ಡಿಜಿಟಲ್ ಚಿನ್ನದ ಹೂಡಿಕೆ ಬಗ್ಗೆ ಸೆಬಿ (SEBI) ಕಠಿಣ ಎಚ್ಚರಿಕೆ

ಸುದ್ದಿ - ಚಿನ್ನದ ಬೆಲೆ ಏರಿಕೆ ಮತ್ತು ಡಿಜಿಟಲ್ ಹೂಡಿಕೆ ಪ್ಲಾಟ್‌ಫಾರ್ಮ್‌ಗಳ ಜನಪ್ರಿಯತೆಯ ನಡುವೆ, ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಹೂಡಿಕೆದಾರರಿಗೆ ಡಿಜಿಟಲ್ ಗೋಲ್ಡ್ (Digital Gold) ಮತ್ತು ಇ-ಗೋಲ್ಡ್ ಉತ್ಪನ್ನಗಳ ಬಗ್ಗೆ ಎಚ್ಚರಿಕೆ ನೀಡಿದೆ. ಇವುಗಳ ಅನಿಯಂತ್ರಿತ ಸ್ವಭಾವ ಮತ್ತು ಸಂಭಾವ್ಯ ಅಪಾಯಗಳ ಬಗ್ಗೆ ಸಾರ್ವಜನಿಕರನ್ನು ಎಚ್ಚರಿಸಿದೆ.

ಡಿಜಿಟಲ್ ಗೋಲ್ಡ್ ಎಂದರೇನು?

  • ಡಿಜಿಟಲ್ ಗೋಲ್ಡ್ ಎಂದರೆ ಭೌತಿಕ ಸ್ವಾಧೀನವಿಲ್ಲದೆ ಆನ್‌ಲೈನ್‌ನಲ್ಲಿ ಚಿನ್ನವನ್ನು ಖರೀದಿಸುವುದು.
  • ಸೇವಾ ಪೂರೈಕೆದಾರರು ಸಂಗ್ರಹಿಸಿದ ಸಮಾನ ಪ್ರಮಾಣದ ಚಿನ್ನದಿಂದ  ಬೆಂಬಲಿತವಾಗಿರುತ್ತದೆ.
  • ಬ್ಲಾಕ್‌ಚೈನ್ ತಂತ್ರಜ್ಞಾನವು ಪಾರದರ್ಶಕತೆಯನ್ನು ಮತ್ತು ಭಾಗಶಃ ಮಾಲೀಕತ್ವವನ್ನು ಖಾತ್ರಿಗೊಳಿಸುತ್ತದೆ.
  • ಹೂಡಿಕೆದಾರರು ನಂತರ ತಮ್ಮ ಹೂಡಿಕೆಯನ್ನು ಭೌತಿಕ ಚಿನ್ನವಾಗಿ (ನಾಣ್ಯಗಳು, ಬಾರ್‌ಗಳು, ಆಭರಣಗಳು) ಪರಿವರ್ತಿಸಬಹುದು.

ಸೆಬಿ (SEBI) ಏಕೆ ಎಚ್ಚರಿಕೆ ನೀಡಿದೆ?

  • ಡಿಜಿಟಲ್ ಗೋಲ್ಡ್ ಯಾವುದೇ ಹಣಕಾಸು ಪ್ರಾಧಿಕಾರದಿಂದ — SEBI ಅಥವಾ RBI ನಿಂದ ನಿಯಂತ್ರಿಸಲ್ಪಡುವುದಿಲ್ಲ.
  • ಇದನ್ನು 'ಭದ್ರತೆ' ಅಥವಾ 'ಸರಕು ಎಂದು ವರ್ಗೀಕರಿಸಲಾಗಿಲ್ಲ.
  • ಮೇಲ್ವಿಚಾರಣೆಯ ಕೊರತೆಯು ಹೂಡಿಕೆದಾರರನ್ನು ಕೌಂಟರ್‌ಪಾರ್ಟಿ (ಒಪ್ಪಂದದ ಎದುರು ಪಕ್ಷ) ಮತ್ತು ಕಾರ್ಯಾಚರಣೆಯ ಅಪಾಯಗಳಿಗೆ ಒಡ್ಡುತ್ತದೆ.

ಪ್ರಮುಖ ಹೂಡಿಕೆ ಅಪಾಯಗಳು:

  • ಕೌಂಟರ್‌ಪಾರ್ಟಿ ರಿಸ್ಕ್: ಕ್ಲಿಯರಿಂಗ್ ಕಾರ್ಪೊರೇಶನ್‌ಗಳ ಕೊರತೆಯಿಂದ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಡೀಫಾಲ್ಟ್ ಆಗುವ ಸಾಧ್ಯತೆ ಇರುತ್ತದೆ.
  • ಕಾರ್ಯಾಚರಣೆಯ ರಿಸ್ಕ್: ಪ್ಲಾಟ್‌ಫಾರ್ಮ್ ಸ್ಥಗಿತ ಅಥವಾ ತಾಂತ್ರಿಕ ವೈಫಲ್ಯಗಳಿಂದ ಹಣ ನಷ್ಟವಾಗಬಹುದು.
  • ಹೂಡಿಕೆದಾರರ ರಕ್ಷಣೆ ಇಲ್ಲ: ಇದಕ್ಕೆ SEBI ಸುರಕ್ಷತೆಗಳು ಮತ್ತು ಕುಂದುಕೊರತೆ ನಿವಾರಣಾ ಕಾರ್ಯವಿಧಾನಗಳು ಅನ್ವಯಿಸುವುದಿಲ್ಲ.
  • ಡೀಫಾಲ್ಟ್ ರಿಸ್ಕ್: ಪೂರೈಕೆದಾರರ ವ್ಯವಹಾರ ವೈಫಲ್ಯವು ಹೂಡಿಕೆಯ ಸಂಪೂರ್ಣ ನಷ್ಟಕ್ಕೆ ಕಾರಣವಾಗಬಹುದು.

ನಿಯಂತ್ರಿತ ಪರ್ಯಾಯಗಳು:

  • ಗೋಲ್ಡ್ ಇಟಿಎಫ್ (Gold ETFs) ಮತ್ತು ಎಲೆಕ್ಟ್ರಾನಿಕ್ ಗೋಲ್ಡ್ ರಿಸಿಪ್ಟ್ಸ್ (EGRs): ಇವು SEBI ನಿಂದ ನಿಯಂತ್ರಿಸಲ್ಪಡುತ್ತವೆ, ಪಾರದರ್ಶಕವಾಗಿವೆ ಮತ್ತು ಎಕ್ಸ್‌ಚೇಂಜ್‌ಗಳಲ್ಲಿ ವ್ಯಾಪಾರವಾಗುತ್ತವೆ.
  • ಸಾವರಿನ್ ಗೋಲ್ಡ್ ಬಾಂಡ್ಸ್ (SGBs): ಇವು RBI ನಿಂದ ನೀಡಲ್ಪಟ್ಟ ಮತ್ತು ಭಾರತ ಸರ್ಕಾರದ ಬೆಂಬಲಿತ ಬಾಂಡ್‌ಗಳಾಗಿದ್ದು, ಬಡ್ಡಿ ಮತ್ತು ಬಂಡವಾಳದ ಏರಿಕೆಯನ್ನು ನೀಡುತ್ತವೆ.