Published on: March 1, 2023
HD-3385 ಗೋಧಿ ತಳಿ
HD-3385 ಗೋಧಿ ತಳಿ
Mangotsfield ಸುದ್ದಿಯಲ್ಲಿ ಏಕಿದೆ? ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆ ಮತ್ತು ಏರುತ್ತಿರುವ ಉಷ್ಣಾಂಶಕ್ಕೆ ಹೊಂದಿಕೊಳ್ಳಬಲ್ಲ ವಿಶೇಷ ಗೋಧಿ ತಳಿಯನ್ನು ಅಭಿವೃದ್ಧಿಪಡಿಸಿರುವುದಾಗಿ ಭಾರತೀಯ ಕೃಷಿ ಸಂಶೋಧನಾ ಪರಿಷತ್ ಪ್ರಕಟಿಸಿದೆ.
Olesa de Montserrat ಹವಾಮಾನ ಬದಲಾವಣೆಯ ಪರಿಣಾಮಗಳು ಮತ್ತು ಗೋಧಿ ತಳಿಯ ಪರಿಚಯ
- ಇತ್ತೀಚಿನ ದಿನಗಳಲ್ಲಿ ಭಾರತವು ಗೋಧಿ ಬೆಳೆಗೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಹೆಚ್ಚಿನ ತಾಪಮಾನ ಮತ್ತು ಚಳಿಗಾಲದ ತುಂತುರು ಮಳೆಯಿಂದಾಗಿ ಗೋಧಿ ಉತ್ಪಾದನೆಯ ಮೇಲೆ ಪರಿಣಾಮ ಬೀರಿತು. ಬೆಲೆಗಳು ಏರಿದವು.
- ಈ ಋತುವಿನಲ್ಲಿ ಜನರು ದೇಶದಾದ್ಯಂತ ಗೋಧಿಯ ಕೊರತೆಯನ್ನು ಎದುರಿಸಿದರು. ಇದರ ಹಿಂದಿನ ಮುಖ್ಯ ಕಾರಣ ಹವಾಮಾನ ಬದಲಾವಣೆ.
- ಸಾಮಾನ್ಯವಾಗಿ ಜನವರಿ-ಮಾರ್ಚ್‌ನಲ್ಲಿ ಬೀಳುವ ಚಳಿಗಾಲದ ಮಳೆಯು ಬೆಳೆಗೆ ಬಹಳ ಅವಶ್ಯಕವಾಗಿದೆ. ಈ ಮಳೆಯಿಲ್ಲದೆ ತಾಪಮಾನ ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ, ಗೋಧಿ ಬೀಜಗಳು ಮೊಳಕೆಯೊಡೆಯಲು, ಹೂಬಿಡುವಲ್ಲಿ ಮತ್ತು ಅವುಗಳ ಸಂಪೂರ್ಣವಾಗಿ ಬೆಳೆಯಲು ತೊಂದರೆಗಳನ್ನು ಎದುರಿಸುತ್ತವೆ.
- ಜನವರಿಯಲ್ಲಿ ಏಕದಳ ಧಾನ್ಯಗಳ ಕೊರತೆ ದಾಖಲೆಯ ಶೇ. 16.12ರಷ್ಟಾಗಿತ್ತು. ಅಲ್ಲದೇ ಗೋಧಿ ಮತ್ತು ಗೋಧಿ ಹಿಟ್ಟಿನ ಬೆಲೆಯಲ್ಲಿ ವಾರ್ಷಿಕ ಶೇ. 25.05ರಷ್ಟು ಏರಿಕೆಯಾಗಿದೆ. ಫೆ.1ರಂದು ಸರ್ಕಾರಿ ಗೋಧಾಮುಗಳಲ್ಲಿ 154.44 ಲಕ್ಷ ಟನ್ ಗೋಧಿ ಶೇಖರಣೆ ಇತ್ತು. ಇದು ಈ ದಿನಾಂಕದಂದು ಕಳೆದ ಆರು ವರ್ಷಗಳಲ್ಲೇ ಅತ್ಯಂತ ಕಡಿಮೆಯಾಗಿದೆ. ಇನ್ನೊಂದೆಡೆ, ಕಳೆದ ಮಾರ್ಚ್‌ನಲ್ಲಿ ತಾಪಮಾನ ತೀವ್ರವಾಗಿ ಏರಿಕೆಯಾಗಿತ್ತು. ಇದು ಗೋಧಿ ಇಳುವರಿ ಮೇಲೆ ಪರಿಣಾಮ ಬೀರಿತ್ತು.
- ಇಂತಹ ಸೂಕ್ಷ್ಮ ವ್ಯತ್ಯಾಸಗಳನ್ನು ಕೊನೆಗೊಳಿಸಲು, ಭಾರತೀಯ ಕೃಷಿ ಸಂಶೋಧನಾ ಮಂಡಳಿಯು ಇತ್ತೀಚೆಗೆ HD-3385 ಎಂಬ ಹವಾಮಾನ-ಸ್ಮಾರ್ಟ್ ಗೋಧಿ ವಿಧವನ್ನು ಅಭಿವೃದ್ಧಿಪಡಿಸಿದ್ದಾರೆ.
HD-3385 ಬಗ್ಗೆ
- ಎತ್ತರ: 95 ಸೆಂ. ಮೀ.
- ಸಮಯ: 100 ರಿಂದ 110 ದಿನಗಳು
- ಈ ಹೊಸ ಗೋಧಿ ವಿಧವು ಆರಂಭಿಕ ಬಿತ್ತನೆಗೆ ಸೂಕ್ತವಾಗಿದೆ, ಶಾಖದ ಪ್ರಭಾವದಿಂದ ಇದು ಪಾರಾಗುವ ಸಾಮರ್ಥ್ಯ ಹೊಂದಿದೆ ಮತ್ತು ಮಾರ್ಚ್ ಅಂತ್ಯದ ಮೊದಲು ಇದನ್ನು ಕೊಯ್ಲು ಮಾಡಬಹುದು
- ಭಾರತದಲ್ಲಿ ಗೋಧಿ-ಉತ್ಪಾದಿಸುವ ಪ್ರಮುಖ ರಾಜ್ಯಗಳು : (ಚಳಿಗಾಲದಲ್ಲಿ ಉತ್ಪಾದನೆ) ರಾಜಸ್ಥಾನ, ಪಂಜಾಬ್ ಮತ್ತು ಹರಿಯಾಣ. ಇವುಗಳು ನವೆಂಬರ್ ಆರಂಭದಲ್ಲಿ ಬಿತ್ತನೆ ಮಾಡುತ್ತವೆ. ಯುಪಿ ಮತ್ತು ಬಿಹಾರ ರಾಜ್ಯಗಳು ನವೆಂಬರ್ ಅಂತ್ಯದಲ್ಲಿ ಬಿತ್ತನೆ ಮಾಡುತ್ತವೆ.