Published on: June 20, 2025

SIPRI ವರದಿ 2025

SIPRI ವರದಿ 2025

ಸುದ್ದಿಯಲ್ಲಿ ಏಕಿದೆ?SIPRI ವಾರ್ಷಿಕ ಪುಸ್ತಕ 2025 ಭಾರತವು ಈಗ ಪಾಕಿಸ್ತಾನಕ್ಕಿಂತ ಹೆಚ್ಚು ಪರಮಾಣು ಸಿಡಿತಲೆಗಳನ್ನು ಹೊಂದಿದೆ, ಆದರೆ ಚೀನಾಕ್ಕಿಂತ  ಕಡಿಮೆ ಇವೆ  ಎಂದು ಬಹಿರಂಗಪಡಿಸಿದೆ.

ಮುಖ್ಯಾಂಶಗಳು               

ಸ್ಟಾಕ್‌ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ (SIPRI) ವಾರ್ಷಿಕ ಪುಸ್ತಕ ಜನವರಿ 2025 ರ ಹೊತ್ತಿಗೆ ಜಾಗತಿಕ ಪರಮಾಣು ಶಸ್ತ್ರಾಸ್ತ್ರಗಳ ಕುರಿತು ನವೀಕರಣವನ್ನುಒದಗಿಸಿದೆ.

ನ್ಯೂಕ್ಲಿಯರ್ ಶಸ್ತ್ರಾಸ್ತ್ರಗಳ ಸ್ಥಿತಿ (ಜನವರಿ 2025):

  • ಭಾರತ: 180 ಅಣು ಶಸ್ತ್ರಾಸ್ತ್ರಗಳು
  • ಪಾಕಿಸ್ತಾನ: 170 ಅಣು ಶಸ್ತ್ರಾಸ್ತ್ರಗಳು
  • ಚೀನಾ: 600 ಅಣು ಶಸ್ತ್ರಾಸ್ತ್ರಗಳು (24 ನಿಯೋಜಿತ)

ಭಾರತದ ಅಭಿವೃದ್ಧಿ ಹಾದಿ:

  • 2024ರಲ್ಲಿ ಭಾರತ ತನ್ನ ಶಸ್ತ್ರಾಸ್ತ್ರ ಶಕ್ತಿ ವಿಸ್ತರಿಸಿದೆ ಹಾಗೂ ಹೊಸ ಮಿಸೈಲ್ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಿದೆ.
  • ‘Canisterised’ ಮಿಸೈಲ್‌ಗಳು ಶಾಂತಿಯುತ ಸಮಯದಲ್ಲಿಯೂ ತಯಾರಿ ಸ್ಥಿತಿಯಲ್ಲಿ ಇರಬಹುದು; ಬಹುಶಃ ಒಂದಕ್ಕಿಂತ ಹೆಚ್ಚು ವಾರ್ಹೆಡ್ ಹೊರುವ ಸಾಮರ್ಥ್ಯ ಹೊಂದಿವೆ.
  • ಭಾರತ ಈಗ ಲಾಂಚರ್‌ಗಳಿಗೆ ನೇರವಾಗಿ ವಾರ್ಹೆಡ್‌ಗಳನ್ನು ಜೋಡಿಸುವ (‘mated’) ನಿಲುವಿನತ್ತ ಸಾಗುತ್ತಿದೆ.

ಚೀನಾದ ಮುನ್ನಡೆ:

  • ಭಾರತದಿಗಿಂತ ಮೂರರಷ್ಟು ಹೆಚ್ಚು ಶಸ್ತ್ರಾಸ್ತ್ರಗಳಿದ್ದರೂ ಕೇವಲ 24 ನಿಯೋಜಿತವಾಗಿದೆ.

ಜಾಗತಿಕ ಅಣು ಶಕ್ತಿ

  • ರಷ್ಯಾ: 5,459 ವಾರ್ಹೆಡ್‌ಗಳು
  • ಅಮೆರಿಕ: 5,177 ವಾರ್ಹೆಡ್‌ಗಳು
  • ಎಲ್ಲಾ ಪ್ರಮುಖ ಶಕ್ತಿ ಯುತ ದೇಶಗಳು (ಭಾರತ ಸೇರಿ) ಈಗ ಬಹು ವಾರ್ಹೆಡ್ ಹೊಂದಿರುವ ಮಿಸೈಲ್‌ಗಳು (MIRVs) ಅಭಿವೃದ್ಧಿಪಡಿಸುತ್ತಿವೆ.

ಭಾರತದ ತಂತ್ರಜ್ಞಾನ ಕೇಂದ್ರೀಕರಣ:

  • ಮೂರುಮೂಲ ಶಸ್ತ್ರಾಸ್ತ್ರ ಶಕ್ತಿ (Triad): ವಿಮಾನ, ಭೂಆಧಾರಿತ ಕ್ಷಿಪಣಿಗಳು, ಸಬ್‌ಮೆರಿನ್‌ಗಳು.

ಆಯುಧ ಆಮದು:

2020–24ರಲ್ಲಿ ಭಾರತ ವಿಶ್ವದ ಶ್ರೇಷ್ಠ ಆಯುಧ ಆಮದುದಾರರಲ್ಲಿ ಒಂದಾಗಿದ್ದು, ಪಾಕಿಸ್ತಾನ ಸಹ ಟಾಪ್ 5ರಲ್ಲಿ ಸೇರಿದೆ.

SIPRI ಬಗ್ಗೆ

  • SIPRI ಸಂಘರ್ಷ, ಶಸ್ತ್ರಾಸ್ತ್ರಗಳು, ಶಸ್ತ್ರಾಸ್ತ್ರ ನಿಯಂತ್ರಣ ಮತ್ತು ನಿಶ್ಯಸ್ತ್ರೀಕರಣದ ಕುರಿತು ಸಂಶೋಧನೆಗೆ ಮೀಸಲಾಗಿರುವ ಸ್ವತಂತ್ರ ಅಂತರರಾಷ್ಟ್ರೀಯ ಸಂಸ್ಥೆಯಾಗಿದೆ.
  • ಇದು ಸ್ಟಾಕ್‌ಹೋಮ್‌ನಲ್ಲಿದೆ.
  • ಇದನ್ನು 1966 ರಲ್ಲಿ ಸ್ಥಾಪಿಸಲಾಯಿತು,
  • SIPRI ಮುಕ್ತ ಮೂಲಗಳ ಆಧಾರದ ಮೇಲೆ ಡೇಟಾ, ವಿಶ್ಲೇಷಣೆ ಮತ್ತು ಶಿಫಾರಸುಗಳನ್ನು ನೀತಿ ನಿರೂಪಕರು, ಸಂಶೋಧಕರು, ಮಾಧ್ಯಮ ಮತ್ತು ಆಸಕ್ತ ಸಾರ್ವಜನಿಕರಿಗೆ ಒದಗಿಸುತ್ತದೆ.
  • ಹಣಕಾಸು: ಇದನ್ನು ಸ್ವೀಡಿಷ್ ಸಂಸತ್ತಿನ ನಿರ್ಧಾರದ ಆಧಾರದ ಮೇಲೆ ಸ್ಥಾಪಿಸಲಾಯಿತು ಮತ್ತು ಸ್ವೀಡಿಷ್ ಸರ್ಕಾರದಿಂದ ವಾರ್ಷಿಕ ಅನುದಾನದ ರೂಪದಲ್ಲಿ ಅದರ ನಿಧಿಯ ಗಣನೀಯ ಭಾಗವನ್ನು ಪಡೆಯುತ್ತದೆ.
  • ಸಂಸ್ಥೆಯು ತನ್ನ ಸಂಶೋಧನೆಯನ್ನು ಕೈಗೊಳ್ಳಲು ಇತರ ಸಂಸ್ಥೆಗಳಿಂದ ಆರ್ಥಿಕ ಸಹಾಯವನ್ನು ಸಹ ಪಡೆಯುತ್ತದೆ.