Published on: October 22, 2022

2023ರಲ್ಲಿ ಸೂರ್ಯನಲ್ಲಿಗೆ ಇಸ್ರೊ ಉಪಗ್ರಹ

2023ರಲ್ಲಿ ಸೂರ್ಯನಲ್ಲಿಗೆ ಇಸ್ರೊ ಉಪಗ್ರಹ

ಸುದ್ಧಿಯಲ್ಲಿ ಏಕಿದೆ?

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) 2023ರಲ್ಲಿ ಸೂರ್ಯನ ಬಳಿಗೆ ಒಂದು ಉಪಗ್ರಹ ಮತ್ತು ಚಂದ್ರನಲ್ಲಿಗೆ ಒಂದು ನೌಕೆಯನ್ನು ಕಳುಹಿಸಲಿದೆ. 2024ರ ಗಗನಯಾನ ಯೋಜನೆ ಸಂಬಂಧ, 2023ರಲ್ಲಿ ಆರು ಕಾರ್ಯಾಚರಣೆಗಳನ್ನು ನಡೆಸಲಾಗುತ್ತದೆ.

ಮುಖ್ಯಾಂಶಗಳು

  • 2023ರ ಫೆಬ್ರುವರಿಯಲ್ಲಿ ಸೂರ್ಯನಲ್ಲಿಗೆ ‘ಆದಿತ್ಯ–ಎಲ್‌1’ ಉಪಗ್ರಹವನ್ನು ಕಳುಹಿಸಲು ಯೋಜನೆ ರೂಪಿಸಲಾಗಿದೆ.
  • 400 ಕೆ.ಜಿ. ತೂಕದ ಆದಿತ್ಯ–ಎಲ್‌1 ಸೂರ್ಯನನ್ನು ಸುತ್ತು ಹಾಕುತ್ತಾ, ಅಧ್ಯಯನ ನಡೆಸಲಿದೆ. ಜೂನ್‌ ವೇಳೆಗೆ ಚಂದ್ರನ ಬಳಿಗೆ ಚಂದ್ರಯಾನ–3 ನೌಕೆಯನ್ನು ಕಳುಹಿಸಲಾಗುತ್ತದೆ.
  • ಚಂದ್ರಯಾನ–2 ಯೋಜನೆಯನ್ನೇ ಚಂದ್ರಯಾನ–3 ಅನುಸರಿಸಲಿದೆ. ಆದರೆ ನೌಕೆಯು ಹೆಚ್ಚು ಕರಾರುವಾಕ್ಕಾಗಿ ಕಾರ್ಯನಿರ್ವಹಿಸುವಂತೆ ಅಭಿವೃದ್ಧಿಪಡಿಸಲಾಗಿದೆ.
  • ಇಸ್ರೊವಿನ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾದ ಗಗನಯಾನವೂ ನಿಗದಿಯಂತೆ ನಡೆಯುತ್ತಿದೆ. 2024ರಲ್ಲಿ ಮಾನವರನ್ನು ಚಂದ್ರನಲ್ಲಿಗೆ ಕಳುಹಿಸುವುದಕ್ಕೂ ಮುನ್ನ, ಆರು ಪೂರ್ವಭಾವಿ ಪರೀಕ್ಷೆಗಳನ್ನು ನಡೆಸಲಾಗತ್ತದೆ.

‘ಆದಿತ್ಯ ಎಲ್-1’

ದೇಶದ ಮೊದಲ ಬಾಹ್ಯಾಕಾಶ ಆಧಾರಿತ ಸೌರ ವೀಕ್ಷಣಾಲಯ “ಆದಿತ್ಯ ಎಲ್-1” ಆಗಿದ್ದು, ಬಾಹ್ಯಾಕಾಶ ನೌಕೆಯನ್ನು ಭೂಮಿ-ಸೂರ್ಯ ಲಾಗ್ ರೇಂಜ್ ಪಾಯಿಂಟ್ ಎಲ್1ನಲ್ಲಿ ಇರಿಸಲು ಇಸ್ರೋ ತಯಾರಿ ನಡೆಸುತ್ತಿದೆ.

ಸೂರ್ಯನ ವಿದ್ಯಮಾನಗಳ ಅಧ್ಯಯನ ನಡೆಸುವ ಆದಿತ್ಯ ಮಿಷನ್ನ ಗುರಿಗಳೇನು?

  1. ಸೂರ್ಯ ನಕ್ಷತ್ರದ ವಾತಾವರಣದ ಡೈನಾಮಿಕ್ಸ್ ಅಧ್ಯಯನ
  2. ಸೂರ್ಯನ ಉಷ್ಣಾಂಶ, ಆಯಾನು ಪ್ಲಾಸ್ಮಾ ಹಾಗೂ ಅದರ ಹಿಂದೆ ಇರುವ ಭೌತಶಾಸ್ತ್ರದ ಬಗ್ಗೆ ಅಧ್ಯಯನ.
  1. ಆಯಸ್ಕಾಂ ತೀಯ ವಲಯದ ಅಳತೆಯ ಅಧ್ಯಯನ ಸೇರಿ ಸೂರ್ಯನ ಯುವಿ ಕಿರಣ ಹಾಗೂ ಇನ್ನಿತರೆ ಅಧ್ಯಯನಗಳನ್ನು ಆದಿತ್ಯ ಮಾಡಲಿದೆ. ಈ ಎಲ್ಲಾ ಗುರಿಗಳನ್ನ ಸಾಧಿಸಲು 7ಪೇ ಲೋಡ್ಗಳನ್ನ ಬಾಹ್ಯಾಕಾಶ ನೌಕೆಯಲ್ಲಿ ಇರಿಸಲಾಗುವುದು, ಇದರಲ್ಲಿ 4ಪೇ ಲೋಡ್ಗಳು ಸೂರ್ಯನ ವೀಕ್ಷಣೆಗೆ ಹಾಗೂ ಇನ್ನುಳಿದ 3ಪೇ ಲೋಡ್ಗಳು ಸೂರ್ಯನ ಆಯಸ್ಕಾಂ ತ ವಲಯ ಹಾಗೂ ಇತರೆ ಅಳತೆಗೆ ವಿನ್ಯಾಸಗೊಳಿಸಲಾಗುತ್ತಿದೆ.

 ಚಂದ್ರಯಾನ–2

  • ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಚಂದ್ರಯಾನ -2 ಬಾಹ್ಯಾಕಾಶ ನೌಕೆ / ಕಕ್ಷೆಯನ್ನು ಚಂದ್ರನ ಮೇಲ್ಮೈಯಲ್ಲಿ ಇಳಿಸುವ ಉದ್ದೇಶದಿಂದ 2019 ರ ಜುಲೈ 22 ರಂದು ಉಡಾವಣೆ ಮಾಡಲಾಯಿತು.
  • ಲ್ಯಾಂಡರ್ (ವಿಕ್ರಮ್) ಮೃದುವಾದ ಲ್ಯಾಂಡಿಂಗ್ ಮಾಡಲು ಸಾಧ್ಯವಾಗದ ಕಾರಣ ಮಿಷನ್ ಯಶಸ್ವಿಯಾಗಲಿಲ್ಲ. ಆದಾಗ್ಯೂ, ಆರ್ಬಿಟರ್ ಅನ್ನು 20 ಆಗಸ್ಟ್ 2019 ರಂದು ಯಶಸ್ವಿಯಾಗಿ ಚಂದ್ರನ ಕಕ್ಷೆಯಲ್ಲಿ ಇರಿಸಲಾಯಿತು.
  • ಚಂದ್ರಯಾನ -2 ಮಿಷನ್‌ನ ಉದ್ದೇಶಗಳು ಚಂದ್ರನ ಮೇಲ್ಮೈಯಲ್ಲಿ ಮೃದುವಾದ ಇಳಿಯುವಿಕೆ ಮತ್ತು ರೋವಿಂಗ್ ಸೇರಿದಂತೆ ಎಂಡ್-ಟು-ಎಂಡ್ ಲೂನಾರ್ ಮಿಷನ್ ಸಾಮರ್ಥ್ಯದ ಪ್ರಮುಖ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಪ್ರದರ್ಶಿಸುವುದಾಗಿದೆ. ಸ್ಥಳಾಕೃತಿ, ಖನಿಜಶಾಸ್ತ್ರ, ಮೇಲ್ಮೈ ರಾಸಾಯನಿಕ ಸಂಯೋಜನೆ, ಥರ್ಮೋ-ಫಿಸಿಕಲ್ ಗುಣಲಕ್ಷಣಗಳು ಮತ್ತು ಚಂದ್ರನ ವಾತಾವರಣದ ವಿವರವಾದ ಅಧ್ಯಯನದ ಮೂಲಕ ಚಂದ್ರನ ವೈಜ್ಞಾನಿಕ ಜ್ಞಾನವನ್ನು ವಿಸ್ತರಿಸಲು ಚಂದ್ರನ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು.
  • ಇಸ್ರೊ ಪ್ರಕಾರ, ಚಂದ್ರಯಾನ -2 ಮಿಷನ್ ಕೇವಲ ಚಂದ್ರನ ಒಂದು ಪ್ರದೇಶವನ್ನು ಮಾತ್ರವಲ್ಲದೆ ಭೂಗೋಳ, ಮೇಲ್ಮೈ ಮತ್ತು ಚಂದ್ರನ ಉಪ-ಮೇಲ್ಮೈಯನ್ನು ಒಂದೇ ಕಾರ್ಯಾಚರಣೆಯಲ್ಲಿ ಸಂಯೋಜಿಸುವ ಎಲ್ಲಾ ಪ್ರದೇಶಗಳನ್ನು ಅಧ್ಯಯನ ಮಾಡುವ ಗುರಿಯನ್ನು ಹೊಂದಿತ್ತು.