1. ನಾಸಾದ ESCAPADE ಮಿಷನ್ ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ESCAPADE ಮಿಷನ್ ಮಂಗಳನ ಹೈಬ್ರಿಡ್ ಮ್ಯಾಗ್ನೆಟೋಸ್ಪಿಯರ್ ಮತ್ತು ಸೌರ ಮಾರುತ–ವಾತಾವರಣ ಪರಸ್ಪರ ಕ್ರಿಯೆಯನ್ನು ಅಧ್ಯಯನ ಮಾಡಲು ವಿನ್ಯಾಸಗೊಳಿಸಲಾಗಿದೆ.
2. ಈ ಮಿಷನ್ SIMPLEx ಕಾರ್ಯಕ್ರಮದ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ‘ಬ್ಲೂ’ ಮತ್ತು ‘ಗೋಲ್ಡ್’ ಎಂಬ ಎರಡು ಸಮಾನ ಉಪಗ್ರಹಗಳನ್ನು ಒಳಗೊಂಡಿದೆ.
3. ESCAPADE ಮಿಷನ್‌ನ್ನು ನಾಸಾದ ಫಾಲ್ಕನ್-9 ರಾಕೆಟ್ ಮೂಲಕ ಮಂಗಳನತ್ತ ನೇರವಾಗಿ ಉಡಾವಣೆ ಮಾಡಲಾಗಿದೆ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 2 ಮತ್ತು 3 ಮಾತ್ರ
C. 1 ಮತ್ತು 3 ಮಾತ್ರ
D. 1, 2 ಮತ್ತು 3
2. ಟೈಫಾಯ್ಡ್ ಕಾಂಜುಗೇಟ್ ಲಸಿಕೆ (TCV) ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. TCV ಏಕ-ಡೋಸ್ ಲಸಿಕೆಯಾಗಿದ್ದು, WHO ಅನುಸಾರ ಆರು ತಿಂಗಳು ಮತ್ತು ಅದಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ನೀಡಲು ಅನುಮೋದಿಸಲಾಗಿದೆ.
2. ಭಾರತದಲ್ಲಿ NTAGI 2022 ರಲ್ಲೇ UIP ಅಡಿಯಲ್ಲಿ TCV ಸೇರಿಕೆಗೆ ಶಿಫಾರಸು ಮಾಡಿದೆ.
3. TCV ಲಸಿಕೆ ಈಗಾಗಲೇ ಭಾರತದ सार्वತ್ರಿಕ ಲಸಿಕಾ ಕಾರ್ಯಕ್ರಮ (UIP) ನಲ್ಲಿ ಅಳವಡಿಸಲಾಗಿದೆ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 2 ಮತ್ತು 3 ಮಾತ್ರ
C. 1 ಮತ್ತು 3 ಮಾತ್ರ
D. 1, 2 ಮತ್ತು 3
3. ಪ್ರಾದೇಶಿಕ ಸೇನೆ (Territorial Army – TA) ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. TA “ನಾಗರಿಕ ಸೈನಿಕ” ತತ್ವದ ಮೇಲೆ ಕಾರ್ಯನಿರ್ವಹಿಸುವ ಅರೆಕಾಲಿಕ ಸ್ವಯಂಸೇವಕ ಪಡೆ.
2. TA 1948 ರ ಟೆರಿಟೋರಿಯಲ್ ಆರ್ಮಿ ಕಾಯಿದೆಯಡಿ ರಚಿಸಲ್ಪಟ್ಟಿದ್ದು, 1949 ರಲ್ಲಿ ಅಧಿಕೃತವಾಗಿ ಉದ್ಘಾಟಿಸಲಾಯಿತು.
3. TA ಗೆ ಸೇರ್ಪಡೆಯಾಗಲು ಕನಿಷ್ಠ ವಯಸ್ಸು 21 ವರ್ಷವಾಗಿರಬೇಕು.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 2 ಮತ್ತು 3 ಮಾತ್ರ
C. 1 ಮತ್ತು 3 ಮಾತ್ರ
D. 1, 2 ಮತ್ತು 3
4. ‘ಗರುಡ 25’ ಅಭ್ಯಾಸ ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ‘ಗರುಡ 25’ ಭಾರತ–ಫ್ರಾನ್ಸ್ ದ್ವಿಪಕ್ಷೀಯ ವಾಯು ಸಮರಾಭ್ಯಾಸದ ಎಂಟನೇ ಆವೃತ್ತಿಯಾಗಿದೆ.
2. ಈ ಅಭ್ಯಾಸದಲ್ಲಿ ಭಾರತವು ಕೇವಲ ಸಾರಿಗೆ ವಿಮಾನಗಳನ್ನು ಮಾತ್ರ ನಿಯೋಜಿಸಿದೆ.
3. ಅಭ್ಯಾಸದ ಪ್ರಮುಖ ಉದ್ದೇಶವು ಎರಡು ವಾಯುಪಡೆಗಳ ಪರಸ್ಪರ ಕಾರ್ಯಾಚರಣಾ ಸಾಮರ್ಥ್ಯವನ್ನು ಹೆಚ್ಚಿಸುವುದಾಗಿದೆ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 2 ಮತ್ತು 3 ಮಾತ್ರ
C. 1 ಮತ್ತು 3 ಮಾತ್ರ
D. 1, 2 ಮತ್ತು 3
5. SC ಮೀಸಲಾತಿಯಲ್ಲಿ ‘ಕೆನೆಪದರ’ ತತ್ವದ ಕುರಿತಾಗಿ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಜರ್ನೈಲ್ ಸಿಂಗ್ (2018) ತೀರ್ಪು SC/ST ಮುಂಬಡ್ತಿಗಳಲ್ಲಿ ‘ಕೆನೆಪದರ’ ಹೊರಗಿಡುವಿಕೆಯನ್ನು ಅನುಮತಿಸಿದೆ.
2. ಇ.ವಿ. ಚಿನ್ನಯ್ಯ (2004) ತೀರ್ಪು SCಗಳಿಗೆ ಉಪ-ವರ್ಗೀಕರಣ ಮಾಡಲು ರಾಜ್ಯಗಳಿಗೆ ಅನುಮತಿ ನೀಡಿತು.
3. ವಿಧಿ 46 SC/ST ಗಳ ಶೈಕ್ಷಣಿಕ ಮತ್ತು ಆರ್ಥಿಕ ಹಿತಾಸ್ತಿಯನ್ನು ಉತ್ತೇಜಿಸಲು ರಾಜ್ಯಕ್ಕೆ ನಿರ್ದೇಶಿಸುತ್ತದೆ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 3 ಮಾತ್ರ
B. 1 ಮತ್ತು 2 ಮಾತ್ರ
C. 2 ಮತ್ತು 3 ಮಾತ್ರ
D. 1, 2 ಮತ್ತು 3
6. ಭಾರತದಲ್ಲಿನ ‘ಸುಪ್ತ ಹಸಿವು’ ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. NFHS-5 ಪ್ರಕಾರ, ಭಾರತದಲ್ಲಿ 6–59 ತಿಂಗಳ ಮಕ್ಕಳು ಸುಮಾರು 67% ರಷ್ಟು ರಕ್ತಹೀನತೆಯಿಂದ ಬಳಲುತ್ತಾರೆ.
2. ‘ಸುಪ್ತ ಹಸಿವು’ ಎಂದರೆ ಕ್ಯಾಲೋರಿಗಳ ಕೊರತೆಯಿಂದ ಉಂಟಾಗುವ ಅಪೌಷ್ಟಿಕತೆ.
3. POSHAN 2.0 ಮತ್ತು AMB ಯೋಜನೆಗಳು ಸೂಕ್ಷ್ಮ ಪೋಷಕಾಂಶ ಕೊರತೆಯನ್ನು ತಗ್ಗಿಸಲು ಸರ್ಕಾರದ ಪ್ರಮುಖ ಕಾರ್ಯಕ್ರಮಗಳಾಗಿವೆ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 2 ಮತ್ತು 3 ಮಾತ್ರ
C. 1 ಮತ್ತು 3 ಮಾತ್ರ
D. 1, 2 ಮತ್ತು 3
7. ಭಾರತದಲ್ಲಿನ ವಿಚಾರಣಾಧೀನ ಕೈದಿಗಳ ಸ್ಥಿತಿ ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. NCRB (2023) ಪ್ರಕಾರ, ಭಾರತದ ಕೈದಿಗಳಲ್ಲಿ ಸುಮಾರು 70% ಮಂದಿ ವಿಚಾರಣಾಧೀನ ಕೈದಿಗಳಾಗಿದ್ದಾರೆ.
2. NALSA–UNDP (2023) ಪ್ರಕಾರ, ವಿಚಾರಣಾಧೀನ ಕೈದಿಗಳಲ್ಲಿ 60% ಕ್ಕಿಂತ ಹೆಚ್ಚು ಮಂದಿ ಉಚಿತ ಕಾನೂನು ನೆರವಿನ ಹಕ್ಕಿನ ಬಗ್ಗೆ ತಿಳಿದಿಲ್ಲ.
3. India Justice Report (2022) ಪ್ರಕಾರ, ಸುಮಾರು 25% ವಿಚಾರಣಾಧೀನ ಕೈದಿಗಳು ಜಾಮೀನು ಬಾಂಡ್‌ಗಳ ವೆಚ್ಚವನ್ನು ಭರಿಸಲಾಗದೆ ಜೈಲಿನಲ್ಲೇ ಉಳಿದಿದ್ದಾರೆ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 2 ಮತ್ತು 3 ಮಾತ್ರ
C. 1 ಮತ್ತು 3 ಮಾತ್ರ
D. 1, 2 ಮತ್ತು 3
8. ವಶಪಡಿಸಿಕೊಂಡ ಸ್ಫೋಟಕಗಳ ನಿರ್ವಹಣೆ ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ವಶಪಡಿಸಿಕೊಂಡ ಸ್ಫೋಟಕಗಳನ್ನು ನಿರ್ವಹಿಸಲು ಮಾತ್ರ ಅಧಿಕೃತ EOD ತಜ್ಞರಿಗೆ ಅನುಮತಿಯಿದೆ.
2. ವಶಪಡಿಸಿಕೊಂಡ ಸ್ಫೋಟಕಗಳ ವಿಧಿವಿಜ್ಞಾನ ವಿಶ್ಲೇಷಣೆಯನ್ನು 48 ಗಂಟೆಗಳೊಳಗೆ ಕಳುಹಿಸುವುದು ಕಡ್ಡಾಯವಾಗಿದೆ.
3. ಸ್ಫೋಟಕಗಳನ್ನು ನಾಶಪಡಿಸಲು ನ್ಯಾಯಾಲಯದ ಅನುಮೋದನೆ ಅಗತ್ಯ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 1 ಮತ್ತು 3 ಮಾತ್ರ
C. 2 ಮತ್ತು 3 ಮಾತ್ರ
D. 1, 2 ಮತ್ತು 3
9. ರಾಷ್ಟ್ರೀಯ ಏಕ ಆರೋಗ್ಯ ಮಿಷನ್ ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಈ ಮಿಷನ್‌ನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು (MoHFW) ನೇತೃತ್ವವಹಿಸುತ್ತದೆ.
2. ICMR ಮಿಷನ್‌ನ ಪ್ರಮುಖ ಅನುಷ್ಠಾನ ಸಂಸ್ಥೆಯಾಗಿದೆ.
3. ಏಕ ಆರೋಗ್ಯ ವಿಧಾನವು ಮಾನವ, ಪ್ರಾಣಿ ಮತ್ತು ಪರಿಸರ ಆರೋಗ್ಯವನ್ನು ಸಮಗ್ರವಾಗಿ ಒಗ್ಗೂಡಿಸುವ ಬಹು-ವಲಯ ತಂತ್ರವಾಗಿದೆ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 2 ಮತ್ತು 3 ಮಾತ್ರ
C. 1 ಮತ್ತು 3 ಮಾತ್ರ
D. 1, 2 ಮತ್ತು 3
10. CBSEಯ AI–CT ಕರಡು ಪಠ್ಯಕ್ರಮ ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. AI ಮತ್ತು ಗಣಕೀಕೃತ ಚಿಂತನೆ (CT) ಪಠ್ಯಕ್ರಮವನ್ನು 2026–27 ರಲ್ಲಿ 3–6 ನೇ ತರಗತಿಗಳಿಗೆ ಪ್ರಾರಂಭಿಸಲಾಗುತ್ತದೆ.
2. ಈ ಪಠ್ಯಕ್ರಮಕ್ಕೆ ಸಂಬಂಧಿಸಿದ ಶಿಕ್ಷಕರ ತರಬೇತಿಯನ್ನು NISHTHA ಅಡಿಯಲ್ಲಿ ನೀಡಲಾಗುತ್ತದೆ.
3. 11–12 ನೇ ತರಗತಿಗಳಲ್ಲಿ AI ಮತ್ತು ಯಂತ್ರ ಕಲಿಕೆ ಮಾಡ್ಯೂಲ್‌ಗಳನ್ನು ಕಡ್ಡಾಯ ವಿಷಯಗಳಾಗಿ ನೀಡಲಾಗುತ್ತದೆ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 2 ಮತ್ತು 3 ಮಾತ್ರ
C. 1 ಮತ್ತು 3 ಮಾತ್ರ
D. 1, 2 ಮತ್ತು 3
11. ಭಾರತ–ಕ್ಯೂಬಾ ಸಹಕಾರ ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಭಾರತ ಮತ್ತು ಕ್ಯೂಬಾ ಪರಸ್ಪರ ಕಾನೂನು ನೆರವಿನ ಒಪ್ಪಂದಕ್ಕೆ ಸಹಿ ಹಾಕಿವೆ.
2. ಭಾರತ–ಕ್ಯೂಬಾ ಸಂಭಂದಗಳು 1991 ರ ನಂತರ ಮಾತ್ರ ಅಧಿಕೃತವಾಗಿ ಆರಂಭವಾಗಿವೆ.
3. ಕ್ಯೂಬಾ ಅಂತರಾಷ್ಟ್ರೀಯ ಸೌರ ಒಕ್ಕೂಟ (ISA) ಯ ಸದಸ್ಯ ದೇಶವಾಗಿದೆ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 2 ಮತ್ತು 3 ಮಾತ್ರ
C. 1 ಮತ್ತು 3 ಮಾತ್ರ
D. 1, 2 ಮತ್ತು 3
12. ವೆನೇಡಿಯಂ ರೆಡಾಕ್ಸ್ ಫ್ಲೋ ಬ್ಯಾಟರಿ (VRFB) ಬಗ್ಗೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. VRFB ಯಲ್ಲಿ ಶಕ್ತಿ ಸಂಗ್ರಹಣೆ ವೆನೇಡಿಯಂ ಅಯಾನಗಳ ವಿವಿಧ ಆಕ್ಸಿಡೀಕರಣ ಸ್ಥಿತಿಗಳ ಆಧಾರದಲ್ಲಿದೆ.
2. VRFB ಗಳು ಸ್ಥಾಯಿ ಗ್ರಿಡ್ ಸಂಗ್ರಹಣೆಗೆ Li-ion ಬ್ಯಾಟರಿಗಳಿಗಿಂತ ಕಡಿಮೆ ಸುರಕ್ಷಿತವಾಗಿವೆ.
3. NTPC ನ NETRA ಕೇಂದ್ರದಲ್ಲಿ ಸ್ಥಾಪಿಸಲಾದ VRFB ವ್ಯವಸ್ಥೆಯ ಸಾಮರ್ಥ್ಯ 3 MWh.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 1 ಮತ್ತು 3 ಮಾತ್ರ
C. 2 ಮತ್ತು 3 ಮಾತ್ರ
D. 1, 2 ಮತ್ತು 3
13. ಹವಾಮಾನ ಅಪಾಯ ಸೂಚ್ಯಂಕ (CRI) 2025 ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. CRI 2025 ಪ್ರಕಾರ, 1995–2024 ರಲ್ಲಿ ಭಾರತವು ಹವಾಮಾನ ವಿಪತ್ತುಗಳಿಂದ ಅತಿ ಹೆಚ್ಚು ಸಂತ್ರಸ್ತ ರಾಷ್ಟ್ರಗಳಲ್ಲಿ 9ನೇ ಸ್ಥಾನದಲ್ಲಿದೆ.
2. 30 ವರ್ಷಗಳಲ್ಲಿ ಭಾರತದಲ್ಲಿ ತೀವ್ರ ಹವಾಮಾನ ಘಟನಗಳಿಂದ USD 170 ಬಿಲಿಯನ್ ನಷ್ಟ ಸಂಭವಿಸಿದೆ.
3. Germanwatch ಯನ್ನು 2005ರಲ್ಲಿ ನವದೆಹಲಿಯಲ್ಲಿ ಸ್ಥಾಪಿಸಲಾಗಿದೆ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 1 ಮತ್ತು 3 ಮಾತ್ರ
C. 2 ಮತ್ತು 3 ಮಾತ್ರ
D. 1, 2 ಮತ್ತು 3
14. ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ (NGHM) ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. NGHM ಅನ್ನು 2023 ರಲ್ಲಿ ₹19,744 ಕೋಟಿಯ ವೆಚ್ಚದಲ್ಲಿ ಪ್ರಾರಂಭಿಸಲಾಗಿದೆ.
2. ಜೀವರಾಶಿ ಮತ್ತು ತ್ಯಾಜ್ಯ ಆಧಾರಿತ ಹಸಿರು ಹೈಡ್ರೋಜನ್ ಪೈಲಟ್ ಯೋಜನೆಗಳಿಗೆ ₹100 ಕೋಟಿ ‘Call for Proposals’ ಅನ್ನು BIRAC ಅನುಷ್ಠಾನಗೊಳಿಸುತ್ತದೆ.
3. SIGHT ಕಾರ್ಯಕ್ರಮ ಅಡಿಯಲ್ಲಿ ವಾರ್ಷಿಕ 5,000 MW ಎಲೆಕ್ಟ್ರೋಲೈಸರ್ ಉತ್ಪಾದನೆಗೆ ಪ್ರೋತ್ಸಾಹ ನೀಡಲಾಗಿದೆ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 2 ಮತ್ತು 3 ಮಾತ್ರ
C. 1 ಮತ್ತು 3 ಮಾತ್ರ
D. 1, 2 ಮತ್ತು 3
15. UNESCO ನರ-ತಂತ್ರಜ್ಞಾನ ನೈತಿಕ ಚೌಕಟ್ಟು ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. UNESCO ಚೌಕಟ್ಟು ‘ನರ-ಹಕ್ಕುಗಳು’ ಎಂಬ ಪರಿಕಲ್ಪನೆಯನ್ನು ಗುರುತಿಸುತ್ತದೆ.
2. ನರ-ತಂತ್ರಜ್ಞಾನವನ್ನು ರಾಜಕೀಯ ಪ್ರಭಾವಕ್ಕಾಗಿ ಬಳಸುವುದನ್ನು ಅನುಮತಿಸುತ್ತದೆ.
3. ಈ ಚೌಕಟ್ಟು 2025 ನವೆಂಬರ್ 12ರಿಂದ ಜಾರಿಗೆ ಬರುತ್ತದೆ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A. 1 ಮತ್ತು 2 ಮಾತ್ರ
B. 1 ಮತ್ತು 3 ಮಾತ್ರ
C. 2 ಮತ್ತು 3 ಮಾತ್ರ
D. 1, 2 ಮತ್ತು 3