Published on: December 5, 2022

‘ನೈತಿಕತೆ ಪೋಲೀಸ್’

‘ನೈತಿಕತೆ ಪೋಲೀಸ್’

ಸುದ್ದಿಯಲ್ಲಿ  ಏಕಿದೆ?

ಹಿಜಾಬ್ ವಿರೋಧಿ ಪ್ರತಿಭಟನೆಗೆ ಮಣಿದು  ಇರಾನ್ ಸರ್ಕಾರ ತನ್ನ ದೇಶದಲ್ಲಿನ ‘ನೈತಿಕತೆ ಪೋಲೀಸ್’ ವ್ಯವಸ್ಥೆಯನ್ನು ವಿಸರ್ಜಿಸಿದೆ.

ಮುಖ್ಯಾಂಶಗಳು

  • ಇರಾನ್ ದೇಶದ ಕಟ್ಟುನಿಟ್ಟಾದ ಮಹಿಳಾ ಡ್ರೆಸ್ ಕೋಡ್ ಅನ್ನು ಉಲ್ಲಂಘಿಸಿದ ಆರೋಪದ ಮೇಲೆ ಮಹ್ಸಾ ಅಮಿನಿಯ ಬಂಧನ ಮತ್ತು ಸಾವಿನ ಬಳಿಕ ಭುಗೆಲೆದ್ದಿದ್ದ ಬೃಹತ್ ಪ್ರತಿಭಟನೆಗೆ ಮಣಿದಿರುವ ಇರಾನ್ ಸರ್ಕಾರ ತನ್ನ ತನ್ನ ನೈತಿಕತೆಯ ಪೊಲೀಸರನ್ನು ರದ್ದುಗೊಳಿಸಿದೆ.
  • “ನೈತಿಕತೆಯ ಪೊಲೀಸರಿಗೆ ನ್ಯಾಯಾಂಗದೊಂದಿಗೆ ಯಾವುದೇ ಸಂಬಂಧವಿಲ್ಲ” ಮತ್ತು ಅದನ್ನು ರದ್ದುಗೊಳಿಸಲಾಗಿದೆ.
  • ನೈತಿಕತೆಯ ಪೋಲೀಸ್ — ಔಪಚಾರಿಕವಾಗಿ ಗಶ್ಟ್-ಇ ಇರ್ಷಾದ್ ಅಥವಾ “ಮಾರ್ಗದರ್ಶನ ಪ್ಯಾಟ್ರೋಲ್” ಎಂದು ಕರೆಯಲ್ಪಡುತ್ತದೆ.

ನೈತಿಕತೆಯ ಪೋಲೀಸ್

  • ಇರಾನ್ ಅಧ್ಯಕ್ಷ ಮಹಮ್ಮದ್ ಅಹ್ಮದಿನೆಜಾದ್ ಅವರು ಈ “ಮಾರ್ಗದರ್ಶನ ಮತ್ತು ಹಿಜಾಬ್ ಸಂಸ್ಕೃತಿಯನ್ನು ಹರಡಲು” ಕಠಿಣವಾದ ನೈತಿಕತೆಯ ಪೋಲೀಸ್ ಸ್ಥಾಪಿಸಿದ್ದರು.
  • ಇದು ಕಡ್ಡಾಯವಾಗಿ ಸ್ತ್ರೀಯರು ತಲೆಯ ಹೊದಿಕೆಯನ್ನು ತೊಡಲೇಬೇಕು ಎಂದು ಹೇಳುತ್ತದೆ.
  • 2006 ರಲ್ಲಿ ಪ್ರಾರಂಭವಾಗಿತ್ತು.