Published on: June 23, 2025
ಬಿ-2 ಸ್ಟೆಲ್ತ್ ಬಾಂಬರ್
ಬಿ-2 ಸ್ಟೆಲ್ತ್ ಬಾಂಬರ್
ಸುದ್ದಿಯಲ್ಲಿ ಏಕಿದೆ? ಇಸ್ರೇಲ್ ಮತ್ತು ಇರಾನ್ ನಡುವಿನ ನಡೆಯುತ್ತಿರುವ ಸೇನಾ ಸಂಘರ್ಷದ ನಡುವೆ ಅಮೆರಿಕವು ಇರಾನ್‌ನ ಫೋರ್ಡೋ, ನಟಾಂಜ್ ಮತ್ತು ಎಸ್ಫಹಾನ್ ಸೇರಿದಂತೆ ಮೂರು ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ಬಾಂಬ್ ದಾಳಿ ನಡೆಸಿದೆ. ಈ ಕಾರ್ಯಾಚರಣೆಯಲ್ಲಿ ಅಮೆರಿಕದ ಬಿ-2 ಸ್ಟೆಲ್ತ್ ಬಾಂಬರ್‌ಗಳನ್ನು ನಿಯೋಜಿಸಲಾಗಿತ್ತು.
ಮುಖ್ಯಾಂಶಗಳು
- ಜನರಲ್ ಎರಿಕ್ ಕುರಿಲ್ಲಾ ನೇತೃತ್ವದಲ್ಲಿ ಯುಎಸ್ ಸೆಂಟ್ರಲ್ ಕಮಾಂಡ್ ಇರಾನ್‌ನ ಮೂರು ಪರಮಾಣು ಸೌಲಭ್ಯಗಳ ಮೇಲೆ ಉದ್ದೇಶಪೂರ್ವಕ ಮತ್ತು ನಿಖರವಾದ ದಾಳಿಯಾದ ಆಪರೇಷನ್ ಮಿಡ್‌ನೈಟ್ ಹ್ಯಾಮರ್ ಅನ್ನು ನಡೆಸಿತು.
- 125 ಕ್ಕೂ ಹೆಚ್ಚು ವಿಮಾನಗಳು ಮತ್ತು ಸುಧಾರಿತ ಶಸ್ತ್ರಾಸ್ತ್ರಗಳ ನೇತೃತ್ವದಲ್ಲಿ ಈ ಒಪೆರಶನ ಅನ್ನು ನಡೆಸಲಾಯಿತು
ಮುಖ್ಯಾಂಶಗಳು: ಆರು ಬಿ -12 ಬಾಂಬರ್‌ಗಳನ್ನು ಬಳಸಿ ಒಂದು ಡಜನ್ ಜಿಬಿಯು -57 ಎ / ಬಿ ಬೃಹತ್ ಆರ್ಡ್‌ನೆನ್ಸ್ ಪೆನೆಟ್ರೇಟರ್ (ಎಂಒಪಿ) ಬಾಂಬ್‌ಗಳಿಂದ ದಾಳಿ ನಡೆಸಿತು. ಇದನ್ನು “ಬಂಕರ್ ಬಸ್ಟರ್ಸ್” ಎಂದು ಕರೆಯಲಾಗುತ್ತದೆ.
ಜಿಬಿಯು -57 ಬಾಂಬ್, ಸ್ಫೋಟಗೊಳ್ಳುವ ಮೊದಲು 200 ಅಡಿ (60 ಮೀಟರ್) ಆಳದ ವರೆಗೆ ಭೇದಿಸಿಕೊಂಡು ಹೋಗುವಂತೆ ವಿನ್ಯಾಸಗೊಳಿಸಲಾಗಿದೆ.
ಬಿ-2 ಸ್ಪಿರಿಟ್ ಸ್ಟೆಲ್ತ್ ಬಾಂಬರ್
- B-2 ಸ್ಪಿರಿಟ್ ಎಂಬುದು ನಾರ್ತ್ರೋಪ್ ಗ್ರಮ್ಮನ್ ಅಭಿವೃದ್ಧಿಪಡಿಸಿದ ಅಮೇರಿಕನ್ ಸ್ಟೆಲ್ತ್ ಬಾಂಬರ್ ವಿಮಾನವಾಗಿದೆ. ಇದನ್ನು ಸಾಮಾನ್ಯವಾಗಿ B-2 ಬಾಂಬರ್ ಎಂದು ಕರೆಯಲಾಗುತ್ತದೆ.
- ಇದು GBU-57 ಮ್ಯಾಸಿವ್ ಆರ್ಡನೆನ್ಸ್ ಪೆನೆಟ್ರೇಟರ್ (MOP) ಬಾಂಬರ್ ಅನ್ನು ಹೊತ್ತೊಯ್ಯಬಲ್ಲದು. GBU-57 ಬಾಂಬ್‌ಗಳನ್ನು ಸಾಗಿಸುವ ಸಾಮರ್ಥ್ಯವಿರುವ ಏಕೈಕ ವಿಮಾನಗಳಾಗಿವೆ.
- ಈ ವಿಮಾನದ ಬೆಲೆ ತಲಾ $2.1 ಬಿಲಿಯನ್ ಆಗಿದ್ದು, ಇದು ವಿಶ್ವದ ಅತ್ಯಂತ ದುಬಾರಿ ಮಿಲಿಟರಿ ವಿಮಾನವಾಗಿದೆ.
- ಇದು ಹೆಚ್ಚು ಬಲಯುತವಾದ ಹಾಗೂ ಹೆಚ್ಚು ಸುರಕ್ಷಿತವಾದ ಭೂಗತ ಕೇಂದ್ರಗಳನ್ನು ಅಥವಾ ವ್ಯವಸ್ಥೆಗಳನ್ನು ನಾಶಮಾಡಲು ವಿನ್ಯಾಸಗೊಳಿಸಲಾದ 30,000 ಪೌಂಡ್‌ಗಳ ಬೃಹತ್ ಬಂಕರ್-ಬಸ್ಟರ್ ಬಾಂಬ್ ಆಗಿದೆ.
- ಮೊದಲ ಹಾರಾಟ: 1989 ರಲ್ಲಿ
- ಇದರ ಆಕಾರ ಮತ್ತು ವಿಶೇಷ ಲೇಪನವು ಶತ್ರು ಟ್ರ್ಯಾಕಿಂಗ್ ವ್ಯವಸ್ಥೆಗಳಿಗೆ ಬಹುತೇಕ ಅಗೋಚರವಾಗಿರುತ್ತದೆ.
- 18 ಟನ್‌ಗಳಷ್ಟು ಶಸ್ತ್ರಾಸ್ತ್ರಗಳನ್ನು ಸಾಗಿಸುವ ಸಾಮರ್ಥ್ಯವಿದೆ.
- B-2 ಬಾಂಬರ್ ಇಂಧನ ತುಂಬುವ ಅಗತ್ಯವಿಲ್ಲದೆ ಸುಮಾರು 11,000 ಕಿಲೋಮೀಟರ್ ದೂರದ ವರೆಗೆ ಹಾರಬಲ್ಲದು. ಯುದ್ಧ ಪಡೀತ ಪ್ರದೇಶದಲ್ಲಿ ಅದು ಆಕಾಶದಲ್ಲಿಯೇ ಇಂಧನ ತುಂಬಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ.
- ಕೇವಲ ಇಬ್ಬರು ಪೈಲಟ್ ಸಿಬ್ಬಂದಿಯಿಂದ ನಿರ್ವಹಿಸಲ್ಪಡದೆ
- ಬಿ-2 ಅನ್ನು ಕೊಸೊವೊ ಯುದ್ಧ (1999), ಅಫ್ಘಾನಿಸ್ತಾನ (2001), ಇರಾಕ್ ಯುದ್ಧ (2003) ಮತ್ತು ಲಿಬಿಯಾ (2011) ಗಳಲ್ಲಿ ಬಳಸಲಾಯಿತು.
