Published on: October 18, 2022

75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳು

75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳು

Māmu Kānjan ಸುದ್ದಿಯಲ್ಲಿ ಏಕಿದೆ?

Hanford ದೇಶದ 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳ (ಡಿಬಿಯು) ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ವರ್ಚುವಲ್ ಮಾಧ್ಯಮದ ಮೂಲಕ ನೆರವೇರಿಸಿದರು.

ಮುಖ್ಯಾಂಶಗಳು

  • ಇವು ಹೊಸ ಬ್ಯಾಂಕಗಳಲ್ಲ ಹಾಲಿ ಇರುವ ಬ್ಯಾಂಕಗಳ ಆಯ್ದ ಶಾಖೆಗಳಲ್ಲಿ ವಹಿವಾಟುಗಳನ್ನು ಡಿಜಿಟಲ್ ರೂಪದಲ್ಲಿಯೇ ನಡೆಸಲಾಗುತ್ತದೆ.
  • ದಿನದ 24 ಘಂಟೆ ಹಣ ಜಮಾ ಮಾಡುವ ಮತ್ತು ಹಣವನ್ನು ತೆಗೆಯುವ ಸೌಲಭ್ಯ ಇರುತ್ತದೆ.
  • ದೇಶಕ್ಕೆ ಸ್ವಾತಂತ್ರ್ಯ ಬಂದು 75ವರ್ಷಗಳಾದ ಕಾರಣ 75 ಡಿಜಿಟಲ್ ಬ್ಯಾಂಕಗಳನ್ನು ಸ್ಥಾಪಿಸಲಾಗಿದೆ.

ರಾಜ್ಯದಲ್ಲಿ ನಾಲ್ಕು ಕಡೆ

  • ಕರ್ನಾಟಕದಲ್ಲಿ ನಾಲ್ಕು ಕಡೆ ಈ ಡಿಜಿಟಲ್ ಸೌಲಭವನ್ನು ನೀಡಲಾಗಿದೆ. ಮಂಗಳೂರು, ಮೈಸೂರು, ರಾಯಚೂರು ಮತ್ತು ಬೆಂಗಳೂರು ಬಳಿ ಇರುವ ದೇವನಹಳ್ಳಿ

ಉದ್ದೇಶ

  • ಪ್ರಧಾನಿಯವರ ಡಿಜಿಟಲ್ ಇಂಡಿಯಾ ಕನಸಿಗೆ ಪುಷ್ಟಿ ನೀಡುವ ನಿಟ್ಟಿನಲ್ಲಿ ಹಾಗೂ ಭಾರತದಲ್ಲಿ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು ಲೋಕಾರ್ಪಣೆ ಮಾಡಲಾಯಿತು.

ಪ್ರಯೋಜನಗಳು

  • ಉಳಿತಾಯ ಖಾತೆ ತೆರೆಯುವಿಕೆ
  • ಖಾತೆಯ ಬ್ಯಾಲೆನ್ಸ್ ಪರಿಶೀಲನೆ
  • ಪಾಸ್ ಬುಕ್ ಮುದ್ರಣ
  • ನಗದು ವರ್ಗಾವಣೆ
  • ಸಾಲದ ಅರ್ಜಿ
  • ನಿಗದಿತ ಠೇವಣಿ ಹೂಡಿಕೆ
  • ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡಗಳಿಗೆ ಅರ್ಜಿ
  • ಬಿಲ್ ಗಳು, ತೆರಿಗೆ ಪಾವತಿಸುವಿಕೆ

ಏನೆಲ್ಲಾ ಸೇವೆ

  • ಸಣ್ಣ ಪ್ರಮಾಣದ ಸಾಲ
  • ಗ್ರಾಹಕರಿಗೆ ನೆರವಾಗಲು ಮಾಹಿತಿ ನೀಡಲು ಸಿಬ್ಬಂದಿ ವ್ಯವಸ್ಥೆ
  • ಸೈಬರಾ ಭದ್ರತೆಯ ಬಗ್ಗೆ ಅರಿವು ಮೂಡಿಸಲು ಶಿಬಿರ ಯೋಜನೆ
  • ಇತರ ಬ್ಯಾಂಕಗಳ ಗ್ರಾಹಕರಿಗೆ ಆನ್ ಲೈನ್ ಬ್ಯಾಂಕ್ ಸೇವೆಗೆ ಶಾಖೆಯಲ್ಲಿ ಟ್ಯಾಬ್ ವ್ಯವಸ್ಥೆ