Published on: October 25, 2025
ಬ್ಲಾಕ್ಚೈನ್ ತಂತ್ರಜ್ಞಾನದ ಮೂಲಕ ಆಡಳಿತವನ್ನು ಬಲಪಡಿಸುವುದು
ಬ್ಲಾಕ್ಚೈನ್ ತಂತ್ರಜ್ಞಾನದ ಮೂಲಕ ಆಡಳಿತವನ್ನು ಬಲಪಡಿಸುವುದು
ಸುದ್ದಿ – ಇತ್ತೀಚಿನ ದಿನಗಳಲ್ಲಿ, ಭಾರತದಲ್ಲಿ ಆಡಳಿತವನ್ನು ಪರಿವರ್ತಿಸುವುದರಲ್ಲಿ ಬ್ಲಾಕ್ಚೈನ್ ತಂತ್ರಜ್ಞಾನವು ಪ್ರಮುಖ ಚಾಲಕಶಕ್ತಿಯಾಗಿ ಹೊರಹೊಮ್ಮಿದೆ.
ಬ್ಲಾಕ್ಚೈನ್ ಎಂದರೆ ಏನು?
ಬ್ಲಾಕ್ಚೈನ್ ಎನ್ನುವುದು ವಿತರಿತ, ಪಾರದರ್ಶಕ, ಸುರಕ್ಷಿತ ಮತ್ತು ಅಪರಿವರ್ತನೀಯ (immutable) ಡೇಟಾಬೇಸ್ ಆಗಿದೆ. ಇದು ದಾಖಲೆಗಳು ಅಥವಾ ವಹಿವಾಟುಗಳ ಲೆಡ್ಜರ್ನಂತೆ ಕಾರ್ಯನಿರ್ವಹಿಸುತ್ತದೆ, ತಿರುಚುವಿಕೆಗೆ / ಟ್ಯಾಂಪರಿಂಗ್ಗೆ ಪ್ರತಿರೋಧಕವಾಗಿದ್ದು ಕಂಪ್ಯೂಟರ್ಗಳ ಜಾಲದಲ್ಲಿ (ನೆಟ್ವರ್ಕ್ನಲ್ಲಿ) ಎಲ್ಲರಿಗೂ ಪ್ರವೇಶಯೋಗ್ಯ ಆಗಿರುತ್ತದೆ.
ಆಡಳಿತದಲ್ಲಿ ಬ್ಲಾಕ್ಚೈನ್ ತಂತ್ರಜ್ಞಾನದ ಪ್ರಮುಖ ಪಾತ್ರ:
- ಸ್ವತ್ತು ಸರಪಳಿ (Property Chain): ಬ್ಲಾಕ್ಚೈನ್-ಚಾಲಿತ ‘ಆಸ್ತಿ ನಿರ್ವಹಣಾ ವ್ಯವಸ್ಥೆ’ಯು ಪ್ರತಿಯೊಂದು ಆಸ್ತಿ ವಹಿವಾಟು ಬ್ಲಾಕ್ಚೈನ್ನಲ್ಲಿ ಸುರಕ್ಷಿತವಾಗಿ ದಾಖಲಾಗುವುದನ್ನು ಖಚಿತಪಡಿಸುತ್ತದೆ. ಈ ಪಾರದರ್ಶಕತೆಯು ಭಾವಿ ಖರೀದಿದಾರರಿಗೆ ಮಾಲೀಕತ್ವ, ಹಕ್ಕುಗಳು ಮತ್ತು ಹೊಣೆಗಾರಿಕೆಗಳನ್ನು ಪರಿಶೀಲಿಸಲು ಸಹಾಯ ಮಾಡುತ್ತದೆ, ಇದರಿಂದ ವ್ಯಾಜ್ಯಗಳನ್ನು (litigation) ಗಣನೀಯವಾಗಿ ಕಡಿಮೆಯಾಗಿ, ವಿವಾದ ಪರಿಹಾರವನ್ನು ತ್ವರಿತಗೊಳಿಸುತ್ತದೆ.
- ಪ್ರಮಾಣಪತ್ರಗಳು ಮತ್ತು ದಾಖಲೆಗಳ ಸರಣಿ: ಉದಾಹರಣೆಗೆ, ರಾಷ್ಟ್ರೀಯ ಮಾಹಿತಿ ಕೇಂದ್ರ (NIC) ದಾಖಲೆಗಳ ಸುರಕ್ಷಿತ ಸಂಗ್ರಹಣೆ ಮತ್ತು ಮರುಪಡೆಯುವಿಕೆಗಾಗಿ ‘ಪ್ರಮಾಣಪತ್ರ ಸರಣಿ’ (Certificate Chain) ಯನ್ನು ನಿರ್ಮಿಸಿದೆ.
- ಲಾಜಿಸ್ಟಿಕ್ಸ್ ಸರಣಿ: ಪೂರೈಕೆ ಸರಣಿಯಲ್ಲಿನ ಎಲ್ಲಾ ವಹಿವಾಟುಗಳನ್ನು ತಿರುಚಲು ಅಸಾಧ್ಯವಾದ ಲೆಡ್ಜರ್ನಲ್ಲಿ ದಾಖಲಿಸಲಾಗುತ್ತದೆ, ಇದು ಪ್ರತಿ ಹಂತದಲ್ಲೂ ಪತ್ತೆಹಚ್ಚುವಿಕೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸುತ್ತದೆ. ಉದಾಹರಣೆಗೆ, ಕರ್ನಾಟಕದ ಔಷಧಿಗಳಿಗಾಗಿ ಆನ್ಲೈನ್ ಪೂರೈಕೆ ಸರಣಿ ನಿರ್ವಹಣಾ ವ್ಯವಸ್ಥೆ (ಔಷಧ).
- ನ್ಯಾಯಾಂಗ ಸರಣಿ: ಬ್ಲಾಕ್ಚೈನ್ ನೋಟೀಸ್ಗಳು, ಸಮನ್ಸ್ಗಳು ಮತ್ತು ಜಾಮೀನು ಆದೇಶಗಳ ಎಲೆಕ್ಟ್ರಾನಿಕ್ ವಿತರಣೆಯನ್ನು ಸುಗಮಗೊಳಿಸುತ್ತದೆ, ವಿಳಂಬವನ್ನು ಕಡಿಮೆ ಮಾಡುತ್ತದೆ ಮತ್ತು ಹಸ್ತಚಾಲಿತ ಅವಲಂಬನೆಗಳನ್ನು ನಿವಾರಿಸುತ್ತದೆ.
- ಅಂತರ್-ಕಾರ್ಯಾಚರಣೆಯ ಕ್ರಿಮಿನಲ್ ನ್ಯಾಯ ವ್ಯವಸ್ಥೆ (ICJS): ಅಕ್ಟೋಬರ್ 2025 ರಂತೆ, 39,000 ಕ್ಕೂ ಹೆಚ್ಚು ICJS ದಾಖಲೆಗಳನ್ನು ಬ್ಲಾಕ್ಚೈನ್ ವೇದಿಕೆಯಲ್ಲಿ ಪರಿಶೀಲಿಸಲಾಗಿದೆ.
ಬ್ಲಾಕ್ಚೈನ್ ತಂತ್ರಜ್ಞಾನವನ್ನು ಉತ್ತೇಜಿಸಲು ತೆಗೆದುಕೊಳ್ಳಲಾದ ಪ್ರಮುಖ ಉಪಕ್ರಮಗಳು:
- ರಾಷ್ಟ್ರೀಯ ಬ್ಲಾಕ್ಚೈನ್ ಫ್ರೇಮ್ವರ್ಕ್ (NBF), 2024: ಇದರ ಪ್ರಮುಖ ಘಟಕಗಳು ವಿಶ್ವಾಸ್ಯ ಬ್ಲಾಕ್ಚೈನ್ ಸ್ಟಾಕ್, ಎನ್ಬಿಎಫ್ಲೈಟ್, ಪ್ರಾಮಾಣಿಕ್ (ಆಪ್ ಪರಿಶೀಲನೆಗಾಗಿ ನವೀನ ಬ್ಲಾಕ್ಚೈನ್ ಪರಿಹಾರ), ಮತ್ತು ರಾಷ್ಟ್ರೀಯ ಬ್ಲಾಕ್ಚೈನ್ ಪೋರ್ಟಲ್ ಅನ್ನು ಒಳಗಗೊಂಡಿವೆ.
- MeitY (ಮೇಟಿ) ನಿಂದ ಅಭಿವೃದ್ಧಿಪಡಿಸಲಾದ ಬ್ಲಾಕ್ಚೈನ್ ಕುರಿತ ರಾಷ್ಟ್ರೀಯ ಕಾರ್ಯತಂತ್ರ.
- NIC ಯಿಂದ ಬ್ಲಾಕ್ಚೈನ್ ತಂತ್ರಜ್ಞಾನದಲ್ಲಿ ಶ್ರೇಷ್ಠತಾ ಕೇಂದ್ರ (CoE).
