Published on: November 3, 2022

ಸುದ್ಧಿ ಸಮಾಚಾರ – 03 ನವೆಂಬರ್ 2022

ಸುದ್ಧಿ ಸಮಾಚಾರ – 03 ನವೆಂಬರ್ 2022

  • ದೇಶದಲ್ಲೇ ಮೊದಲ ಬಾರಿಗೆ ಗ್ರಾಮಾಭಿವೃದ್ಧಿ ಗ್ರೂಪ್ ಫೆಲೋಶಿಪ್ ಕರ್ನಾಟಕ ರಾಜ್ಯದಲ್ಲಿ ಘೋಷಣೆಯಾಗಿತ್ತಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯವು ರಾಜ್ಯೋತ್ಸವದ ಹಿನ್ನೆಲೆಯಲ್ಲಿ ‘ನಮ್ಮ ಗ್ರಾಮ ನಮ್ಮ ಹೆಮ್ಮೆ’ಪರಿಕಲ್ಪನೆಯಡಿ ಫೆಲೋಶಿಪ್ ಯೋಜನೆ ರೂಪಿಸಿದೆ.
  • ವಿಶ್ವವಿಖ್ಯಾತ ಹಂಪಿಯಲ್ಲಿ ಕನ್ನಡ ರಾಜ್ಯಾತ್ಸವದ ನಿಮಿತ್ತ ರಾತ್ರಿ ಹಂಪಿ ಬೈ ನೈಟ್ ವಿನೂತನ ಯೋಜನೆಯ ಪ್ರಾಯೋಗಿಕ ಕಾರ್ಯಕ್ರಮಕ್ಕೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಚಾಲನೆ ನೀಡಿದರು. ಇನ್ನು ಮುಂದೆ ಹಂಪಿಯಲ್ಲಿರುವ 18 ಸ್ಮಾರಕಗಳನ್ನು ಪ್ರವಾಸಿಗರು ಸಂಜೆ ವೇಳೆ ಬೆಳಕು ಮತ್ತು ಧ್ವನಿ ಕಾರ್ಯಕ್ರಮದ ಮೂಲಕ ವೀಕ್ಷಿಸಬಹುದು
  • ದೇಶದ ಮೊದಲ ಕಾಡುಕೋಣ (Gour) ಸಫಾರಿಗೆ ಶಿವಮೊಗ್ಗದ ತ್ಯಾವರೆಕೊಪ್ಪದ ಹುಲಿ–ಸಿಂಹ ಧಾಮ ಸಿದ್ಧವಾಗಿದೆ. ನ. 1 ರಂದು ಕರ್ನಾಟಕ ರಾಜ್ಯೋ ತ್ಸವದ ದಿನ ಪ್ರವಾಸಿಗರಿಗೆ ಪ್ರಾಯೋಗಿಕವಾಗಿ ಕಾಡುಕೋಣಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಯಿತು.
  • ಪ್ಯಾಲೆಸ್ತೀನ್ ನಿರಾಶ್ರಿತರಿಗಾಗಿ ಭಾರತವು ಯುನೈಟೆಡ್ ನೇಷನ್ಸ್ ರಿಲೀಫ್ ಅಂಡ್ ವರ್ಕ್ಸ್ ಏಜೆನ್ಸಿ(UNRWA)ಗೆ 2.5 ಮಿಲಿಯನ್ ಡಾಲರ್ ನೆರವು ನೀಡಿದೆ.
  • ಅಂತರಿಕ್ಷ ಕಕ್ಷೆಯಲ್ಲಿ ತನ್ನ ಅಸ್ತಿತ್ವ ಬಲಪಡಿಸುವುದರ ಭಾಗವಾಗಿ ಮೂರು ಮತ್ತು ಅಂತಿಮ ಹಂತದ ಪರಿಕರಗಳನ್ನು ಹೊತ್ತ ಮೆಂಗ್ಟಿಯಾನ್ಅನ್ನು ತನ್ನ ಶಾಶ್ವತ ಬಾಹ್ಯಾಕಾಶ ನಿಲ್ದಾಣಕ್ಕೆ ತಲುಪಿಸುವಲ್ಲಿ ಚೀನಾ ಯಶಸ್ವಿಯಾಯಿತು. ಮೆಂಗ್ಟಿಯನ್ ಅನ್ನು ಲಾಂಗ್ ಮಾರ್ಚ್-5 ಬಿಕ್ಯಾರಿಯರ್ ರಾಕೆಟ್‌ನಲ್ಲಿ ಉಡಾವಣೆ ಮಾಡಲಾಯಿತು.