Published on: June 11, 2022

ಎಲೆಕ್ಟ್ರಿಕ್ ವಾಹನಗಳ ಜಾರ್ಜಿಂಗ್ ಕೇಂದ್ರ

ಎಲೆಕ್ಟ್ರಿಕ್ ವಾಹನಗಳ ಜಾರ್ಜಿಂಗ್ ಕೇಂದ್ರ

ಸುದ್ದಿಯಲ್ಲಿ ಏಕಿದೆ?

ಹೆದ್ದಾರಿಗಳಲ್ಲಿ ಚಾರ್ಜಿಂಗ್ ಸ್ಟೇಷನ್ಗಳನ್ನು ಸ್ಥಾಪಿಸಲು ಇಂಧನ ಇಲಾಖೆಯು ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ.

ಮುಖ್ಯಾಂಶಗಳು

  • ಬೆಸ್ಕಾಂ ಪ್ರಧಾನ ಕಚೇರಿಯಲ್ಲಿ ಕರ್ನಾಟಕ ಇವಿ ಜಾಗೃತಿ ಪೋರ್ಟಲ್ ಮತ್ತು ಬೆಂಗಳೂರು ನಗರವನ್ನು ಜಾಗತಿಕ ಇವಿ ವಲಯವನ್ನಾಗಿ ಪರಿವರ್ತಿಸುವ ದಿಕ್ಸೂಚಿ ವರದಿ ಬಿಡುಗಡೆ ಮಾಡಲಾಯಿತು.
  • ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಹೆಚ್ಚು ಚಾರ್ಜಿಂಗ್ ಸೆಂಟರ್ ತೆರೆಯಲು ಪ್ರೋತ್ಸಾಹಿಸ ಬೇಕು. ಈ ನಿಟ್ಟಿನಲ್ಲಿ ಇಂಧನ ಇಲಾಖೆ ವತಿಯಿಂ ದ ಜೂ.24 ರಿಂದ 30ರ ವರೆಗೂ ಒಂದು ಸಾವಿರಕ್ಕೂ ಹೆಚ್ಚು ಎಲೆಕ್ಟ್ರಿಕ್ ಚಾರ್ಜಿಂಗ್ ಸೆಂಟರ್ಗಳ ಪ್ರಾರಂಭಿಸಿ, ಮೂರುವರೆ ಸಾವಿರ ಎಲೆಕ್ಟ್ರಿಕ್ ಪ್ಲಗ್ ಗಳನ್ನು ಒದಗಿಸಲಾಗುವುದು.

ಹಿನ್ನೆಲೆ

  • ದಿನೆ-ದಿನೇ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗುತ್ತಿರುವ ಇಂದಿನ ಸಂದರ್ಭದಲ್ಲಿ ಇವಿಗಳಿಗೆ ಬೇಕಾಗಿರುವ ಮೂಲಭೂತ ಸೌಕರ್ಯವನ್ನು ಇಂಧನ ಇಲಾಖೆಯಿಂದ ಒದಗಿಸಿಕೊಡುವ ಹಿನ್ನೆಲೆ ರಾಜ್ಯಾದ್ಯಂತ ಚಾರ್ಜಿಂಗ್ ಸೆಂಟರ್ಗಳ ಆರಂಭದ ಅಭಿಯಾನ ಆರಂಭವಾಗಲಿದೆ.

ಅಭಿಯಾನದ ಕುರಿತು

  • ಈ ಅಭಿಯಾನದ ಮೊದಲ ಹಂತದಲ್ಲಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಎಲೆಕ್ಟ್ರಿಕ್ ಚಾರ್ಜಿಂಗ್ ಕೇಂದ್ರಗಳನ್ನು ಆರಂಭಿಸುವುದು. ಎರಡನೇ ಹಂತದಲ್ಲಿ ಪ್ರವಾಸೋದ್ಯಮದ ಸ್ಥಳಗಳಲ್ಲಿ ಕೇಂದ್ರಗಳಲ್ಲಿ, ಮೂರನೇ ಹಂತದಲ್ಲಿ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಅವಶ್ಯಕತೆಯಿರುವ ಸ್ಥಳಗಳಲ್ಲಿ ಚಾರ್ಜಿಂಗ್ ಸೆಂಟರ್ ನಿರ್ಮಿಸಲಾಗುವುದು.
  • ಎಲ್ಲಾ ಸರ್ಕಾರಿ ಇಲಾಖೆಗಳು ಎಲೆಕ್ಟ್ರಿಕ್ ವಾಹನ ಬಳಸುವುದನ್ನು ಖಚಿತಪಡಿಸಿಕೊಳ್ಳಲು ಕೆಲಸಗಳು ಮುನ್ನಡೆಯುತ್ತಿವೆ. ಈ ಕುರಿತು ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ ಅನುಮೋದನೆಗಾಗಿ ಮುಖ್ಯಮಂತ್ರಿಗಳಿಗೆ ಕಳುಹಿಸಲಾಗಿದೆ.
  • ಈಗ ಪ್ರಾರಂಭವಾಗುವ ವಾಹನಗಳಂತೆಯೇ ಗುತ್ತಿಗೆ ಆಧಾರದ ಮೇಲೆ ಎಲೆಕ್ಟ್ರಿಕ್ ವಾಹನಗಳ ತರಲಾಗುವುದು. ವಾಹನಗಳನ್ನು ಚಾರ್ಜ್ ಮಾಡುವವರಿಗೆ ವಿದ್ಯುತ್ ಮತ್ತು ಬಾಡಿಗೆ ವೆಚ್ಚ ಹೊರತುಪಡಿಸಿ ಯಾವುದೇ ಸೇವಾ ಶುಲ್ಕ ವಿಧಿಸುತ್ತಿಲ್ಲ. ಪ್ರಸ್ತುತ ಬೆಂಗಳೂರಿನಲ್ಲಿ 136 ಚಾರ್ಜಿಂಗ್ ಸ್ಟೇಷನ್ಗಳಿದ್ದು, ಒಂದು ತಿಂಗಳ ಅವಧಿಯಲ್ಲಿ 200 ಚಾರ್ಜಿಂಗ್ ಸ್ಟೇಷನ್ಗಳು ಬರಲಿವೆ.

ಉದ್ದೇಶ

  • ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಹೆಚ್ಚು ಚಾರ್ಜಿಂಗ್ ಸೆಂಟರ್ ತೆರೆಯಲು ಪ್ರೋತ್ಸಾಹಿಸ ಬೇಕು. ಜುಲೈ 30ರೊಳಗೆ 3200ಕ್ಕೂ ಹೆಚ್ಚು ಚಾರ್ಜಿಂಗ್ ಪ್ಲಗ್ಗಳನ್ನು ಇಡೀ ರಾಜ್ಯಾದ್ಯಂತ ಮಾಡಿ, ದೇಶದಲ್ಲಿ ಕರ್ನಾಟಕವೇ ಹೆಚ್ಚಿನ ಚಾರ್ಜಿಂಗ್ ಕೇಂದ್ರಗಳನ್ನು ಹೊಂದಿರುವ ರಾಜ್ಯವಾಗಬೇಕೆಂಬ ನಿಟ್ಟಿನಲ್ಲಿ ಅವಶ್ಯಕ ತಯಾರಿ ಮಾಡಿಕೊಳ್ಳಲಾಗುತ್ತಿದೆ.

ಇವಿ ಜಾಗೃತಿ ಪೋರ್ಟಲ್

  • ವಿದ್ಯುತ್ಚಾಲಿತ ವಾಹನ ಬಳಕೆ ಉತ್ತೇಜನಕ್ಕೆ ಇವಿ ಜಾಗೃತಿ ಪೋರ್ಟಲ್ಗೆ (www.evkarnataka.co.in) ಚಾಲನೆ ನೀಡಲಾಗಿದೆ. ಸಾರ್ವಜನಿಕರು ರಾಜ್ಯ ಸರ್ಕಾರದ ಇವಿ ನೀತಿ, ರಾಜ್ಯದಲ್ಲಾಗುವ ಇವಿ ಸಂಬಂಧಿತ ಬೆಳವಣಿಗೆಗಳು, ಇವಿ-ಸ್ಟಾರ್ಚ್ ಅಪ್, ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಪೋರ್ಟಲ್ನಲ್ಲಿ ಮಾಹಿತಿ ಪಡೆಯಬಹುದು. ಗ್ರಾಹಕರು ಎಲೆಕ್ಟ್ರಿಕ್ ವಾಹನ ಖರೀದಿಸಿದರೆ ಸಿಗುವ ಸರಕಾರದ ಸಹಾಯಧನ, ಚಾರ್ಜಿಂಗ್ ಸ್ಟೇಷನ್ಗಳ ವ್ಯವಸ್ಥೆ ಬಗ್ಗೆ ಮಾಹಿತಿ ಸಿಗಲಿದೆ.