Published on: March 18, 2026

ದತ್ತು ತಾಯಂದಿರಿಗೂ ಮಾತೃತ್ವ ರಜೆ: ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು

ದತ್ತು ತಾಯಂದಿರಿಗೂ ಮಾತೃತ್ವ ರಜೆ: ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು

ಸುದ್ದಿ – 3 ತಿಂಗಳಿಗಿಂತ ಮೇಲ್ಪಟ್ಟ ಮಕ್ಕಳನ್ನು ದತ್ತು ಪಡೆಯುವ ತಾಯಂದಿರಿಗೂ 12 ವಾರಗಳ ಮಾತೃತ್ವ ರಜೆ (Maternity Leave) ಸೌಲಭ್ಯವನ್ನು ಸುಪ್ರೀಂ ಕೋರ್ಟ್ ವಿಸ್ತರಿಸಿದೆ.

  • ಕಾಯ್ದೆ ರದ್ದು: ದತ್ತು ಪಡೆಯುವ ಮಗುವಿಗೆ ಕೇವಲ 3 ತಿಂಗಳ ವಯೋಮಿತಿ ನಿಗದಿಪಡಿಸಿದ್ದ ‘ಸಾಮಾಜಿಕ ಭದ್ರತಾ ಸಂಹಿತೆ 2020’ರ (Social Security Code 2020) ಸೆಕ್ಷನ್ 60(4) ಅನ್ನು ಅಸಂವಿಧಾನಿಕ ಹಾಗೂ ತಾರತಮ್ಯದಿಂದ ಕೂಡಿದೆ ಎಂದು ಪೀಠವು ರದ್ದುಪಡಿಸಿದೆ.
  • ಸಾಂವಿಧಾನಿಕ ಆಯಾಮ: ಜೈವಿಕ ಮತ್ತು ದತ್ತು ತಾಯಂದಿರ ನಡುವೆ ಭೇದಭಾವ ಮಾಡುವುದು ಹಾಗೂ ಮಗುವಿನ ವಯಸ್ಸಿನ ಆಧಾರದ ಮೇಲೆ ರಜೆ ನಿರಾಕರಿಸುವುದು ಸಂವಿಧಾನದ ವಿಧಿ 14 (ಸಮಾನತೆಯ ಹಕ್ಕು) ಮತ್ತು ವಿಧಿ 21 (ಜೀವಿಸುವ ಹಕ್ಕು) ರ ನೇರ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
  • ಪಿತೃತ್ವ ರಜೆ (Paternity Leave) ಸಲಹೆ: ಮಗುವಿನ ಪಾಲನೆಯಲ್ಲಿ ತಂದೆ ಮತ್ತು ತಾಯಿಯ ಸಮಾನ ಜವಾಬ್ದಾರಿಯನ್ನು ಎತ್ತಿಹಿಡಿದಿರುವ ಕೋರ್ಟ್, ಸಾಮಾಜಿಕ ಭದ್ರತಾ ಕ್ರಮವಾಗಿ ‘ಪಿತೃತ್ವ ರಜೆ’ಯನ್ನು ಜಾರಿಗೆ ತರುವಂತೆ ಕೇಂದ್ರ ಸರ್ಕಾರಕ್ಕೆ ಮಹತ್ವದ ಸಲಹೆ ನೀಡಿದೆ.