Published on: March 18, 2026

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 2025: ಕನ್ನಡದ ಅಮರೇಶ ನುಗಡೋನಿಗೆ ಒಲಿದ ಗೌರವ

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 2025: ಕನ್ನಡದ ಅಮರೇಶ ನುಗಡೋನಿಗೆ ಒಲಿದ ಗೌರವ

ಸುದ್ದಿ –  ಪ್ರಸಿದ್ಧ ಸಾಹಿತಿ ಅಮರೇಶ ನುಗಡೋನಿ ಅವರ ದಾದಾ ಸೇರಿಸು ತಂದೆ’ ಎಂಬ ಸಣ್ಣಕಥೆಗಳ ಸಂಕಲನ ಕೃತಿಗೆ 2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

  • ಪ್ರಶಸ್ತಿಯ ಸ್ವರೂಪ: 24 ಭಾಷೆಗಳಲ್ಲಿ ಆಯ್ಕೆಯಾದ ಶ್ರೇಷ್ಠ ಕೃತಿಗಳ ಲೇಖಕರಿಗೆ ತಲಾ ₹1,00,000 ನಗದು, ತಾಮ್ರದ ಫಲಕ, ಶಾಲು ಮತ್ತು ಸ್ಮರಣಿಕೆಯನ್ನು ನೀಡಿ ಗೌರವಿಸಲಾಗುತ್ತದೆ.
  • ಭಾಷೆಗಳ ವ್ಯಾಪ್ತಿ: ಈ ಪ್ರಶಸ್ತಿಯನ್ನು ಭಾರತೀಯ ಸಂವಿಧಾನದ 8ನೇ ಅನುಸೂಚಿಯಲ್ಲಿ ಉಲ್ಲೇಖಿಸಲಾದ 22 ಭಾಷೆಗಳ ಜೊತೆಗೆ, ಇಂಗ್ಲಿಷ್ ಮತ್ತು ರಾಜಸ್ಥಾನಿ ಸೇರಿದಂತೆ ಒಟ್ಟು 24 ಭಾಷೆಗಳಿಗೆ ನೀಡಲಾಗುತ್ತದೆ.
  • ಐತಿಹಾಸಿಕ ಹಿನ್ನೆಲೆ: ಭಾರತೀಯ ಸಾಹಿತ್ಯ ಅಕಾಡೆಮಿಯನ್ನು 1954 ರಲ್ಲಿ ಸ್ಥಾಪಿಸಲಾಯಿತು. ಕನ್ನಡ ಭಾಷೆಗೆ ಮೊದಲ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯು 1955 ರಲ್ಲಿ ರಾಷ್ಟ್ರಕವಿ ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ (ಮಹಾಕಾವ್ಯ) ಕೃತಿಗೆ ಒಲಿದಿತ್ತು.

ಪ್ರಮುಖ ಪ್ರಶಸ್ತಿ ವಿಜೇತರ ಪಟ್ಟಿ (2025)

ಭಾಷೆ ಸಾಹಿತಿಯ ಹೆಸರು ಕೃತಿಯ ಹೆಸರು ಕೃತಿಯ ಪ್ರಕಾರ
ಕನ್ನಡ ಅಮರೇಶ ನುಗಡೋನಿ ದಾದಾ ಸೇರಿಸು ತಂದೆ ಸಣ್ಣಕಥೆಗಳ ಸಂಕಲನ
ಇಂಗ್ಲಿಷ್ ನವತೇಜ್ ಸರ್ನಾ ಕ್ರಿಮ್ಸನ್ ಸ್ಪ್ರಿಂಗ್ (Crimson Spring) ಕಾದಂಬರಿ
ಹಿಂದಿ ಮಮತಾ ಕಾಲಿಯಾ ಜೀತೇ ಜೀ ಅಲಹಾಬಾದ್ ಸಂಸ್ಮರಣೆ
ಸಂಸ್ಕೃತ ಸಾಧು ಭದ್ರೇಶ್ ದಾಸ್ ಪ್ರಸ್ಥಾನಚತುಷ್ಟಯೇ ಬ್ರಹ್ಮಘೋಷಃ ಕವನ ಸಂಕಲನ