Published on: September 11, 2025

ಮರುಸಿಂಚನ ಯೋಜನೆ: ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾಗಿ 27 ಜಿಲ್ಲೆಗಳಿಗೆ ವಿಸ್ತರಣೆ

ಮರುಸಿಂಚನ ಯೋಜನೆ: ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾಗಿ 27 ಜಿಲ್ಲೆಗಳಿಗೆ ವಿಸ್ತರಣೆ

ಸುದ್ದಿ – ಕರ್ನಾಟಕ ರಾಜ್ಯದಲ್ಲಿ ಕಲಿಕೆಯಲ್ಲಿ ಹಿಂದುಳಿದಿರುವ 6ರಿಂದ 10ನೇ ತರಗತಿಯ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ಸುಧಾರಿಸುವ ಮಹತ್ವದ ಉದ್ದೇಶದೊಂದಿಗೆ ‘ಮರುಸಿಂಚನ ಯೋಜನೆ’ಯನ್ನು ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ರಾಜ್ಯದ 27 ಶೈಕ್ಷಣಿಕ ಜಿಲ್ಲೆಗಳಿಗೆ ವಿಸ್ತರಿಸಲಾಗುತ್ತಿದೆ. ಈ ಯೋಜನೆಯು ಸುಮಾರು 18 ಲಕ್ಷ ಮಕ್ಕಳಿಗೆ ಪ್ರಯೋಜನ ನೀಡುವ ಸಾಧ್ಯತೆಯಿದ್ದು, ಶಾಲಾ ಅವಧಿಯಲ್ಲೇ ಪರಿಹಾರ ಬೋಧನೆ ಮೂಲಕ ಮಕ್ಕಳ ಕಲಿಕಾ ಅಂತರವನ್ನು ನಿವಾರಿಸಲು ಕೇಂದ್ರೀಕರಿಸುತ್ತದೆ.

ಪ್ರಮುಖ ಪರೀಕ್ಷಾ ಅಂಶಗಳು:

  • ಯೋಜನೆಯ ಹೆಸರು: ಮರುಸಿಂಚನ ಯೋಜನೆ
  • ಗುರಿ: ಕಲಿಕೆಯಲ್ಲಿ ಹಿಂದುಳಿದಿರುವ 6ರಿಂದ 10ನೇ ತರಗತಿಯ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಕಲಿಕಾ ಮಟ್ಟ ಸುಧಾರಣೆ.
  • ವಿಸ್ತರಣೆ: 2025-26ನೇ ಶೈಕ್ಷಣಿಕ ಸಾಲಿನಿಂದ ರಾಜ್ಯದ 27 ಶೈಕ್ಷಣಿಕ ಜಿಲ್ಲೆಗಳಿಗೆ ವಿಸ್ತರಣೆ.
  • ಅಂದಾಜು ಫಲಾನುಭವಿಗಳು: ಸುಮಾರು 18 ಲಕ್ಷ ಮಕ್ಕಳು.
  • ಬೋಧನಾ ವಿಧಾನ: ಶಾಲಾ ಅವಧಿಯಲ್ಲೇ ಪರಿಹಾರ ಬೋಧನೆ.
  • ಶಿಕ್ಷಕರಿಗೆ ತರಬೇತಿ: ಯೋಜನೆಯ ಅನುಷ್ಠಾನಕ್ಕಾಗಿ ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲಾಗುತ್ತದೆ.
  • ಅಧ್ಯಯನ ಸಾಮಗ್ರಿಗಳು: ವಿದ್ಯಾರ್ಥಿಗಳಿಗೆ ಅಭ್ಯಾಸ ಪುಸ್ತಕಗಳು (80ರಿಂದ 100 ಪುಟಗಳು), ಶಿಕ್ಷಕರಿಗೆ ಮಾಡ್ಯೂಲ್‌ಗಳ ಕೈಪಿಡಿ ನೀಡಲಾಗುತ್ತದೆ.
  • ವಿಷಯಗಳು: ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಕನ್ನಡ ಮತ್ತು ಇಂಗ್ಲಿಷ್.
  • ಅಭ್ಯಾಸ ಪುಸ್ತಕ ಸಿದ್ಧತೆ: ರಾಜ್ಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯ (DSERT) ಇದನ್ನು ಸಿದ್ಧಪಡಿಸುತ್ತದೆ.
  • ಸಹಯೋಗಿ ಸಂಸ್ಥೆಗಳು: ಪೀಪಲ್ ಫಾರ್ ಆಕ್ಷನ್ ಸಂಸ್ಥೆ ಮತ್ತು ಜೆ-ಪಾಲ್ (J-PAL) ಯೋಜನೆಯ ಅನುಷ್ಠಾನದಲ್ಲಿ ಭಾಗಿಯಾಗಿವೆ.
  • ಪ್ರಾಯೋಗಿಕ ಜಾರಿ: 2023-24ರಲ್ಲಿ 17 ಜಿಲ್ಲೆಗಳ 93 ತಾಲ್ಲೂಕುಗಳಲ್ಲಿ 9ನೇ ತರಗತಿ ಮಕ್ಕಳಿಗೆ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿತ್ತು. ನಂತರ ಕಳೆದ ವರ್ಷ 6ರಿಂದ 10ನೇ ತರಗತಿವರೆಗೆ ವಿಸ್ತರಿಸಲಾಗಿತ್ತು.