17 ಜನವರಿ 2024

17 ಜನವರಿ 2024

1. 2022ನೇ ಸಾಲಿನ ‘ರಾಜ್ಯಗಳ ನವೋದ್ಯಮ ‘ ರ್ಯಾಕಿಂಗ್ ವರದಿ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 ಇದರಲ್ಲಿ ಕರ್ನಾಟಕ ಸತತ ಎರಡನೇ ಬಾರಿಗೆ ‘ಶ್ರೇಷ್ಠ ಸಾಧಕ’ ರಾಜ್ಯವಾಗಿ ಹೊರಹೊಮ್ಮಿದೆ.
2 ಗುಜರಾತ ಸತತ ನಾಲ್ಕನೇ ಬಾರಿಗೆ ಶ್ರೇಷ್ಠ ಸಾಧಕ’ ರಾಜ್ಯವಾಗಿ ಹೊರಹೊಮ್ಮಿದೆ
a) 1 ಮಾತ್ರ ಸರಿ
b) 1 ಮಾತ್ರ ಸರಿ
c) 1 ಮತ್ತು 2 ಎರಡೂ ಸರಿ
d) 1 ಮತ್ತು 2 ಎರಡೂ ತಪ್ಪು
2. ಆದಾಯದ ಅಸಮಾನತೆಯ ಉಲ್ಲೇಖದೊಂದಿಗೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ
1 ಗಿನಿ ಕೊಎಫಿಷಿಯೆಂಟ್ ಮೂಲಕ ಆದಾಯದ ಅಸಮಾನತೆಯನ್ನು ಅಳೆಯಲಾಗುತ್ತದೆ
2. ಹೆಚ್ಚಿನ ಮೂಲ ತೆರಿಗೆ(Tax Base) ಮತ್ತು ಕಡಿಮೆ ಆದಾಯದಿಂದ ಹೆಚ್ಚಿನ ಆದಾಯ ತೆರಿಗೆದಾರರಲ್ಲಿನ ಬದಲಾವಣೆಯ ಬ್ರಾಕೆಟ್‌ಗಳು ಆದಾಯದ ಅಸಮಾನತೆಯನ್ನು ಕಡಿಮೆ ಮಾಡುವ ಸೂಚಕವಾಗಿರಬಹುದು
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ
a) 1 ಮಾತ್ರ ಸರಿ
b) 2 ಮಾತ್ರ ಸರಿ
c) 1 ಮತ್ತು 2 ಎರಡೂ ಸರಿ
d) 1 ಮತ್ತು 2 ಎರಡೂ ತಪ್ಪು
3. ಮಾವೋರಿ ಹಾಕಾ ಯಾವ ದೇಶದ ಬುಡಕಟ್ಟು ಜನರ ಸಂಸ್ಕೃತಿಯಾಗಿದೆ?
a) ಆಸ್ಟ್ರೇಲಿಯಾ
b) ನ್ಯೂಜಿಲ್ಯಾಂಡ್
c) ಮಾರಿಷಿಯಸ್
d) ವಿಯೆಟ್ನಾಂ
4. ಭಾರತ ಮತ್ತು ನೇಪಾಳ ದೇಶಗಳ ಬಗ್ಗೆ ಕೆಳಗೆ ನೀಡಿರುವ ಹೇಳಿಕೆಗಳನ್ನು ಗಮನಿಸಿ
1 ಎರಡು ದೇಶಗಳ ನಡುವಿನ ಗಡಿಯನ್ನು ಮ್ಯಾಕ್ ಮೋಹನ್ ರೇಖೆ ಎಂದು ಕರೆಯುತ್ತಾರೆ
2 ಎರಡು ದೇಶಗಳ ಗಡಿಯ ಉದ್ದ 1850 ಕಿ.ಮೀ ಆಗಿದೆ
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ?
a) 1 ಮಾತ್ರ
b) 2 ಮಾತ್ರ
c) 1 ಮತ್ತು 2 ಎರಡೂ
d) 1 ಅಥವಾ 2 ಎರಡೂ ಅಲ್ಲ
5. ಭಾರತದ ಅತಿ ಉದ್ದದ ಸಮುದ್ರ ಸೇತುವೆಯಾದ ಅಟಲ್ ಸೇತು ಅನ್ನು ಎಲ್ಲಿ ಉದ್ಘಾಟಿಸಲಾಯಿತು?
a) ಗೋವಾ
b) ಗುಜರಾತ
c) ಮಹಾರಾಷ್ಟ್ರ
d) ಲಕ್ಷದ್ವೀಪ