Published on: March 27, 2026
ಕರ್ನಾಟಕದ – ಸಾಂಸ್ಕೃತಿಕ ರಕ್ಷಣೆ ಮತ್ತು ಸಾಮಾಜಿಕ ನ್ಯಾಯ
ಕರ್ನಾಟಕದ – ಸಾಂಸ್ಕೃತಿಕ ರಕ್ಷಣೆ ಮತ್ತು ಸಾಮಾಜಿಕ ನ್ಯಾಯ
ಸುದ್ದಿ – ರಾಜ್ಯ ಸರ್ಕಾರವು 2026ರ ಬಜೆಟ್ ಅಧಿವೇಶನದಲ್ಲಿ ಪ್ರಾಚೀನ ಹಸ್ತಪ್ರತಿಗಳ ಸಂರಕ್ಷಣೆ, ಮರ್ಯಾದಾ ಹತ್ಯೆ ನಿಷೇಧ ಹಾಗೂ ವೃತ್ತಿ ತೆರಿಗೆ ಸರಳೀಕರಣಕ್ಕೆ ಸಂಬಂಧಿಸಿದ ಮಹತ್ವದ ಐತಿಹಾಸಿಕ ವಿಧೇಯಕಗಳನ್ನು ಅಂಗೀಕರಿಸಿದೆ.
ಸಮಗ್ರ ಹಿನ್ನೆಲೆ: ಸಾಂಸ್ಕೃತಿಕ ಇತಿಹಾಸದ ಅಮೂಲ್ಯ ದಾಖಲೆಗಳು ಅಳಿವಿನಂಚಿನಲ್ಲಿವೆ ಮತ್ತು ಅಂತರ್ಜಾತಿ ವಿವಾಹಗಳ ಮೇಲಿನ ಸಾಮಾಜಿಕ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಸಾಮಾಜಿಕ ಸುಧಾರಣೆ ಮತ್ತು ಪರಂಪರೆಯ ರಕ್ಷಣೆಗಾಗಿ ಈ ಕಟ್ಟುನಿಟ್ಟಿನ ಕಾನೂನುಗಳ ಅಗತ್ಯವಿತ್ತು.
ಪ್ರಮುಖ ಅಂಶಗಳು:
- ಕರ್ನಾಟಕ ಜ್ಞಾನ ಭಂಡಾರ ಹಸ್ತಪ್ರತಿ ವಿಧೇಯಕ: ತಾಳೆಗರಿ, ತಾಮ್ರಪತ್ರಗಳಂತಹ ಪುರಾತನ ಹಸ್ತಪ್ರತಿಗಳನ್ನು ಡಿಜಿಟಲೀಕರಣಗೊಳಿಸಲು ವಿಶೇಷ ಪ್ರಾಧಿಕಾರ ರಚನೆ (ವಾರ್ಷಿಕ 5 ಲಕ್ಷ ಪುಟಗಳ ಗುರಿ).
- ಇವ ನಮ್ಮವ ವಿಧೇಯಕ (ಮರ್ಯಾದಾ ಹತ್ಯೆ ತಡೆ): ಮರ್ಯಾದೆಯ ಹೆಸರಿನಲ್ಲಿ ನಡೆಯುವ ಹತ್ಯೆ, ಹಲ್ಲೆ ಮತ್ತು ಸಾಮಾಜಿಕ ಬಹಿಷ್ಕಾರಗಳ ಸಂಪೂರ್ಣ ನಿಷೇಧ.
- ವೃತ್ತಿ ತೆರಿಗೆ ತಿದ್ದುಪಡಿ: ಮಾಸಿಕ 25,000 ರೂ. ಗಿಂತ ಹೆಚ್ಚಿನ ಆದಾಯ ಹೊಂದಿರುವವರು ಮತ್ತು ವಿನಾಯಿತಿ ಪಡೆದ ಹಿರಿಯ ನಾಗರಿಕರು/ಸೈನಿಕರಿಗೆ ವಾರ್ಷಿಕ ರಿಟರ್ನ್ಸ್ ಸಲ್ಲಿಕೆಯಿಂದ ಕಡ್ಡಾಯ ವಿನಾಯಿತಿ.
ವಿಶ್ಲೇಷಣಾತ್ಮಕ ಆಯಾಮಗಳು:
- ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಭಾವ: ಇದು ತಾರತಮ್ಯ ರಹಿತ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಲಿದ್ದು, ಪ್ರಾಚೀನ ಜ್ಞಾನವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಲಿದೆ.
- ಕಾನೂನಾತ್ಮಕ ಆಯಾಮ: ‘ಇವ ನಮ್ಮವ’ ವಿಧೇಯಕವು ನೇರವಾಗಿ ಸಂವಿಧಾನದ 21ನೇ ವಿಧಿಯಡಿ ಖಾತರಿಪಡಿಸಲಾದ ‘ಜೀವಿಸುವ ಮತ್ತು ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಭೂತ ಹಕ್ಕನ್ನು’ ಎತ್ತಿಹಿಡಿಯುತ್ತದೆ.
ಪರಿಹಾರಗಳು ಮತ್ತು ಮುಂದಿನ ಹಾದಿ: * ಸರ್ವೋಚ್ಚ ನ್ಯಾಯಾಲಯದ ತೀರ್ಪು: ‘ಶಕ್ತಿ ವಾಹಿನಿ v/s ಭಾರತ ಒಕ್ಕೂಟ (2018)’ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಂತೆ, ಅಂತರ್ಜಾತಿ ವಿವಾಹವಾಗುವ ದಂಪತಿಗಳಿಗೆ ತಕ್ಷಣದ ಪೊಲೀಸ್ ರಕ್ಷಣೆ ಒದಗಿಸುವ ವ್ಯವಸ್ಥೆ ಮತ್ತು ತ್ವರಿತ ನ್ಯಾಯಾಲಯಗಳ (Fast-track courts) ಸ್ಥಾಪನೆ ಕಡ್ಡಾಯವಾಗಬೇಕು.
