Published on: March 18, 2026

ಭಾರತದಲ್ಲಿ ‘ಸರ್ವರಿಗೂ ಲಸಿಕೆ’: ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ (UIP)

ಭಾರತದಲ್ಲಿ ‘ಸರ್ವರಿಗೂ ಲಸಿಕೆ’: ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ (UIP)

ಸುದ್ದಿ –  ಭಾರತವು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ (UIP) ಅಡಿಯಲ್ಲಿ ಲಸಿಕೆ ನೀಡುವ ಮೂಲಕ ತನ್ನ ಜನಸಂಖ್ಯೆಯ ಸಾರ್ವತ್ರಿಕ ರೋಗನಿರೋಧಕತೆಯತ್ತ (Universal Immunization) ದಾಪುಗಾಲು ಹಾಕುತ್ತಿದೆ.

ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ (UIP) ಕುರಿತು

  • ಪ್ರಾರಂಭ: 1985 ರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಪ್ರಾರಂಭಿಸಲಾಯಿತು.
  • ಉದ್ದೇಶಗಳು: ಲಸಿಕಾ ವ್ಯಾಪ್ತಿಯನ್ನು ತ್ವರಿತವಾಗಿ ಹೆಚ್ಚಿಸುವುದು, ವಿಶ್ವಾಸಾರ್ಹ ಶೀತಲ ಸರಪಳಿ (Cold chain) ವ್ಯವಸ್ಥೆಯನ್ನು ಸ್ಥಾಪಿಸುವುದು ಮತ್ತು ಲಸಿಕೆ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವುದು.
  • ರೋಗಗಳ ವ್ಯಾಪ್ತಿ: ಡಿಫ್ತೀರಿಯಾ, ಪೋಲಿಯೊ, ಟೆಟಾನಸ್, ಕ್ಷಯ (Tuberculosis), ಹೆಪಟೈಟಿಸ್ ಬಿ, ದಡಾರ-ರುಬೆಲ್ಲಾ (Measles-Rubella) ಸೇರಿದಂತೆ 12 ಮಾರಣಾಂತಿಕ ರೋಗಗಳ ವಿರುದ್ಧ ರಕ್ಷಣೆ ಒದಗಿಸುತ್ತದೆ.

ಮಿಷನ್ ಇಂದ್ರಧನುಷ್

  • ಲಸಿಕೆ ಪಡೆಯದ ಅಥವಾ ಭಾಗಶಃ ಲಸಿಕೆ ಪಡೆದ ಮಕ್ಕಳು ಮತ್ತು ಗರ್ಭಿಣಿಯರನ್ನು ತಲುಪಲು 2015 ರಲ್ಲಿ ಇದನ್ನು ಪ್ರಾರಂಭಿಸಲಾಯಿತು. ತರುವಾಯ ನಗರ ಪ್ರದೇಶಗಳ ಮೇಲೆ ಹೆಚ್ಚಿನ ಗಮನಹರಿಸುವ ನಿಟ್ಟಿನಲ್ಲಿ ತೀವ್ರಗೊಳಿಸಿದ ಮಿಷನ್ ಇಂದ್ರಧನುಷ್’ (Intensified Mission Indradhanush) ಕಾರ್ಯಾಚರಣೆಗಳನ್ನು ಹಮ್ಮಿಕೊಳ್ಳಲಾಯಿತು.
  • ವಾಡಿಕೆಯ ಲಸಿಕಾ ಸೇವೆಗಳನ್ನು ಬಲಪಡಿಸುವ ಮೂಲಕ ಮತ್ತು ತಲುಪಲು ಕಷ್ಟಕರವಾದ ಜನಸಂಖ್ಯೆಯನ್ನು ಗುರಿಯಾಗಿಸಿಕೊಂಡು UIP ಅಡಿಯಲ್ಲಿ 90% ಕ್ಕಿಂತ ಹೆಚ್ಚು ಲಸಿಕಾ ವ್ಯಾಪ್ತಿಯನ್ನು ಸಾಧಿಸುವ ಗುರಿಯನ್ನು ಈ ಕಾರ್ಯಾಚರಣೆಗಳು ಹೊಂದಿವೆ.

ಡಿಜಿಟಲ್ ಬೆನ್ನೆಲುಬು

  • ಯುವಿನ್ (U-Win): ಇದು ಜನರು ತಮ್ಮ ವಸತಿ ಪ್ರದೇಶದ ಸಮೀಪವಿರುವ ಲಸಿಕಾ ಕೇಂದ್ರಗಳನ್ನು ಹುಡುಕಲು, ಆರೋಗ್ಯ ಕೇಂದ್ರಗಳಲ್ಲಿ ಲಸಿಕಾ ನೇಮಕಾತಿಗಳನ್ನು ನಿರ್ವಹಿಸಲು ಮತ್ತು ಲಸಿಕೆ ದಾಖಲೆಗಳನ್ನು ನಿರ್ವಹಿಸಲು ಸಹಾಯ ಮಾಡುವ ಡಿಜಿಟಲ್ ಅಪ್ಲಿಕೇಶನ್ (App) ಆಗಿದೆ.
  • ವಿನ್ (eVIN – Electronic Vaccine Intelligence Network): ಇದು ದೇಶದಾದ್ಯಂತ ಬಹು ಸ್ಥಳಗಳಲ್ಲಿ ನೈಜ ಸಮಯದಲ್ಲಿ ಲಸಿಕೆ ದಾಸ್ತಾನು ಮಟ್ಟಗಳು ಮತ್ತು ಶೇಖರಣಾ ತಾಪಮಾನವನ್ನು ಟ್ರ್ಯಾಕ್ ಮಾಡುವ ಅತ್ಯಾಧುನಿಕ ಸಾಫ್ಟ್‌ವೇರ್ ವೇದಿಕೆಯಾಗಿದೆ (Software platform).

UIP ಅಡಿಯಲ್ಲಿನ ಪ್ರಮುಖ ಸಾಧನೆಗಳು

  • ರೋಗ ನಿರ್ಮೂಲನೆ: ಭಾರತವು ಸಿಡುಬು (Smallpox), ಯವ್ಸ್ (Yaws), ತಾಯಿಯ ಮತ್ತು ನವಜಾತ ಶಿಶುವಿನ ಟೆಟಾನಸ್, ಮತ್ತು ಪೋಲಿಯೊವನ್ನು ಯಶಸ್ವಿಯಾಗಿ ನಿರ್ಮೂಲನೆ ಮಾಡಿದೆ.
  • ಸಂಪೂರ್ಣ ಲಸಿಕಾ ವ್ಯಾಪ್ತಿ: 2015 ರಲ್ಲಿ 62% ಇದ್ದ ಈ ಪ್ರಮಾಣವು 4% ಕ್ಕೆ (ಜನವರಿ 2026 ರ ಹೊತ್ತಿಗೆ) ಏರಿಕೆಯಾಗಿದೆ.
  • ಶೂನ್ಯಡೋಸ್ ಮಕ್ಕಳ ಪ್ರಮಾಣದಲ್ಲಿ ಇಳಿಕೆ: 2023 ರಲ್ಲಿ 11% ಇದ್ದ ಈ ಪ್ರಮಾಣವು 2024 ರಲ್ಲಿ 0.06% ಕ್ಕೆ ಇಳಿಕೆಯಾಗಿದೆ.
    • ಸೂಚನೆ: ವಾಡಿಕೆಯ ಲಸಿಕಾ ಸೇವೆಗಳ ಪ್ರವೇಶವಿಲ್ಲದ ಅಥವಾ ಎಂದಿಗೂ ಲಸಿಕೆ ತಲುಪದ ಮಕ್ಕಳನ್ನು ‘ಶೂನ್ಯ-ಡೋಸ್ ಮಕ್ಕಳು’ (Zero-dose children) ಎಂದು ವ್ಯಾಖ್ಯಾನಿಸಲಾಗುತ್ತದೆ.

ಜಾಗತಿಕ ಪೂರೈಕೆದಾರ: ಭಾರತವು ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದಕ ರಾಷ್ಟ್ರವಾಗಿದ್ದು, ವಿಶ್ವದ ಸುಮಾರು 60% ರಷ್ಟು ಲಸಿಕೆಗಳನ್ನು ಪೂರೈಸುತ್ತಿದೆ.