ಮಲ್ಲಿಗೆ ಮತ್ತು ನೀಲಗಿರಿಯ ಸುರಳಿ ಸುತ್ತಿದ ಎಲೆಗಳಲ್ಲಿ ಸಣ್ಣ ಗೂಡು ನಿರ್ಮಿಸಿ ರಾತ್ರಿ ವಿಶ್ರಮಿಸುತ್ತದೆ. ಇದು ಹಗಲು ಚಟುವಟಿಕೆಯಿಂದ ಕೂಡಿರುತ್ತದೆ.
  • ಸುರಳಿ ಸುತ್ತಿರುವ ಒಣ ಎಲೆಗಳಲ್ಲಿ ಹೆಣ್ಣು ಜೇಡ ಬಲೆಯ ಗೂಡು ನಿರ್ಮಿಸಿ ಮೊಟ್ಟೆಯಿಟ್ಟು ಮರಿಗಳು ಆಗುವವರೆಗೂ ಕಾಯುತ್ತದೆ.

ಜೇಡ ಪ್ರಭೇದಗಳು :

  • ರಾಜ್ಯದಲ್ಲಿ 500 ಜೇಡ ಪ್ರಭೇದ ಇದು ಜಗತ್ತಿನಲ್ಲಿ ಗುರುತಿಸಲಾಗಿರುವ ಸುಮಾರು 50,000 ಜೇಡ ಪ್ರಭೇದಗಳ ಪಟ್ಟಿಗೆ ಹೊಸ ಸೇರ್ಪಡೆಯಾಗಿದೆ. ಭಾರತದಲ್ಲಿ ಸುಮಾರು 2,000 ಜೇಡ ಪ್ರಭೇದಗಳಿವೆ ಎಂದು ಗುರುತಿಸಲಾಗಿದೆ. ಕರ್ನಾಟಕದಲ್ಲಿ ಸುಮಾರು 500 ಜೇಡದ ಪ್ರಭೇದಗಳಿವೆ.