Published on: July 10, 2025

‘ಸುರಕ್ಷಿತ ಪ್ರಯಾಣ: ಇಸ್ರೊ ಪ್ರಯತ್ನ ಗಮನಾರ್ಹ’ ಸಾಧನೆ

‘ಸುರಕ್ಷಿತ ಪ್ರಯಾಣ: ಇಸ್ರೊ ಪ್ರಯತ್ನ ಗಮನಾರ್ಹ’ ಸಾಧನೆ

  • ‘ಆ್ಯಕ್ಸಿಯಂ–4’ ಮಿಷನ್‌ನ ಭಾಗವಾಗಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ (ಐಎಸ್‌ಎಸ್) ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ತಮ್ಮ ಸುರಕ್ಷಿತ ಪ್ರಯಾಣದಲ್ಲಿ ಇಸ್ರೊ ತಂಡದ ಪಾತ್ರ ಹಾಗೂ ಪ್ರಯತ್ನ ಗಮನಾರ್ಹವಾಗಿತ್ತು ಎಂದಿದ್ದಾರೆ.• ಶುಕ್ಲಾ ಅವರು ಇಸ್ರೊ ಅಧ್ಯಕ್ಷ ವಿ.ನಾರಾಯಣನ್ ಅವರಿಗೆ ಕರೆ ಮಾಡಿದ್ದರು ಎಂದು ಇಸ್ರೊ ತಿಳಿಸಿದೆ.
  • ನಾರಾಯಣನ್ ಅವರು ಶುಕ್ಲಾ ಅವರ ಯೋಗಕ್ಷೇಮದ ಬಗ್ಗೆ ವಿಚಾರಿಸಿದ್ದಲ್ಲದೆ, ಐಎಸ್‌ಎಸ್‌ನಲ್ಲಿ ನಡೆಸುತ್ತಿರುವ ವಿವಿಧ ವೈಜ್ಞಾನಿಕ ಪ್ರಯೋಗಗಳು ಹಾಗೂ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ.
  • ಶುಕ್ಲಾ ಅವರು ಭೂಮಿಗೆ ಮರಳಿದ ಬಳಿಕ ಎಲ್ಲ ಪ್ರಯೋಗಗಳು ಹಾಗೂ ಚಟುವಟಿಕೆಗಳನ್ನು ನಿಖರವಾಗಿ ದಾಖಲಿಸಲಾಗುತ್ತದೆ. ಇದು ಭಾರತದ ಮಾನವಸಹಿತ ಗಗನಯಾನ ಕಾರ್ಯಕ್ರಮವನ್ನು ಮತ್ತಷ್ಟು ಸುಧಾರಿಸಲು ಒಳನೋಟಗಳನ್ನು ನೀಡಲಿದೆ ಎಂದು ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯೂ ಆದ ನಾರಾಯಣನ್ ತಿಳಿಸಿದ್ದಾರೆ.
  • ಇಸ್ರೊ ಪ್ರಕಾರ, ಗಗನಯಾನಿಗಳನ್ನೊಳಗೊಂಡ ನೌಕೆಯನ್ನು ಕೆಳ ಭೂಕಕ್ಷೆಗೆ ಉಡಾಯಿಸುವ ಭಾರತದ ಸಾಮರ್ಥ್ಯವನ್ನು ಪ್ರದರ್ಶಿಸುವ ಗುರಿ ಹೊಂದಲಾಗಿದೆ. ಈ ಕಾರ್ಯಾಚರಣೆ ಯಿಂದ ಪಡೆಯಲಿರುವ ಜ್ಞಾನ ಹಾಗೂ ಅನುಭವವು ಅದರ ಯಶಸ್ಸಿಗೆ ಕಾರಣವಾಗುತ್ತದೆ. ಇಸ್ರೊ–ಆ್ಯಕ್ಸಿಯಂ ಅಂತರಿಕ್ಷಯಾನ ಒಪ್ಪಂದದಡಿ ಶುಕ್ಲಾ ಅವರ ‘ಐಎಸ್‌ಎಸ್ ಮಿಷನ್’ ಕಾರ್ಯಗತಗೊಂಡಿದೆ.