Published on: November 28, 2025

ಭಾರತ–ಆಸ್ಟ್ರೇಲಿಯಾ ದ್ವಿಪಕ್ಷೀಯ ನೌಕಾಪಡೆ ಸಮರಾಭ್ಯಾಸ : AUSINDEX 2025

ಭಾರತ–ಆಸ್ಟ್ರೇಲಿಯಾ ದ್ವಿಪಕ್ಷೀಯ ನೌಕಾಪಡೆ ಸಮರಾಭ್ಯಾಸ : AUSINDEX 2025

ಸುದ್ದಿ – ಭಾರತೀಯ ನೌಕಾಪಡೆ ಮತ್ತು ರಾಯಲ್ ಆಸ್ಟ್ರೇಲಿಯನ್ ನೌಕಾಪಡೆಗಳ ನಡುವಿನ ದ್ವಿಪಕ್ಷೀಯ (bilateral), ದ್ವೈವಾರ್ಷಿಕ (biennial) ಕಡಲ ಸಮರಾಭ್ಯಾಸವಾದ ‘AUSINDEX 2025’, ಉತ್ತರ ಪೆಸಿಫಿಕ್ ಸಾಗರದಲ್ಲಿ ನಡೆಯಿತು.

ಉದ್ದೇಶ: ನೌಕಾಪಡೆಗಳ ಪರಸ್ಪರ ಕಾರ್ಯಚರಣಾ ಸಾಮರ್ಥ್ಯವನ್ನು (interoperability) ಸುಧಾರಿಸುವುದು ಮತ್ತು ಭಾರತ-ಆಸ್ಟ್ರೇಲಿಯಾ ನಡುವಿನ ತಂತ್ರಾತ್ಮಕ ಕಡಲ ಸಮನ್ವಯವನ್ನು ಬಲಪಡಿಸುವುದು.

ಭಾಗವಹಿಸಿದವರು:

  • ಭಾರತೀಯ ನೌಕಾಪಡೆಯನ್ನು ಸ್ವದೇಶಿ ನಿರ್ಮಿತ ಸ್ಟೆಲ್ತ್ ಫ್ರಿಗೇಟ್ (ರಾಡಾರ್‌ಗೆ ಸುಲಭವಾಗಿ ಸಿಗದ ಯುದ್ಧನೌಕೆ) ಆದ ‘INS ಸಹ್ಯಾದ್ರಿ’ ಪ್ರತಿನಿಧಿಸಿತು.
  • ರಾಯಲ್ ಆಸ್ಟ್ರೇಲಿಯನ್ ನೌಕಾಪಡೆಯನ್ನು ಫ್ರಿಗೇಟ್ ‘HMAS ಬಲ್ಲಾರತ್’ ಪ್ರತಿನಿಧಿಸಿತು.

ಗಮನಹರಿಸಿದ ಕ್ಷೇತ್ರಗಳು:

  • ಇದು ಜಲಾಂತರ್ಗಾಮಿ ವಿರೋಧಿ ಕದನ (anti-submarine warfare), ಫಿರಂಗಿ ತಾಲೀಮುಗಳು (gunnery drills) ಮತ್ತು ಸುಧಾರಿತ ವೈಮಾನಿಕ ಕಾರ್ಯಾಚರಣೆಗಳನ್ನು ಒಳಗೊಂಡಿತ್ತು.

ಮಹತ್ವ:

  • ಈ ಸಮರಾಭ್ಯಾಸವು ಇಂಡೋ-ಪೆಸಿಫಿಕ್ ವಲಯದಲ್ಲಿ ಮುಕ್ತ, ತೆರೆದ ಮತ್ತು ಎಲ್ಲರನ್ನೂ ಒಳಗೊಂಡ ಕಡಲ ಸುವ್ಯವಸ್ಥೆಗೆ ಇರುವ ಹಂಚಿಕೊಂಡ ಬದ್ಧತೆಯನ್ನು ಪುನರುಚ್ಚರಿಸುತ್ತದೆ.

AUSTRAHIND 2025:

  • ಭಾರತೀಯ ಸೇನೆ ಮತ್ತು ಆಸ್ಟ್ರೇಲಿಯನ್ ಸೇನೆಯ ನಡುವಿನ ವಾರ್ಷಿಕ ಜಂಟಿ ಸೇನಾ ಸಮರಾಭ್ಯಾಸದ ನಾಲ್ಕನೇ ಆವೃತ್ತಿಯಾದ ‘AUSTRAHIND 2025’ ಕೂಡ ಇತ್ತೀಚೆಗೆ ಆಸ್ಟ್ರೇಲಿಯಾದ ಪರ್ತ್‌ (Perth) ನಲ್ಲಿ ನಡೆಯಿತು.