Published on: June 26, 2023

12ನೇ ಶತಮಾನದ ಮೂರು ಶಾಸನಗಳು ಪತ್ತೆ

12ನೇ ಶತಮಾನದ ಮೂರು ಶಾಸನಗಳು ಪತ್ತೆ

ಸುದ್ದಿಯಲ್ಲಿ ಏಕಿದೆ?   ರಾಯಚೂರು  ಜಿಲ್ಲೆಯ ಮಸ್ಕಿ ತಾಲ್ಲೂಕಿನ ವಟಗಲ್ ಗ್ರಾಮದಲ್ಲಿ 12ನೇ ಶತಮಾನದ ಮೂರು ಶಾಸನಗಳು ಪತ್ತೆಯಾಗಿವೆ. ‘ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಎರಡು ಮತ್ತು ಈಶ್ವರ ದೇವಸ್ಥಾನದ ಆವರಣದಲ್ಲಿ ಒಂದು ಶಾಸನ ಪತ್ತೆಯಾಗಿವೆ.

ಶಾಸನಗಳ  ವಿವರ

  • ಎರಡು ಕಪ್ಪು ಶಿಲಾ ಶಾಸನಗಳಲ್ಲಿ ಒಂದು ಏಳು ಹೆಡೆ ನಾಗಶಿಲ್ಪದ ಪಕ್ಕದಲ್ಲಿದ್ದು 23 ಸಾಲುಗಳಿಂದ ರಚಿತವಾಗಿದೆ.
  • ಕ್ರಿ.ಶ.12ನೇ (ಕ್ರಿ.ಶ. 1184-1198) ಶತಮಾನದ ಕಲ್ಯಾಣ ಚಾಲುಕ್ಯ ಅರಸ ನಾಲ್ಕನೇ ಸೋಮೇಶ್ವರನ ರಾಜ್ಯಭಾರದಲ್ಲಿ ಮಹಾಮಂಡಳೇಶ್ವರನಾಗಿ ವಟಗಲ್ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಹೊಲ್ಲರಸನು ಆಳ್ವಿಕೆ ಮಾಡುತ್ತಿದ್ದ ಎನ್ನುವ ಮಾಹಿತಿ ಇದೆ ’.
  • ಶಾಸನದ ಆರಂಭದಲ್ಲಿ ‘ವೊಟ್ಟುಗಲ್ಲು’ ಎನ್ನುವ ಮಾಹಿತಿ ಇದ್ದು ನಾಗವರ್ಮ ಅರಸ ಮತ್ತು ನಾಗರಸ ಎನ್ನುವವರ ಹೆಸರು ಉಲ್ಲೇಖವಾಗಿದೆ.
  • ಎರಡನೇ ಶಾಸನದಲ್ಲಿ ಸೂರ್ಯ , ಚಂದ್ರ, ನಂದಿ, ಕಾಳಾಮುಖಮುನಿ ಮತ್ತು ಖಡ್ಗದ ಶಿಲ್ಪಗಳಿದ್ದು, ಕಲ್ಯಾಣ ಚಾಲುಕ್ಯ ಅರಸ ಆರನೇ ವಿಕ್ರಮಾಧಿತ್ಯನ ಹೆಸರು ಕಂಡು ಬರುತ್ತದೆ.
  • ಕ್ರಿ.ಶ. 18-19ನೇ ಶತಮಾನದ ಮೂರನೇ ಶಾಸನದಲ್ಲಿ ಮೊರಟ ಎನ್ನುವ ಅಕ್ಷರವಿದ್ದು, ಅದು ಸಿರವಾರ ತಾಲ್ಲೂಕಿನ ಮಲ್ಲಟ ಗ್ರಾಮ ಎಂದು ತಿಳಿಯುತ್ತದೆ.