Published on: October 26, 2023

POSH ಕಾಯ್ದೆ ಅನುಷ್ಠಾನ

POSH ಕಾಯ್ದೆ ಅನುಷ್ಠಾನ

ಸುದ್ದಿಯಲ್ಲಿ ಏಕಿದೆ? ಉದ್ಯೋಗ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ (ತಡೆ, ನಿರ್ಬಂಧ ಮತ್ತು ಪರಿಹಾರ) ಕಾಯ್ದೆಯ (ಪಿಒಎಸ್ಎಚ್ ಕಾಯ್ದೆ) ಪರಿಣಾಮಕಾರಿ ಅನುಷ್ಠಾನ ಖಾತ್ರಿಪಡಿಸುವುದಕ್ಕಾಗಿ  ನಾಲ್ಕು ವಾರಗಳೊಳಗೆ ಪ್ರತಿ ಜಿಲ್ಲೆಯಲ್ಲಿಅಧಿಕಾರಿಯನ್ನು ನೇಮಕ ಮಾಡಬೇಕು ಎಂದು ಎಲ್ಲ ರಾಜ್ಯಗಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

ಮುಖ್ಯಾಂಶಗಳು

 ಕಾಯ್ದೆಯ ಅನುಷ್ಠಾನದ ಮೇಲ್ವಿಚಾರಣೆ ಹಾಗೂ ನೆರವು ನೀಡುವುದಕ್ಕಾಗಿ ಇಲಾಖೆಯ ಅಧಿಕಾರಿಯೊಬ್ಬರನ್ನು ನೋಡಲ್ ವ್ಯಕ್ತಿಯನ್ನಾಗಿ ನೇಮಕ ಮಾಡಬೇಕು ಎಂದು ನ್ಯಾಯಮೂರ್ತಿಗಳಾದ ಎಸ್.ರವೀಂದ್ರ ಭಟ್ ಹಾಗೂ ದೀಪಂಕರ್ ದತ್ತಾ ಅವರಿದ್ದ ನ್ಯಾಯಪೀಠ ನಿರ್ದೇಶಿಸಿದೆ.

POSH ಕಾಯಿದೆ

ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ(ತಡೆಗಟ್ಟುವಿಕೆ(Prevention), ನಿಷೇಧ(Prohibition) ಮತ್ತು ಪರಿಹಾರ(Redressal)) ಕಾಯಿದೆ  2013 ರಲ್ಲಿ ಭಾರತ ಸರ್ಕಾರವು ಕಾರ್ಯಸ್ಥಳದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ಕಿರುಕುಳದ ಸಮಸ್ಯೆಯನ್ನು ಪರಿಹರಿಸಲು ಜಾರಿಗೆ ತಂದ ಶಾಸನವಾಗಿದೆ. ಈ ಕಾಯಿದೆಯು ಮಹಿಳೆಯರಿಗೆ ಸುರಕ್ಷಿತ ಮತ್ತು ಅನುಕೂಲಕರ ಕೆಲಸದ ವಾತಾವರಣವನ್ನು ಸೃಷ್ಟಿಸಲು ಮತ್ತು ಲೈಂಗಿಕ ಕಿರುಕುಳದ ವಿರುದ್ಧ ರಕ್ಷಣೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.