Published on: July 10, 2025
ಹಠಾತ್ ಸಾವು ಇನ್ನು ‘ಅಧಿಸೂಚಿತ ಕಾಯಿಲೆ’
ಹಠಾತ್ ಸಾವು ಇನ್ನು ‘ಅಧಿಸೂಚಿತ ಕಾಯಿಲೆ’
‘ಅಧಿಸೂಚಿತ ಕಾಯಿಲೆ’ ಎಂದರೇನು?
- ಕಾನೂನಿನ ಪ್ರಕಾರ ಸರ್ಕಾರಕ್ಕೆ ವರದಿ ಮಾಡಬೇಕಾದ ಕಾಯಿಲೆಯನ್ನು ‘ಅಧಿಸೂಚಿತ ಕಾಯಿಲೆ’ ಎಂದು ಕರೆಯಲಾಗುತ್ತದೆ.
• ಹಠಾತ್ ಸಾವನ್ನು ‘ಅಧಿಸೂಚಿತ ಕಾಯಿಲೆ’ ಎಂದು ಘೋಷಿಸಿರುವುದರಿಂದ ರಾಜ್ಯದ ಎಲ್ಲ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಕೇಂದ್ರಗಳು ಶಂಕಿತ ಮತ್ತು ದೃಢಪಟ್ಟ ಪ್ರಕರಣಗಳನ್ನು ಆರೋಗ್ಯ ಇಲಾಖೆಗೆ ಕಡ್ಡಾಯವಾಗಿ ವರದಿ ಮಾಡಬೇಕಿದೆ - ರಾಜ್ಯದಲ್ಲಿ ಹಠಾತ್ ಸಾವನ್ನು ಇನ್ನು ಮುಂದೆ ‘ಅಧಿಸೂಚಿತ ಕಾಯಿಲೆ’ ಎಂದು ಪರಿಗಣಿಸಲು ಮತ್ತು ಆಸ್ಪತ್ರೆಯಿಂದ ಹೊರಗೆ ಹೃದಯಾಘಾತದಿಂದ ಮೃತಪಟ್ಟವರ ಮರಣೋತ್ತರ ಪರೀಕ್ಷೆ ಕಡ್ಡಾಯಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
• ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ. ಕೆ.ಎಸ್. ರವೀಂದ್ರನಾಥ್ ನೇತೃತ್ವದ ತಾಂತ್ರಿಕ ಸಲಹಾ ಸಮಿತಿ ಸಲ್ಲಿಸಿರುವ ವರದಿಯಲ್ಲಿರುವ ಶಿಫಾರಸುಗಳ ಆಧಾರದಲ್ಲಿ ತೆಗೆದುಕೊಂಡಿರುವ ನಿರ್ಧಾರಗಳ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸೋಮವಾರ ಮಾಹಿತಿ ನೀಡಿದರು.
• ತಾಂತ್ರಿಕ ಸಲಹಾ ಸಮಿತಿಯ ವರದಿ ಸ್ವೀಕರಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್, ‘ಯುವ ವರ್ಗದಲ್ಲಿ ಹೃದಯಾಘಾತ, ಹಠಾತ್ ಸಾವು ಸಂಭವಿಸುತ್ತಿರುವ ಕಾರಣ, ಮುಂದಿನ ಶೈಕ್ಷಣಿಕ ವರ್ಷದಿಂದ ಹೃದಯಾಘಾತ ಹಾಗೂ ಹೃದಯದ ಆರೋಗ್ಯ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ವಿಚಾರವನ್ನು ಪಠ್ಯಪುಸ್ತಕದಲ್ಲಿ ಅಳವಡಿಸಲು ಚಿಂತನೆ ನಡೆದಿದೆ. ತಜ್ಞರ ಸಮಿತಿಯ ಶಿಫಾರಸಿನಂತೆ ಕೈಗೊಳ್ಳಲಿರುವ ಎಲ್ಲ ಕ್ರಮಗಳ ಕುರಿತು ಮುಖ್ಯಮಂತ್ರಿ ಜೊತೆ ಸಮಾಲೋಚನೆ ನಡೆಸಿ ಮುಂದುವರಿಯಲಾಗುವುದು’ ಎಂದರು. - ಆರೋಗ್ಯ ಇಲಾಖೆಯ ತೀರ್ಮಾನ:
• ಪುನೀತ್ ರಾಜ್‌ಕುಮಾರ್ ‘ಹೃದಯ ಜ್ಯೋತಿ’ ಯೋಜನೆ ಎಲ್ಲ ತಾಲ್ಲೂಕು ಆಸ್ಪತ್ರೆಗಳಿಗೆ ವಿಸ್ತರಣೆ
• ವರ್ಷಕ್ಕೊಮ್ಮೆ ಸರ್ಕಾರಿ ನೌಕರರು ಮತ್ತು ಗುತ್ತಿಗೆ ನೌಕರರಿಗೂ ಕನಿಷ್ಠ ಆರೋಗ್ಯ ತಪಾಸಣೆಗೆ ವ್ಯವಸ್ಥೆ
• ಖಾಸಗಿ ಕಂಪನಿ, ಕಾರ್ಖಾನೆ, ಉದ್ದಿಮೆಗಳ ನೌಕರರಿಗೆ ವರ್ಷಕ್ಕೊಮ್ಮೆ ಯಾದರೂ ಆರೋಗ್ಯ ತಪಾಸಣೆಗೆ ನಿರ್ದೇಶನ
• 15 ವರ್ಷದ ಶಾಲಾ ಮಕ್ಕಳಿಗೆ ವರ್ಷಕ್ಕೊಮ್ಮೆ ಇಲಾಖೆಯಿಂದಲೇ ಆರೋಗ್ಯ ತಪಾಸಣೆ
• ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲಾ ಪಠ್ಯದಲ್ಲಿ ಹೃದಯ ಸಂಬಂಧಿ ಪಾಠ ಅಳವಡಿಕೆ.
