Published on: August 9, 2022
ಅಮೆರಿಕದ ಗಾಯಕಿ ಮೇರಿ ಮಿಲಬೆನ್ ಅತಿಥಿ
ಅಮೆರಿಕದ ಗಾಯಕಿ ಮೇರಿ ಮಿಲಬೆನ್ ಅತಿಥಿ
ಸುದ್ದಿಯಲ್ಲಿ ಏಕಿದೆ?
ಭಾರತದ 75ನೇ ಸ್ವಾತಂತ್ರ್ಯೋತ್ಸವಕ್ಕೆ ಅತಿಥಿಯಾಗಿ ಆಫ್ರಿಕ ಮೂಲದ ಅಮೆರಿಕದ ಹಾಡುಗಾರ್ತಿ ಮೇರಿ ಮಿಲಾಬೆನ್ ಅವರು ಆಗಮಿಸಲಿದ್ದಾರೆ.
ಮುಖ್ಯಾಂಶಗಳು
- ರಾಷ್ಟ್ರಗೀತೆ ‘ಜನ ಗಣ ಮನ’ ಮತ್ತು ಭಕ್ತಿ ಗೀತೆ ‘ಓಂ ಜೈ ಜಗದೀಶ್ ಹರೇ’ ಗೀತೆಗಳ ಮೂಲಕ ಪರಿಚಿತರಾಗಿರುವ ಮಿಲಾಬೆನ್ ಅವರನ್ನು ಭಾರತೀಯ ಸಾಂಸ್ಕೃತಿಕ ಸಂಬಂಧಿ ಕೌನ್ಸಿಲ್ (ಐಸಿಸಿಆರ್) ಅತಿಥಿಯಾಗಿ ಆಹ್ವಾನಿಸಿದೆ.
- ‘1959ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಡಾ. ಮಾರ್ಟಿನ್ ಲೂಥರ್ ಕಿಂಗ್ ಅವರ ಸ್ಮರಣಾರ್ಥ, 75ನೇ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶ ಲಭಿಸಿದೆ.
- ಮಿಲಾಬೆನ್ ಅವರು ಸ್ವಾತಂತ್ರ್ಯೋತ್ಸವಕ್ಕೆ ಐಸಿಸಿಆರ್ ಆಹ್ವಾನಿಸುತ್ತಿರುವ ಮೊದಲ ಅಮೆರಿಕದ ಕಲಾವಿದೆಯಾಗಿದ್ದಾರೆ. 40 ವರ್ಷದ ಮಿಲಾಬೆನ್ ಅವರು ಅಮೆರಿಕವನ್ನು ಪ್ರತಿನಿಧಿಸುತ್ತಿರುವ ಅಧಿಕೃತ ಅತಿಥಿಯಾಗಿದ್ದಾರೆ.
-
ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡುತ್ತಿರುವುದರಿಂದ ಅತ್ಯಂತ ಖುಷಿಯಾಗಿದ್ದೇನೆ. ಬೇರೆ ರಾಷ್ಟ್ರಗಳಿಗೆ ನಾನೊಬ್ಬ ಪ್ರವಾಸಿಯಾಗಿ ಹೋಗಬಹುದು, ಆದರೆ ಭಾರತಕ್ಕೆ ನಾನು ಯಾತ್ರಾರ್ಥಿಯಾಗಿ ಬಂದಿದ್ದೇನೆ- ಎಂಬ ಮಾರ್ಟಿನ್ ಲೂಥರ್ ಮಾತುಗಳು ನೆನಪಾಗುತ್ತಿವೆ ಎಂದು ಮಿಲಾಬೆನ್ ಹೇಳಿದ್ದಾರೆ.